

Viral Video: ಈಗಿನ ಕಾಲದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವಿಷಯಗಳು ಕ್ಷಣಾರ್ಧದಲ್ಲಿ ಈಡೀ ಜಗತ್ತಿಗೆ ತಲುಪುತ್ತದೆ. ಕೆಲವೊಮ್ಮೆ ವಧು-ವರರು ಅಥವಾ ಮುದುವೆ ಪಾರ್ಟಿಗೆ ಸಂಬಂಧಿಸಿದ ಅನೇಕ ತಮಾಷೆಯ ವಿಡಿಯೋಗಳು ವೈರಲ್ ಆಗಿ ಜನರನ್ನು ರಂಜಿಸುತ್ತದೆ. ಇನ್ನೂ ಕೆಲವೊಮ್ಮೆ ವೇದಿಕೆಯಲ್ಲಿ ವಧು-ವರರ ನೃತ್ಯ ವೈರಲ್ ಆಗುತ್ತದೆ, ಅದರ ಜೊತೆಗೆ ಕೆಲವೊಮ್ಮೆ ಮಂಟಪದಲ್ಲಿ ವಧು-ವರರು ಪರಸ್ಪರ ಜಗಳವಾಡುವ ವೀಡಿಯೊ ವೈರಲ್ ಆಗಿರುವುದುಂಟು. ಅದೇ ರೀತಿ ಈಗ ವೈರಲ್ ಆಗಿರುವ ವಿಡಿಯೋ ಏನು ಅಂದ್ರೆ ಹಾರ ಹಾಕುವ ವಿಷಯಕ್ಕೆ ವಧುವವರು ಪರಸ್ಪರ ಜಗಳವಾಡಿ ಕಿತ್ತಾಡಿದ್ದಾರೆ.
ಮದುವೆ ವೇದಿಕೆಯ ಮೇಲೆ ವಧು-ವರರು ಮಾಲೆ ಹಾಕುವಾಗ ಹಾಗೂ ಲಡ್ಡುತಿನ್ನಿಸುವಾಗ ಪರಸ್ಪರ ಕೋಪಗೊಂಡು, ಜಗಳವಾಡಿದ ಘಟನೆ ಉತ್ತರ ಪ್ರದೇಶದ ಲಲಿತಪುರದಲ್ಲಿ ನಡೆದಿದೆ ಎನ್ನಲಾಗಿದೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇಲ್ಲಿದೆ ನೋಡಿ ವಿಡಿಯೋ
ವೈರಲ್ ಆಗಿರುವ ವಿಡಿಯೋದಲ್ಲಿ, ವಧು-ವರರು ವೇದಿಕೆಯ ಮೇಲೆ ನಿಂತಿದ್ದು ಮದುವೆಯ ಶಾಸ್ತ್ರ ಪ್ರಾರಂಭವಾದ ನಂತರ, ಮೊದಲು ವಧು ವರನ ಮೇಲೆ ಹಾರವನ್ನು ಹಾಕುತ್ತಾಳೆ, ಆದರೆ ವರ ಹಾರವನ್ನು ಎಸೆಯುವಂತೆ ಹಾಕಿದ್ದಕ್ಕೆ ವಧು ಕೋಪಗೊಂಡು ಹಾರವನ್ನು ವೇದಿಕೆಗೆ ಮೇಲೆ ಎಸೆಯುತ್ತಾಳೆ. ನಂತರ ಲಡ್ಡು ತಿನ್ನಿಸುವಾಗಲೂ ಜಗಳವಾಯಿತು. ವಧು ಲಡ್ಡು ತಿಂದು ಉಗುಳಿದ್ದಕ್ಕೆ ವರ ಆಕೆಯ ಬಾಯಲ್ಲಿ ಲಡ್ಡು ತುರುಕಿದ್ದಾನ. ಈ ವಿಡಿಯೋಗೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ವೀಡಿಯೊವನ್ನು @gharkekalesh ಹೆಸರಿನ ಅಕೌಂಟ್ನಿಂದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 3 ಲಕ್ಷ ಬಾರಿ ವೀಕ್ಷಿಸಲಾಗಿದೆ ಮತ್ತು 2 ಸಾವಿರಕ್ಕೂ ಹೆಚ್ಚು ಲೈಕ್ ಬಂದಿದೆ. ಜನರು ವಿಡಿಯೋ ನೋಡಿ ಸಖತ್ ಕಾಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರರು ಅವರು ಇನ್ನೂ ಮದುವೆಯಾಗಿಲ್ಲ ಈಗಾಗಲೇ ತುಂಬಾ ತೊಂದರೆ ಉಂಟುಮಾಡುತ್ತಿದ್ದಾರೆ ಎಂದರೆ, ಮತ್ತೊಬ್ಬ - ಅದಕ್ಕಾಗಿಯೇ ಮೊದಲು ಒಬ್ಬರಿಗೊಬ್ಬರು ಸಮಯ ನೀಡಿ ಮತ್ತು ಒಬ್ಬರನ್ನೊಬ್ಬರು ತಿಳಿದುಕೊಳ್ಳಿ ಮತ್ತು ನಂತರ ಮದುವೆಯಾಗಿ, ಇಲ್ಲದಿದ್ದರೆ ಜೀವನದುದ್ದಕ್ಕೂ ತೊಂದರೆ ಆಗುತ್ತದೆ, ನಿಮ್ಮ ಜೀವನ ಮತ್ತು ಇನ್ನೊಬ್ಬರ ಜೀವನವೂ ಹಾಳಾಗುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬ ನೆಟ್ಟಿಗ ಅವರು ಮದುವೆಗೆ ಮುಂಚೆಯೇ ತೊಂದರೆ ಸೃಷ್ಟಿಸುತ್ತಿದ್ದಾರೆ, ಮದುವೆಯ ನಂತರ ಏನಾಗುತ್ತದೆ? ಎಂದು ವಿಧವಿಧವಾಗಿ ಈ ವಿಡಿಯೋಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್)