ನಿಮ್ಮ ಮನೆಯ ‘AC’ ಗ್ಯಾಸ್ ಖಾಲಿಯಾಗಿದೆಯೇ ಎಂಬುದನ್ನು ತಿಳಿಯಲು ಇಲ್ಲಿದೆ ಸುಲಭ ಮಾರ್ಗ| AC

AC | ಈ ಬೇಸಿಗೆಯ ಸಂದರ್ಭದಲ್ಲಿ ನಮ್ಮ ಸುತ್ತ-ಮುತ್ತಲಿನ ತಾಪಮಾನ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಜನರು ಎಸಿ ಹಾಗೂ ರೆಫ್ರಿಜರೇಟರ್‌ಗಳ ಮೊರೆ ಹೋಗುತ್ತಾರೆ. ಆದರೆ ಎಸಿಯನ್ನು ಹೆಚ್ಚು ಬಳಕೆ ಮಾಡುವುದರಿಂದ ಅದರಲ್ಲಿನ ಗ್ಯಾಸ್​ ಖಾಲಿಯಾಗಿದೆಯೇ ಅಥವಾ ಇಲ್ಲವೇ ಎಂದು ಪರೀಕ್ಷಿಸುವುದು ಕಷ್ಟ. ಇದನ್ನು ಪರಿಶೀಲಿಸಲು ಆಪರೇಟರ್​ಗಳ ಮೊರೆ ಹೋಗಬೇಕಾಗಿರುತ್ತದೆ. ಹಾಗಾದ್ರೆ ನಾವು ಬಳಸುವ ಎಸಿ ಯಲ್ಲಿ ಗ್ಯಾಸ್​ ಖಾಲಿಯಾಗಿದೆಯೇ ಎಂದು ನಾವು ಪತ್ತೆ ಹಚ್ಚುವುದೇಗೆ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಬೇಸಿಗೆಯ ಸಮಯದಲ್ಲಿ ಫ್ರಿಡ್ಜ್​ಅನ್ನು 24 ಗಂಟೆ ಆನ್ ಮಾಡುತ್ತೀರಾ; ಹಾಗಾದ್ರೆ ಅದನ್ನು ಯಾವಾಗ ಆಫ್​ ಮಾಡಬೇಕು? Fridge

ಮನೆಗಳಲ್ಲಿ ಅಳವಡಿಸಲಾದ ಎಸಿಗಳಲ್ಲಿ R22 ಎಂಬ ಗ್ಯಾಸ್​ ಇರುತ್ತದೆ. ಇದನ್ನು ಫ್ರೀಯಾನ್ ಎಂದೂ ಸಹ ಕರೆಯುತ್ತಾರೆ. ಮೆಕ್ಯಾನಿಕ್‌ಗಳು ಹೆಚ್ಚಿನ ಹಣ ಪಡೆಯಲು ಎಸಿಯಲ್ಲಿ ಗ್ಯಾಸ್ ಖಾಲಿಯಾಗಿದೆ ಮತ್ತು ಹೆಚ್ಚಿನ ಹಣ ಖರ್ಚಾಗಬಹುದು ಎಂದು ಸುಳ್ಳು ಹೇಳುತ್ತಾರೆ. ಮೆಕ್ಯಾನಿಕ್‌ಗೆ ಕರೆ ಮಾಡುವ ಬದಲು ನಾವೇ AC ಯಲ್ಲಿ ಗ್ಯಾಸ್ ಇದೆಯೇ ಎಂದು ಪರಿಶೀಲಿಸುವುದು ಹೇಗೆ ಎಂಬುದನ್ನು ನೋಡೋಣ

AC ಯಲ್ಲಿನ ಗ್ಯಾಸ್ ಪತ್ತೆ ಹಚ್ಚುವುದೇಗೆ?

1) AC ಯಲ್ಲಿ ಗ್ಯಾಸ್ ಪತ್ತೆಹಚ್ಚಲು ಸುಲಭವಾದ ಮಾರ್ಗವೆಂದರೆ ಅದರ ತಂಪಾಗಿಸುವ ಪ್ರಕ್ರಿಯೆಯನ್ನು ಪರಿಶೀಲಿಸುವುದು.
2) AC ತಣ್ಣಗಾಗದಿದ್ದರೆ ಗ್ಯಾಸ್​ ಮಟ್ಟ ಕಡಿಮೆಯಾಗಿರಬಹುದು ಅಥವಾ ಅದು ಖಾಲಿಯಾಗಿರುವ ಸಾಧ್ಯತೆ ಇರುತ್ತದೆ.

ನಿಮ್ಮ ಮನೆಯ 'AC' ಗ್ಯಾಸ್ ಖಾಲಿಯಾಗಿದೆಯೇ ಎಂಬುದನ್ನು ತಿಳಿಯಲು ಇಲ್ಲಿದೆ ಸುಲಭ ಮಾರ್ಗ| AC
3) ಹಲವು ಬಾರಿ AC ಗಳಲ್ಲಿ ಗ್ಯಾಸ್ ಸೋರಿಕೆಯಾಗುತ್ತದೆ ಮತ್ತು AC ಯಿಂದ ಗುಳ್ಳೆಗಳ ಶಬ್ದ ಬರಲು ಪ್ರಾರಂಭಿಸುತ್ತದೆ.
4) ಕೋಣೆಯಲ್ಲಿನ ತಾಪಮಾನವನ್ನು ಕಡಿಮೆ ಮಾಡುವುದು ಎಸಿಯ ಕೆಲಸ, ಆದರೆ ಎಸಿ ಸರಿಯಾಗಿ ತಂಪಾಗಿಸದಿದ್ದಾಗ, ಅದು ಕೋಣೆಯಲ್ಲಿನ ಆರ್ದ್ರತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಇದು ಕೂಡ ಶೀತ ಅನಿಲದ ಕೊರತೆಯಿಂದಾಗಿ ಸಂಭವಿಸುತ್ತದೆ.

ಇದನ್ನೂ ಓದಿ: ಇಂದು ವಿಶ್ವ ಮಲೇರಿಯಾ ದಿನ; ಮಲೇರಿಯಾ ರೋಗಿಗಳು ಈ ಯೋಗಾಸನ ಮಾಡಿದರೆ ದೇಹದ ಶಕ್ತಿ ಹೆಚ್ಚಾಗುತ್ತದೆಯಂತೆ| world Malaria Day

5) ನಿಮ್ಮ AC ಯ ಕಂಪ್ರೆಸರ್​ಅನ್ನು ಪರಿಶೀಲಿಸುವ ಮೂಲಕ ಗ್ಯಾಸ್ ಮಟ್ಟ ಕಡಿಮೆಯಾಗಿದೆಯೇ ಎಂದು ನೀವು ಪರಿಶೀಲಿಸಬಹುದು.
6) ಕೋಣೆಯ ಉಷ್ಣತೆಗೆ ಅನುಗುಣವಾಗಿ ಕಂಪ್ರೆಸರ್ ಆನ್ ಮತ್ತು ಆಫ್ ಆಗುತ್ತದೆ. ಆದರೆ ಕಂಪ್ರೆಸರ್ ಸಾಮಾನ್ಯಕ್ಕಿಂತ ಹೆಚ್ಚು ತಡವಾಗಿ ಆನ್ ಮತ್ತು ಆಫ್ ಆಗುತ್ತಿದೆ ಎಂದಾದರೆ, ಎಸಿಯಲ್ಲಿ ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು.
(ಏಜೆನ್ಸೀಸ್)

ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ತರಾಟೆ; ಸಾವರ್ಕರ್ ವಿರುದ್ಧದ ಹೇಳಿಕೆಗೆ ಸಮನ್ಸ್ ತಡೆ| Rahul gandhi

Share This Article

ಒಂದು ದಿನಕ್ಕೆ ಒಬ್ಬರು ಎಷ್ಟು ಸಿಹಿ ತಿನ್ನಬೇಕು? ಇದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳೊದೇನು? ಇಲ್ಲಿದೆ ಮಾಹಿತಿ..| WHO

WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್​ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು…

ಅಡುಗೆಮನೆಯಲ್ಲಿ ಈ ಫೋಟೋವನ್ನು ಇಟ್ಟರೆ, ಮನೆಯಲ್ಲಿ ಅದೃಷ್ಟ, ಸಂಪತ್ತು ಸದಾ ತುಂಬಿರುತ್ತದಂತೆ! Vastu Tips

Vastu Tips: ಹಿಂದೂ ಧರ್ಮದಲ್ಲಿ ವಾಸ್ತು ಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ವಾಸ್ತು ತತ್ವಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು…

ಫ್ರಿಡ್ಜ್​​​ನಲ್ಲಿಟ್ಟ ಮಾಂಸ ತಿನ್ನುತ್ತಿದ್ದೀರಾ? ನೀವು ಇದನ್ನು ಖಂಡಿತ ತಿಳಿದುಕೊಳ್ಳಬೇಕು..meat

meat: ಇತ್ತೀಚಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ರೆಫ್ರಿಜರೇಟರ್‌ಗಳು ಅತ್ಯಗತ್ಯವಾಗಿರುತ್ತವೆ. ಪ್ರತಿಯೊಂದು ವಸ್ತುವನ್ನು ಫ್ರಿಡ್ಜ್‌ನಲ್ಲಿ ಇಡುವುದನ್ನು ಅವರು…