ನ್ಯೂಸ್

ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ; ಎಣ್ಣೆ ಒಯ್ಯೋಕೆ ಮುಗಿಬಿದ್ದ ಜನ

ವಿಜಯನಗರ: ಅಡುಗೆ ಎಣ್ಣೆ ತುಂಬಿದ್ದ ಲಾರಿ, ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಡುರಸ್ತೆಯಲ್ಲೇ ಬಿದ್ದಿರುವ ಘಟನೆ ವಿಜಯನಗರದ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ಬಳಿ NH 50ರಲ್ಲಿ ಘಟನೆ ನಡೆದಿದೆ.

ಅಡುಗೆ ಎಣ್ಣೆ ತುಂಬಿದ್ದ ಲಾರಿ ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿ ಒಳಗಿದ್ದ ಅಡುಗೆ ಎಣ್ಣೆ ಮಾತ್ರ ರಸ್ತೆ ಪಾಲಾಗಿದೆ.

ಹೆದ್ದಾರಿ ಪಕ್ಕದಲ್ಲಿ ಅಪಾರ ಪ್ರಾಮಾಣ ಅಡುಗೆ ಎಣ್ಣೆ ಹರಿದು ಬಂದಿದೆ. ಇದನ್ನು ಗಮನಿಸಿದ ಜನ ಲಾರಿಯಲ್ಲಿದ್ದ ಎಣ್ಣೆ ತುಂಬಲು ಕೊಡ, ಕ್ಯಾನ್‌ ಹಿಡಿದು ಮುಗಿಬಿದ್ದಿದ್ದಾರೆ.

ಹೆದ್ದಾರಿ ಪಕ್ಕದಲ್ಲಿ ಹರಿದ ಅಪಾರ ಪ್ರಾಮಾಣ ಅಡುಗೆ ಎಣ್ಣೆ ಹರಿದು ಬಂದಿದೆ. ಘಟನಾ ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಡುಗೆ ಎಣ್ಣೆ ತುಂಬಲು ಮುಂದಾಗಿದ್ದ ಜನರನ್ನ ಚದುರಿಸಲು ಹರಸಾಹಸ ಪಟ್ಟಿದ್ದಾರೆ. ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.