More

    ಇಸ್ರೇಲ್​ ಪ್ರಧಾನಿಯನ್ನು ಭೂತ ಎಂದ ಅಸಾದುದ್ದೀನ್​ ಓವೈಸಿ! ಪ್ಯಾಲೆಸ್ತೀನ್ ಪರ ನಿಲ್ಲಲು ಪ್ರಧಾನಿ ಮೋದಿಗೆ ಒತ್ತಾಯ

    ನವದೆಹಲಿ: ಅಕ್ಟೋಬರ್​​ 7ರ ಶನಿವಾರ ಮುಂಜಾನೆ 5000 ರಾಕೆಟ್​ಗಳಿಂದ ದಿಢೀರ್​ ದಾಳಿ ಮಾಡಿ, ನೂರಾರು ಮಂದಿಯ ಪ್ರಾಣ ತೆಗೆದ ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರರ ವಿರುದ್ಧ ಇಸ್ರೇಲ್​ ಪ್ರತೀಕಾರದ ಕಾರ್ಯಾಚರಣೆ ನಡೆಸುತ್ತಿದೆ. ಹಮಾಸ್​ ಉಗ್ರರು ಅಡಗಿರುವ ಗಾಜಾ ಪಟ್ಟಿಯೊಳಗೆ ಇಸ್ರೇಲ್​ ಸೇನೆ ನುಗ್ಗಿದೆ. ಹಮಾಸ್​ ಉಗ್ರರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಇಸ್ರೇಲ್​ ಪ್ರಧಾನಿ ಬೆಂಜಮಿನ್ ನೇತನ್ಯಾಹು ಸಹ ಶಪಥ ಮಾಡಿದ್ದಾರೆ.

    ತಾಜಾ ಸಂಗತಿ ಏನೆಂದರೆ, ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೇತನ್ಯಾಹು ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಸಂಸ್ಥಾಪಕ ಹಾಗೂ ಹೈದರಾಬಾದ್​ ಹಾಲಿ ಸಂಸದರಾಗಿರುವ ಅಸಾದುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ನೇತನ್ಯಾಹು ಅವರನ್ನು ಓರ್ವ ಭೂತ ಎಂದು ಕರೆದಿರುವ ಓವೈಸಿ, ಪ್ಯಾಲೆಸ್ತೀನ್​ ಪರವಾಗಿ ನಿಲ್ಲುವಂತೆ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ.

    ಹೈದರಾಬಾದ್​ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಓವೈಸಿ, ನಾನು ಪ್ಯಾಲೆಸ್ತೀನ್​ ಬೆಂಬಲಿಸುತ್ತೇನೆ. ಈವರೆಗೂ ಹೋರಾಡುತ್ತಿರುವ ಗಾಜಾದ ವೀರ ಪುರುಷರಿಗೆ ನನ್ನ ಸಲಾಂ. ನೇತನ್ಯಾಹು ಓರ್ವ ಭೂತ, ನಿರಂಕುಶಾಧಿಕಾರಿ ಮತ್ತು ಯುದ್ಧ ಅಪರಾಧಿ! ನಮ್ಮ ದೇಶದ ಓರ್ವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಪ್ಯಾಲೆಸ್ತೀನ್ ಹೆಸರು ಹೇಳಿದವರ ಮೇಲೆ ಕೇಸ್ ಹಾಕುತ್ತೇವೆ ಎಂದಿದ್ದಾರೆ. ಯೋಗಿ ಇಲ್ಲಿ ಕೇಳು, ನಾನು ಪ್ಯಾಲೆಸ್ತೀನ್ ಧ್ವಜ ಮತ್ತು ನಮ್ಮ ತ್ರಿವರ್ಣ ಧ್ವಜವನ್ನು ಸಹ ಹಿಡಿದಿದ್ದೇನೆ. ನಾನು ಪ್ಯಾಲೆಸ್ತೀನ್ ಪರವಾಗಿ ನಿಲ್ಲುತ್ತೇನೆ ಎಂದರು.

    ಇದನ್ನೂ ಓದಿ: ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು: ಸರ್ಕಾರಕ್ಕೆ ಸಲಹೆ ನೀಡಿದ ಹಂಸಲೇಖ

    ಪ್ಯಾಲೆಸ್ತೀನಿಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ನಾನು ಪ್ರಧಾನಿಗೆ ಮನವಿ ಮಾಡಲು ಬಯಸುತ್ತೇನೆ. ಪ್ಯಾಲೆಸ್ತೀನ್ ಕೇವಲ ಮುಸ್ಲಿಮರ ಸಮಸ್ಯೆಯಲ್ಲ, ಅದು ಮಾನವೀಯ ಸಮಸ್ಯೆ. ಗಾಜಾ ಮಂದಿ ನಿಮ್ಮ ಬೆಂಬಲ ಇರಲಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.

    .7ರ ಶನಿವಾರದಂದು ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ದಿಢೀರನೇ 5000 ರಾಕೆಟ್​ಗಳಿಂದ ಇಸ್ರೇಲ್​ ಮೇಲೆ ವಿಧ್ವಂಸಕ ದಾಳಿ ಮಾಡಿರುವುದಕ್ಕೆ ಪ್ರತೀಕಾರವಾಗಿ ಇಸ್ರೇಲ್​, ಗಾಜಾ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಇಸ್ರೇಲ್​ ಮತ್ತು ಗಾಜಾ ನಡುವೆ ಯುದ್ಧ ಆರಂಭವಾಗಿ ಒಂದು ವಾರ ಕಳೆದಿದ್ದರೂ ಇನ್ನೂ ಕದನ ಕಾರ್ಮೋಡ ಮಾತ್ರ ತಿಳಿಗೊಂಡಿಲ್ಲ. ಸ್ಥಳೀಯ ಜನರು ಭಯದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಈ ಯುದ್ಧದಲ್ಲಿ ಈಗಾಗಲೇ 3000ಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. ಹಮಾಸ್​ ಉಗ್ರರಿಂದ ಇಸ್ರೇಲ್​ನ 1300 ಜನರು ಹತರಾದರೆ, ಇಸ್ರೇಲ್​ ದಾಳಿಗೆ ಗಾಜಾದ 1900 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಗಾಜಾ ಒಳಗೆ ನುಗ್ಗಿ ಕಾರ್ಯಾಚರಣೆ ಶುರು: ಇಸ್ರೇಲ್​ನಿಂದ ವಿನಾಶಕಾರಿ ಆಕ್ರಮಣದ ಸುಳಿವು,​ ಜೀವ ಭಯದಲ್ಲೇ ನಾಗರಿಕರ ಪಲಾಯನ

    ಆಪರೇಷನ್​ ಅಜಯ್​: ಯುದ್ಧ ಪೀಡಿತ ಇಸ್ರೇಲ್​ನಿಂದ 3ನೇ ವಿಮಾನದಲ್ಲಿ ತಾಯ್ನಾಡಿಗೆ ಮರಳಿದ 197 ಭಾರತೀಯರು

    ಪತ್ನಿಯ ಅನುಮತಿ ಇಲ್ಲದೆ ಕಾಲ್​ ರೆಕಾರ್ಡ್​ ಮಾಡಿದ ಗಂಡನಿಗೆ ಹೈಕೋರ್ಟ್​ ಹೇಳಿದ್ದಿಷ್ಟು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts