More

    ಪತ್ನಿಯ ಅನುಮತಿ ಇಲ್ಲದೆ ಕಾಲ್​ ರೆಕಾರ್ಡ್​ ಮಾಡಿದ ಗಂಡನಿಗೆ ಹೈಕೋರ್ಟ್​ ಹೇಳಿದ್ದಿಷ್ಟು…

    ಬಿಲಾಸ್ಪುರ್​: ಗೊತ್ತಾಗದಂತೆ ಅಥವಾ ಅನುಮತಿ ಇಲ್ಲದೆ ವ್ಯಕ್ತಿಯೊಬ್ಬರ ಫೋನ್​ ಕಾಲ್​ ರೆಕಾರ್ಡ್​ ಮಾಡುವುದು ಭಾರತೀಯ ಸಂವಿಧಾನದ ಆರ್ಟಿಕಲ್​ 21ರ ಅಡಿಯಲ್ಲಿ ಬರುವ ಗೌಪ್ಯತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಛತ್ತೀಸ್​ಗಢ ಹೈಕೋರ್ಟ್​ ತೀರ್ಪು ನೀಡಿದೆ.

    2019ರಿಂದ ಬಾಕಿ ಉಳಿದಿರುವ ಜೀವನಾಂಶ ಪ್ರಕರಣದಲ್ಲಿ ತನ್ನ ಪತಿಯ ಅರ್ಜಿಗೆ ಪ್ರಾಮುಖ್ಯತೆ ನೀಡಿದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ.

    38ರ ಮಹಿಳೆ ತನ್ನ 40 ವರ್ಷದ ಪತಿಯಿಂದ ಜೀವನಾಂಶವನ್ನು ಕೋರಿ ಮಹಸಮುಂದ್​ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಪತ್ನಿಯ ಫೋನ್​ ಸಂಭಾಷಣೆಗಳನ್ನು ಇಟ್ಟುಕೊಂಡು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ ಪತಿ, ಕಾಲ್​ ರೆಕಾರ್ಡ್​ ಆಧಾರದ ಮೇಲೆ ಪತ್ನಿಯನ್ನು ಮರುಪರೀಕ್ಷೆ ಮಾಡಬೇಕಿದೆ ಎಂದು ಅರ್ಜಿಯಲ್ಲಿ ಕೋರಿದ್ದರು. ಅಲ್ಲದೆ, ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವುದು ಮೊಬೈಲ್​ ರೆಕಾರ್ಡ್​ನಿಂದ ಬಯಲಾಗಿದೆ. ಬೇಕಿದ್ದರೆ, ಪರೀಕ್ಷೆ ಮಾಡಿ. ದಾಂಪತ್ಯಕ್ಕೆ ದ್ರೋಹ ಎಸಗಿರುವುದರಿಂದ ಡಿವೋರ್ಸ್​ ಬಳಿಕ ನಾನು ಆಕೆಗೆ ಜೀವನಾಂಶ ನೀಡಬೇಕಿಲ್ಲ ಎಂದು ಪತಿ ಅರ್ಜಿಯಲ್ಲಿ ಕೋರಿದ್ದ.

    ಪತಿಯ ಅರ್ಜಿಯನ್ನು ಪುರಸ್ಕರಿಸಿದ ಕೌಟುಂಬಿಕ ನ್ಯಾಯಾಲಯ, ಮಹಿಳೆಯ ಮರುಪರೀಕ್ಷೆಗೆ 2021ರ ಅ. 21ರಂದು ಆದೇಶ ಹೊರಡಿಸಿತ್ತು. ಇದಾದ ಬಳಿಕ 2022ರಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನೆ ಮಾಡಿ ತಮ್ಮ ವಕೀಲರ ಮೂಲಕ ಮಹಿಳೆ ಹೈಕೋರ್ಟ್​ ಮೆಟ್ಟಿಲೇರಿದ್ದರು.

    ಇದನ್ನೂ ಓದಿ: ನಾಡಿನ ಹೆಮ್ಮೆಯ ಮೈಸೂರು ದಸರಾ ಉತ್ಸವಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣ: ಸಿಎಂ ಸಿದ್ದರಾಮಯ್ಯ

    ಈ ಸಂಬಂಧ ಹೈಕೋರ್ಟ್​ನಲ್ಲಿ ನಿನ್ನೆ ವಿಚಾರಣೆ ನಡೆಯುತ್ತಿದೆ. ಇತ್ತೀಚೆಗೆ ನಡೆದ ವಿಚಾರಣೆ ಸಂದರ್ಭದಲ್ಲಿ ಕೌಟುಂಬಿಕ ನ್ಯಾಯಾಲಯವು ತನ್ನ ಅರ್ಜಿದಾರಳ ಗಂಡನ ಅರ್ಜಿಯನ್ನು ಅನುಮತಿಸುವ ಮೂಲಕ ಅರ್ಜಿದಾರಳ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸಿ, ಕಾನೂನಿನ ದೋಷವನ್ನು ಎಸಗಿದೆ ಮತ್ತು ಅವಳಿಗೆ ತಿಳಿಯದೇ ಅವಳ ಪತಿ ಫೋನ್​ ಕಾಲ್ ರೆಕಾರ್ಡ್​​ ಮಾಡಿದ್ದಾರೆ ಮತ್ತು ಅದನ್ನು ಆಕೆಯ ವಿರುದ್ಧ ಬಳಸಲು ಕಾನೂನಿನ ಅಡಿಯಲ್ಲಿ ಸಾಧ್ಯವಿಲ್ಲ ಎಂದು ಮಹಿಳೆಯ ಪರ ವಕೀಲರು ಕೋರ್ಟ್​ನಲ್ಲಿ ವಾದ ಮಂಡಿಸಿದರು. ಅಲ್ಲದೆ, ಸುಪ್ರೀಂಕೋರ್ಟ್​ ಮತ್ತು ಮಧ್ಯಪ್ರದೇಶ ಹೈಕೋರ್ಟ್​ ನೀಡಿದ ಆದೇಶವನ್ನು ಇದೇ ಸಂದರ್ಭದಲ್ಲಿ ವಕೀಲರು ಉಲ್ಲೇಖಿಸಿದರು.

    ವಿಚಾರಣೆಯನ್ನು ಆಲಿಸಿದ ಬಳಿಕ ಹೈಕೋರ್ಟ್ ನ್ಯಾಯಮೂರ್ತಿ ರಾಕೇಶ್ ಮೋಹನ್ ಪಾಂಡೆ ಅವರು ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿದರು. ಪ್ರತಿವಾದಿಯು (ಪತಿ) ಅರ್ಜಿದಾರರ (ಪತ್ನಿಯ) ಫೋನ್​ ಸಂಭಾಷಣೆಯನ್ನು ಅವಳ ಬೆನ್ನಿನ ಹಿಂದೆಯೇ ಅವಳಿಗೆ ತಿಳಿಯದೇ ರೆಕಾರ್ಡ್ ಮಾಡಿರುವುದು ಕಂಡುಬರುತ್ತದೆ. ಇದು ಅವರ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಭಾರತದ ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾತರಿಪಡಿಸಲಾದ ಅರ್ಜಿದಾರರ ಹಕ್ಕನ್ನು ಸಹ ಉಲ್ಲಂಘಿಸುತ್ತದೆ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯ ಆದೇಶವನ್ನು ಹೈಕೋರ್ಟ್​ ರದ್ದು ಮಾಡಿತು. (ಏಜೆನ್ಸೀಸ್​)

    ಬೆಂಬಲಿಗರ ಟೀ, ಕಾಫಿ, ಸಮೋಸ ವೆಚ್ಚವೂ ಅಭ್ಯರ್ಥಿ ಖಾತೆಗೆ!

    ICCWC 2023 INDvsPAK: ಭಾರತ ಗೆದ್ದ ಕೂಡಲೇ ಭಾವುಟ ಹಿಡಿದು ಸಂಭ್ರಮಿಸಿದ ಪುಟಾಣಿಗಳು; ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts