More

    ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು: ಸರ್ಕಾರಕ್ಕೆ ಸಲಹೆ ನೀಡಿದ ಹಂಸಲೇಖ

    ಮೈಸೂರು: ಕನ್ನಡ ಓದಲು, ಬರೆಯಲು ಬಾರದವರ ಸಮೀಕ್ಷೆ ಆಗಬೇಕು ಮತ್ತು ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು ಎಂದು ನಾದಬ್ರಹ್ಮ ಹಂಸಲೇಖ ಅವರು ಸರ್ಕಾರಕ್ಕೆ ಸಲಹೆ ನೀಡಿದರು.

    ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಿ ಉದ್ಘಾಟನಾ ಭಾಷಣ ಮಾಡಿದ ಹಂಸಲೇಖ, ಕಾರ್ಪೊರೇಟ್ ಕನ್ನಡಿಗರ ತಂಡ ನನಗೆ ಸಲಹೆ ನೀಡಿದೆ. ಕನ್ನಡ ಅರ್ಥ ಆಗುತ್ತೆ, ಆದರೆ ಓದಲು-ಬರೆಯಲು ಬರಲ್ಲ ಎನ್ನುವವರ ಸಮೀಕ್ಷೆ ಆಗಬೇಕಿದೆ. ಕನ್ನಡ ಗೊತ್ತಿಲ್ಲದವರಿಗೆ 30 ದಿನಗಳಲ್ಲಿ ಭಾಷೆ ಕಲಿಸಬೇಕು. ಕನ್ನಡ ಕಲಿತವರಿಗೆ ಜಮೀನು ಆರ್‌ಟಿಸಿ ಮಾದರಿಯಲ್ಲಿ ಕನ್ನಡ ಪಟ್ಟ ಕೊಡಬೇಕು. ಅದು ಬಿಪಿಎಲ್, ಎಪಿಎಲ್ ಮಾದರಿಯ ದಾಖಲೆ ಆಗಬೇಕು ಎಂದು ಹೇಳಿದರು.

    ಮತ್ತೊಂದು ಸಲಹೆ ನೀಡಿದ ಹಂಸಲೇಖ, ಪ್ರತಿಭೆ, ಉದ್ಯಮ ವಿನಿಮಯ ಆಗಬೇಕು. ಹುಬ್ಬಳ್ಳಿ- ಬೆಳಗಾವಿ ಪ್ರತಿಭೆ, ಉದ್ಯಮಗಳು ಬೆರೆಯುತ್ತಿವೆ. ಮಂಗಳೂರು- ಮೈಸೂರು ನಡುವೆ ಸಾಂಸ್ಕೃತಿಕ ವಿನಿಮಯ ಆಗಬೇಕು. ರಫ್ತುದಾರರು ಪಕ್ಕದ ರಾಜ್ಯಗಳ ಮೇಲೆ ಅವಲಂಬನೆ ಆಗಿದ್ದಾರೆ. 29 ಜಿಲ್ಲೆಗಳನ್ನು ಜೋಡಿಸಿ ಪ್ರತಿಭೆ, ಉದ್ಯಮ ಹಂಚಿಕೊಳ್ಳಬೇಕು. ಕೃಷಿಕ- ಕಾರ್ಪೊರೇಟ್ ವಿನಿಮಯ ಆಗಬೇಕು ಎಂದರು.

    ಇದನ್ನೂ ಓದಿ: ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ನಾದಬ್ರಹ್ಮ ಹಂಸಲೇಖ ಚಾಲನೆ

    ಯಾರನ್ನು ಮೊದಲು ನೆನೆಯಲಿ?
    ಯಾರು ಯಾರನ್ನು ನೆನೆಯಾನಾ? ಯಾರು ಯಾರನ್ನು ನೆನೆಯಲಿ, ಕನ್ನಡ ದೀಪ, ಸಮೃದ್ದಿ ಅಭಿವೃದ್ಧಿ ಶಾಂತಿ ಸಮೃದ್ದಿಯ ನನ್ನ ಮಾತಿನ ಪರಿವಿಧಿ. ಪೂಜ್ಯ ಕನ್ನಡಿಗರಿಗೆ, ಪೂಜ್ಯ ಕನ್ನಡಕ್ಕೆ, ಈ ದೇವಾಲಯ ಪ್ರೇಮಾಲಯಕ್ಕೆ ಸಾವಿರದ ಶರಣುಗಳು ಎಂದು ಮಾತು ಆರಂಭಿಸಿದ ಹಂಸಲೇಖ, ಕರ್ನಾಕದ ಏಕೀಕರಣಕ್ಕೆ ಈಗ ಐದಶ ಅಂದರೆ ಐವತ್ತು. ಏಕೀಕರಣಕ್ಕೆ ಐವತ್ತು ತುಂಬಿದೆ. ಹೀಗಾಗಿ ಕರ್ನಾಟಕ ಐದಶ ಅಂತಾ ಕರೆಯೋಣ. ಕರ್ನಾಟಕದ ಐದಶದ ಜೊತೆಗೆ ನನ್ನ ಕಲಾ ಕಾಯಕಲ್ಪಕ್ಕೂ 50 ವರ್ಷವಾಗಿದೆ. ಈ ನನ್ನ ಐದಶದಲ್ಲಿ ಸಿಕ್ಕಿದ ಈ ಅವಕಾಶ ಬಹಳ ಬೆಲೆ ಬಾಳುವಂತಹದ್ದು. ಈ ಅವಕಾಶ ನಿರಾಯಾಸವಾಗಿ ಬಂದಿಲ್ಲ. ಇದಕ್ಕಾಗಿ ಸಾವಿರ ಮೆಟ್ಟಿಲು ಹಾಗೂ ಸಾವಿರಾರು ಮೆಟ್ಟಿಲು ಹತ್ತಿ ಬಂದಿದ್ದೇನೆ. ಈ ಅವಕಾಶಕ್ಕೆ ಯಾರು ಕಾರಣ? ಯಾರನ್ನು ಮೊದಲು ನೆನೆಯಲಿ? ಅಪ್ಪ ಗೋವಿಂದರಾಜ ಮಾನೆ, ಅಮ್ಮ ರಾಜಮ್ಮ ಗುರು ನೀಲಕಂಠ, ನಾದ ನಾಟಕರಂಗ, ಸರ್ಕಾರ ಅಥವಾ ಸಂವಿಧಾನವನ್ನೇ? ಸಂವಿಧಾನದ ದನಿ ಸಿದ್ದರಾಮಯ್ಯ ಅವರನ್ನೇ? ಡಿಸಿಎಂ ಪ್ರಬಲ ಶಕ್ತಿ ಸಂಘಟಕ ಡಿ.ಕೆ. ಶಿವಕುಮಾರ್ ಅವರನ್ನೇ? ನನ್ನ ಹೆಸರು ಸೂಚಿಸಿದ ಡಾ. ಎಚ್. ಸಿ. ಮಹದೇವಪ್ಪ ಅವರನ್ನೇ? ನನ್ನ ಹೆಂಡತಿ, ಮಕ್ಕಳು, ಅಭಿಮಾನಿಗಳನ್ನೇ? ಅಥವಾ ಭೂಮಿ ತಾಯಿಯನ್ನೇ ಯಾರು ಯಾರು ಅಂತಾ ಹೇಳಲಿ ಎಂದರು.

    ಕನ್ನಡದ ಶಾಂತಿ ಮಂತ್ರವನ್ನು ವಿಶ್ವಕ್ಕೆ ಮುಟ್ಟಿಸೋಣಾ. ರಾಷ್ಟ್ರದ ಜೊತೆ ಹಾಗೂ ವಿಶ್ವದ ಜೊತೆ ಕನ್ನಡವನ್ನು ಸಮೀಕರಿಸಬೇಕು. ನಾವು ಯುದ್ಧ ಮಾಡಿದಂತಾಯ್ತು ನಾವು ಕನ್ನಡದ ಅಭಿವೃದ್ಧಿ ಮಾಡೋಣಾ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮೈಸೂರು ಚಾಮುಂಡಿ ಬೆಟ್ಟಕ್ಕೆ ಶಾಶ್ವತ ದೀಪಾಲಂಕಾರ ಆಗಬೇಕು ಎಂದು ವೇದಿಕೆಯಲ್ಲಿ‌ ಸಿಎಂ ಸಿದ್ದರಾಮಯ್ಯ ಅವರಿಗೆ ಹಂಸಲೇಖ ಮನವಿ ಮಾಡಿದರು.

    ನಾಡಿನ ಹೆಮ್ಮೆಯ ಮೈಸೂರು ದಸರಾ ಉತ್ಸವಕ್ಕೆ ಎಲ್ಲರಿಗೂ ಆತ್ಮೀಯ ಆಮಂತ್ರಣ: ಸಿಎಂ ಸಿದ್ದರಾಮಯ್ಯ

    ಬೆಳಗ್ಗೆಯಿಂದಲೇ ಅರಮನೆಯಲ್ಲಿ ನಡೆಯುತ್ತಿದೆ ಪೂಜಾ ಕೈಂಕರ್ಯಗಳು: ಕೆಲವೇ ಕ್ಷಣಗಳಲ್ಲಿ ನಾಡಹಬ್ಬಕ್ಕೆ ಅಧಿಕೃತ ಚಾಲನೆ

    ಊಟದ ನಂತರ ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ… ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts