More

    ಆದರ್ಶಪ್ರಾಯರ ಗೌರವಕ್ಕಿದೆ ಮೌಲ್ಯ

    ಮೂಲ್ಕಿ: ಭಾರತೀಯ ಸಂಸ್ಕೃತಿ ಸಂಸ್ಕಾರಗಳು ಹಾಗೂ ಅಭಿವೃದ್ಧಿ ಪೂರಕವಾಗಿ ಸೃಜನಶೀಲ ಲೇಖನಗಳ ಮೂಲಕ ಯುವ ಜನತೆಗೆ ಆದರ್ಶಪ್ರಾಯರಾದವರನ್ನು ಗುರುತಿಸಿ ಗೌರವಿಸುವುದು ಮೌಲ್ಯಯುತ ಸಮಾಜ ಸೃಷ್ಟಿಗೆ ಪೂರಕ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು ಹೇಳಿದರು.

    ಮೂಲ್ಕಿಯ ಹೊಸ ಅಂಗಣದ ತಿಂಗಳ ಬೆಳಕು ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಅವರು ಮಾತನಾಡಿದರು.

    ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ, ಕನ್ನಡ ಭಾಷೆಯ ಪೋಷಣೆ ಸಹಿತ ಜನರಿಗೆ ಧಾರ್ಮಿಕ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಯಕ್ಷಗಾನವನ್ನು ವಿವಿಧ ಸಪ್ತಾಹಗಳ ಮೂಲಕ ಜನತೆಗೆ ಹತ್ತಿರವಾಗಿಸುವ ಕಾರ್ಯಗಳನ್ನು ಅಕಾಡಮಿ ಮಾಡಲಿದೆ ಎಂದರು.
    ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್, ನಿವೃತ್ತ ಉಪನ್ಯಾಸಕ ಪ್ರೊ. ಸ್ಯಾಮ್ ಮಾಬೆನ್, ನಿವೃತ್ತ ಪ್ರಾಂಶುಪಾಲ ವೈ ಎನ್ ಸಾಲ್ಯಾನ್, ಬಂಕಿ ನಾಯಕರು, ಸಾಮಾಜಿಕ ಕಾರ್ಯಕರ್ತೆ ನಂದಾ ಪಾಯಸ್, ಉದ್ಯಮಿ ವಾಸು ಪೂಜಾರಿ ಚಿತ್ರಾಪು, ಡಾ. ಹರಿಶ್ಚಂದ್ರ ಪಿ ಸಾಲ್ಯಾನ್, ಜಯಪಾಲ ಶೆಟ್ಟಿ ಐಕಳ, ಜಯರಾಮ್ ಮೂಲ್ಕಿ, ರವಿಚಂದ್ರ ರಾವ್, ವಾಮನ್ ಕೋಟ್ಯಾನ್ ನಡಿಕುದ್ರು, ಸೋಮಸುಂದರ್ ಅಂಚನ್, ವಕೀಲ ರವೀಶ್ ಕಾಮತ್, ರಮೇಶ್ ಅಮೀನ್ ಕೊಕ್ಕರಕಲ್, ಜೆ.ಸಿ.ದಿನೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ರವಿಚಂದ್ರ ಸ್ವಾಗತಿಸಿದರು, ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ಸಾಧನೆಗಳನ್ನು ಸಂಘಟಕ ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್ ಪರಿಚಯಿಸಿದರು. ವೈ.ಎನ್.ಸಾಲ್ಯಾನ್ ಸನ್ಮಾನಿತರನ್ನು ಪರಿಚಯಿಸಿದರು. ವಾಮನ ಕೋಟ್ಯಾನ್ ನಡಿಕುದ್ರು ವಂದಿಸಿದರು.

    ಕೃಷ್ಣಾನಂದ ಶೆಟ್ಟಿ ಐಕಳಗೆ ಸನ್ಮಾನ

    ತಿಂಗಳ ಬೆಳಕು ಸಾಧಕರಾಗಿ ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಕೃಷ್ಣಾನಂದ ಶೆಟ್ಟಿ ಐಕಳ ಅವರನ್ನು ಗೌರವಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಅವರು ಮನದಲ್ಲಿ ಮೂಡುವ ಸೃಜನಶೀಲ ಭಾವನೆಗಳು ಅಕ್ಷರರೂಪಕ್ಕಿಳಿಸಿದಾಗ ಅದು ಲೇಖನವಾಗುತ್ತದೆ. ಮನಸ್ಸನ್ನು ಅರಳಿಸುವ ಲೇಖನದಿಂದ ಸಮಾಜದ ಉನ್ನತಿ ಸಾಧ್ಯ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts