More

    ಊಟದ ನಂತರ ಈ ಅಭ್ಯಾಸಗಳಿದ್ದರೆ ಇಂದೇ ಬಿಟ್ಟುಬಿಡಿ… ಇಲ್ಲದಿದ್ದರೆ ಆರೋಗ್ಯಕ್ಕೆ ಹಾನಿಕಾರಕ

    ಮಧ್ಯಾಹ್ನ ಊಟ ಮಾಡಿದ ನಂತರ ಸಿಗರೇಟು ಸೇದುವುದು ಅಥವಾ ಚಹಾ ಕುಡಿಯುವುದು ಕೆಲವರ ಅಭ್ಯಾಸವಾಗಿದೆ. ಈ ರೀತಿ ಮಾಡದಿದ್ದರೆ ಊಟ ಮಾಡಿದ ತೃಪ್ತಿಯೇ ಸಿಗುವುದಿಲ್ಲ ಎನ್ನುತ್ತಾರೆ. ಆದರೆ ಈ ಅಭ್ಯಾಸ ಆರೋಗ್ಯಕ್ಕೆ ತುಂಬಾ ಒಳ್ಳೆಯದಲ್ಲ ಎಂಬುದು ತಜ್ಞರ ಅಭಿಪ್ರಾಯ. ಹಾಗಾದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಕೆಲವು ನಿಯಮಿತ ಅಭ್ಯಾಸಗಳ ಬಗ್ಗೆ ನಾವೀಗ ತಿಳಿಯೋಣ.

    ಧೂಮಪಾನ: ಧೂಮಪಾನವು ಸಾಮಾನ್ಯವಾಗಿ ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸವಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಸಿನಿಮಾ ಶುರುವಾಗುವ ಮುಂಚೆ ಕಡ್ಡಾಯವಾಗಿ ಇದರ ಬಗ್ಗೆ ಹೇಳಲಾಗುತ್ತದೆ. ಅಲ್ಲದೆ, ಸಿಗರೇಟ್​ ಪ್ಯಾಕ್​ ಮೇಲೆಯೇ ಇದು ಡೇಂಜರ್​ ಅಂತಾ ಬರೆದಿದ್ದರೂ ಅದನ್ನು ಸೇದುವವರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಆದರೆ, ಧೂಮಪಾನ ಕ್ಯಾನ್ಸರ್ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಊಟದ ನಂತರ ವಿಶ್ರಾಂತಿ ಪಡೆಯಲು ಧೂಮಪಾನಕ್ಕೆ ಒಗ್ಗಿಕೊಂಡಿದ್ದಾರೆ. ಆದರೆ, ಧೂಮಪಾನ ಚಯಾಪಚಯ ಕ್ರಿಯಯನ್ನು ನಿಧಾನಗೊಳಿಸುತ್ತದೆ. ಇದರಿಂದ ಕೊಬ್ಬು ದೇಹದಲ್ಲಿ ಸಂಗ್ರಹವಾಗುತ್ತದೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಊಟದ ನಂತರ ಧೂಮಪಾನ ಮಾಡುವ ಅಭ್ಯಾಸವನ್ನು ತ್ಯಜಿಸುವುದು ಉತ್ತಮ.

    ಇದನ್ನೂ ಓದಿ: ವಿಶ್ವಕಪ್​ನಲ್ಲಿ ಮುಂದಿನ 3 ಪಂದ್ಯಗಳಿಗೆ ಕೇನ್​ ವಿಲಿಯಮ್ಸನ್​ ಅಲಭ್ಯ; ಭಾರತಕ್ಕೂ ಸಿಹಿಸುದ್ದಿ!

    ಟೀ ಕುಡಿಯುವುದು: ಕೆಲವರಿಗೆ ಊಟದ ನಂತರ ಟೀ ಅಥವಾ ಕಾಫಿ ಬೇಕೇ ಬೇಕು. ಭಾರತದ ಬಹುತೇಕ ಮನೆಗಳಲ್ಲಿಯೂ ಈ ಹಸ್ಯಾಸ ಇದೆ. ಇದೊಂದು ಚಟವಾಗಿದೆ. ಊಟದ ನಂತರ ಟೀ ಸೇವನೆ ಮಾಡಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ ಎಂಬುದು ಕೆಲವರಿಗೆ ನಂಬಿಕೆಯಾಗಿದೆ. ಆದರೆ, ಟೀ ಮತ್ತು ಕಾಫಿ ಕುಡಿಯುವುದು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಚಹಾ ಮತ್ತು ಕಾಫಿಯಲ್ಲಿರುವ ಕೆಫಿನ್ ಅಂಶವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಇದು ಹೆಚ್ಚುತ್ತಿರುವ ಅಸಿಡಿಟಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

    ಊಟದ ತಕ್ಷಣ ಸ್ನಾನ: ಊಟದ ನಂತರ ಸ್ನಾನ ಮಾಡುವುದು ಒಳ್ಳೆಯ ಅಭ್ಯಾಸವಲ್ಲ. ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ, ಅದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ ಮತ್ತು ದೇಹಕ್ಕೆ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ, ಇದರಿಂದಾಗಿ ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.

    ಊಟದ ನಂತರ ಈ ಅಭ್ಯಾಸಗಳು ನಿಮ್ಮಲ್ಲಿ ಯಾರಿಗಾದರೂ ಇದ್ದರೆ ಈ ಕೂಡಲೇ ಬಿಟ್ಟುಬಿಡಿ. ಆರೋಗ್ಯಯು ಜೀವನ ಇದ್ದರೆ ಮಾತ್ರ ಈ ಜಗತ್ತಿನ ಸರ್ವವನ್ನು ಅನುಭವಿಸಬಹುದು. ಆರೋಗ್ಯವಾಗಿ ಇಲ್ಲದಿದ್ದರೆ ಸುಂದರ ಜಗತ್ತು ಕೂಡ ನರಕದಂತೆ ಭಾಸವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. (ಏಜೆನ್ಸೀಸ್​)

    ಟಿ20ಯಲ್ಲಿ 427 ರನ್ ಸಿಡಿಸಿದ ಅರ್ಜೆಂಟೀನಾ! : 364 ರನ್‌ಗಳಿಂದ ಗೆಲುವಿನ ದಾಖಲೆ

    ಶ್ರೀಲೀಲಾ ಅವರ ಪಾತ್ರವನ್ನು ಎಲ್ಲರೂ ಮೆಚ್ಚುತ್ತಾರೆ: ನಿರ್ದೇಶಕ ಅನಿಲ್ ರವಿಪುಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts