More

    ಟಿ20ಯಲ್ಲಿ 427 ರನ್ ಸಿಡಿಸಿದ ಅರ್ಜೆಂಟೀನಾ! : 364 ರನ್‌ಗಳಿಂದ ಗೆಲುವಿನ ದಾಖಲೆ

    ಬ್ಯೂನಸ್ ಐರಿಸ್: ಅರ್ಜೆಂಟೀನಾ ಹಾಗೂ ಚಿಲಿ ಮಹಿಳಾ ತಂಡಗಳ ನಡುವಿನ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಹಲವು ನೂತನ ವಿಶ್ವದಾಖಲೆ ಸೃಷ್ಟಿಯಾಗಿವೆ. ಶುಕ್ರವಾರ ನಡೆದ ಪಂದ್ಯದಲ್ಲಿ ಚಿಲಿ ಎದುರು ಅರ್ಜೇಂಟಿನಾ ತಂಡ 364 ರನ್‌ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಅರ್ಜೆಂಟೀನಾ, ಆರಂಭಿಕರಾದ ಲೂಸಿಯಾ ಟೇಲರ್ (169 ರನ್, 84 ಎಸೆತ, 27 ಬೌಂಡರಿ) ಹಾಗೂ ಅಲ್‌ಬರ್ಟಿನ ಗಲಾನ್ (145* ರನ್, 84 ಎಸೆತ, 23 ಬೌಂಡರಿ) ಸ್ಫೋಟಕ ಶತಕಗಳ ನೆರವಿನಿಂದ ಮೊದಲ ವಿಕೆಟ್‌ಗೆ ಪೇರಿಸಿದ 350 ರನ್ ಜತೆಯಾಟದಿಂದ 1 ವಿಕೆಟ್‌ಗೆ 427 ರನ್ ಬೃಹತ್ ಮೊತ್ತ ಗಳಿಸಿತು. ಇದರೊಂದಿಗೆ ಅರ್ಜೇಂಟಿನಾ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ 400 ಪ್ಲಸ್ ಮೊತ್ತ ಪೇರಿಸಿದ ಮೊದಲ ತಂಡ ಎನಿಸಿತು. ಬಹರೇನ್ ತಂಡ 318 ರನ್ ಪೇರಿಸಿದ್ದು ಹಿಂದಿನ ಗರಿಷ್ಠ. ಜತೆಗೆ ಲೂಸಿಯಾ ಟೇಲರ್ (169) ಮಹಿಳಾ ಟಿ20ಯಲ್ಲಿ ವೈಯಕ್ತಿಕ ಗರಿಷ್ಠ ರನ್‌ಗಳಿಸಿದ ಬ್ಯಾಟರ್ ಎನಿಸಿದರು. ಬರೋಬ್ಬರಿ 73 ಇತರೆ ರನ್ ನೀಡಿದ ಚಿಲಿ ಬೌಲರ್‌ಗಳು 64 ನೋಬಾಲ್ ಮಾಡಿದರು. ಒಂದೇ ಓವರ್‌ನಲ್ಲಿ 52 ರನ್ ಬಿಟ್ಟುಕೊಟ್ಟಿತು. ವಿಶೇಷ ಎಂದರೆ ಈ ಪಂದ್ಯದಲ್ಲಿ ಒಂದು ಸಿಕ್ಸರ್ ಸಹ ಸಿಡಿಯಲಿಲ್ಲ. ಆದರೆ 62 ಬೌಂಡರಿಗಳಿದ್ದವು. ಪ್ರತಿಯಾಗಿ ಚಿಲಿ ತಂಡ 15 ಓವರ್‌ಗಳಲ್ಲಿ 63 ರನ್‌ಗಳಿಗೆ ಸರ್ವಪತನ ಕಂಡಿತು.

    https://x.com/imfemalecricket/status/1713076639461179479?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts