More

    ಖ್ಯಾತ ಆಹಾರ ತಜ್ಞ, ವಿಶ್ಲೇಷಕ ಕೆ.ಸಿ. ರಘು ನಿಧನ

    ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ಆಹಾರ ತಜ್ಞ, ಲೇಖಕ, ವಿಶ್ಲೇಷಕ ಕೆ.ಸಿ. ರಘು ಅವರು ಇಂದು (ಅ.15) ಕೊನೆಯುಸಿರೆಳೆದಿದ್ದಾರೆ.

    ಕೆ.ಸಿ. ರಘು ಅವರ ಸಾವಿನ ಸುದ್ದಿಯನ್ನು ಅವರ ಪತ್ನಿ ಆಶಾ ಅವರು ಖಚಿತಪಡಿಸಿದ್ದಾರೆ. ನನ್ನ ಪತಿ ಕೆ.ಸಿ.ರಘು ಅವರು ಭಾನುವಾರ ಬೆಳಗಿನ ಜಾವ ಸುಮಾರು 7.30ಕ್ಕೆ ನಮ್ಮನ್ನು ಅಗಲಿದ್ದಾರೆ. ಅವರು ಶ್ವಾಸಕೋಶ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಅಂತಿಮ ದರ್ಶನ ಮಾಡಲು ಇಚ್ಛಿಸುವವರು ಈ ಕೆಳಗಿನ ವಿಳಾಸಕ್ಕೆ ಬರಬಹುದು ಎಂದು ಆಶಾ ಅವರು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ಅಂತಿಮ ದರ್ಶನಕ್ಕೆ ಹೋಗಲು ಇಚ್ಛಿಸುವವರು ಎ-403, 4ನೇ ಮಹಡಿ, ಬ್ರಿಗೇಡ್​ ಕಲಡಿಯಂ, ದಾಸರಹಳ್ಳಿ ಮುಖ್ಯರಸ್ತೆ, ಅಮೃತನಗರ, ದಾಸರಹಳ್ಳಿಗೆ ಹೋಗಬಹುದಾಗಿದೆ.

    ರಘು ಅವರು ಆಹಾರ ಆರೋಗ್ಯ ವಿಚಾರದಲ್ಲಿ ಅತ್ಯದ್ಭುತ ಜ್ಞಾನವನ್ನು ಹೊಂದಿದ್ದರು. ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಉತ್ತಮವಾದ ಅರಿವು ಹೊಂದಿದ್ದ ರಘು ಅವರು ನಿರರ್ಗಳವಾಗಿ ಮಾತನಾಡುತ್ತಿದ್ದಾರೆ. ಇವರು ಅನೇಕ ಟಿವಿ ವಿಶ್ಲೇಷಣೆಗಳಲ್ಲಿ ಭಾಗಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಆಹಾರ ಕಾಳಜಿಯ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ.

    ಕೆ.ಸಿ. ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಅಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿದ್ದಾರೆ. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ.

    ಅಗಾಧವಾದ ಜ್ಞಾನ ಸಂಪತ್ತು ಹೊಂದಿದ್ದ ರಘು ಅವರು ಅಕಾಲಿಕವಾಗಿ ಮರಣ ಹೊಂದಿರುವುದು ತುಂಬಲಾರದ ನಷ್ಟವಾಗಿದೆ ಎಂದು ಆಪ್ತ ವಲಯ ಸಾವಿಗೆ ಕಂಬನಿ ಮಿಡಿದಿದೆ.

    ಕೆಲವರ ತಲೆಯಲ್ಲಿ ಬರೀ ಅಕ್ಷರಗಳಿರುತ್ತವೆ, ಇನ್ನು ಕೆಲವರ ತಲೆಯಲ್ಲಿ ಒಂದಷ್ಟು ಪುಸ್ತಕಗಳಿರುತ್ತವೆ ಆದರೆ, ಕೆ.ಸಿ.ರಘು ಅವರಂತಹ ತಲೆಗಳಲ್ಲಿ ಗ್ರಂಥಾಲಯವೇ ಇತ್ತು. ಅವರನ್ನು ಕಳೆದುಕೊಂಡ ನಾವೆಲ್ಲ ಬಡವಾಗಿದ್ದೇವೆ. ಇಂತಹ ಒಂದು ಪ್ರತಿಭೆಯನ್ನು ಕನಿಷ್ಠ ನನ್ನ ಜೀವಮಾನದಲ್ಲಿ ಕಾಣುವುದು ಕಷ್ಟ ಮತ್ತು ತುಂಬಲಾರದ ನಷ್ಟ ಎಂದು ಹಿರಿಯ ಪತ್ರಕರ್ತ ದಿನೇಶ್​ ಅಮಿನ್​ ಅವರು ಸಂತಾಪ ಸೂಚಿಸಿದ್ದಾರೆ.

    ಇಸ್ರೇಲ್​ ಪ್ರಧಾನಿಯನ್ನು ಭೂತ ಎಂದ ಅಸಾದುದ್ದೀನ್​ ಓವೈಸಿ! ಪ್ಯಾಲೆಸ್ತೀನ್ ಪರ ನಿಲ್ಲಲು ಪ್ರಧಾನಿ ಮೋದಿಗೆ ಒತ್ತಾಯ

    ಆಪರೇಷನ್​ ಅಜಯ್​: ಯುದ್ಧ ಪೀಡಿತ ಇಸ್ರೇಲ್​ನಿಂದ 3ನೇ ವಿಮಾನದಲ್ಲಿ ತಾಯ್ನಾಡಿಗೆ ಮರಳಿದ 197 ಭಾರತೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts