More

    ಇಸ್ರೇಲ್​ ದಾಳಿಗೆ ಹಮಾಸ್​ನ ಟಾಪ್​ ಕಮಾಂಡರ್​ ಸಾವು: ಸಂಘಟಿತ ದಾಳಿ ನಡೆಸಲು ಐಡಿಎಫ್​ ಸಜ್ಜು

    ಜೆರುಸಲೇಂ: ಇಸ್ರೇಲ್​ ಸೇನೆ ಮತ್ತು ಹಮಾಸ್​ ಉಗ್ರರ ನಡುವಿನ ಯುದ್ಧ 7ನೇ ದಿನ ಪ್ರವೇಶಿಸಿದೆ. ಭೂಸೇನೆ, ವಾಯು ಮತ್ತು ನೌಕಾಪಡೆ ಒಳಗೊಂಡಂತೆ ಗಾಜಾ ಪಟ್ಟಿಯ ಮೇಲೆ ಸಂಘಟಿತ ದಾಳಿಗೆ ರೆಡಿಯಾಗಿರುವುದಾಗಿ ಇಸ್ರೇಲ್​ ರಕ್ಷಣಾ ಪಡೆ (ಐಡಿಎಫ್​) ತಿಳಿಸಿದೆ.

    ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಗಾಜಾ ಗಡಿಯ ಬಳಿ ತಮ್ಮ ಸೈನಿಕರನ್ನು ಭೇಟಿ ಮಾಡಿದ ಬೆನ್ನಲ್ಲೇ ಇಸ್ರೇಲ್​ ಸೇನೆ ಗಾಜಾ ಪಟ್ಟಿಗೆ ಮೇಲೆ ಸಂಘಟಿತ ದಾಳಿ ಮಾಡಲು ಸನ್ನದ್ಧವಾಗಿದೆ. ಇದರ ನಡುವೆ ಇಸ್ರೇಲ್​, ಗಾಜಾ ಮೇಲಿನ ವಾಯು ದಾಳಿಯನ್ನು ಮುಂದುವರಿಸಿದ್ದು, ಶನಿವಾರ ನಡೆಸಿದ ದಾಳಿಯಲ್ಲಿ ಹಮಾಸ್​ನ ಉನ್ನತ ಕಮಾಂಡರ್​ ಬಿಲಾಲ್​ ಅಲ್​-ಖೆದ್ರಾ ಹತ್ಯೆಯಾಗಿದೆ.

    ಈ ಅಲ್​ ಖೆದ್ರಾ, ಹಮಾಸ್‌ನ ಪ್ರಮುಖ ಸೇನಾ ವಿಭಾಗ ನುಖ್ಬಾ ಪಡೆಯ ಟಾಪ್​ ಕಮಾಂಡರ್​. ದಕ್ಷಿಣ ಇಸ್ರೇಲ್​ನ ಕಿಬ್ಬುಟ್ಜ್ ನಿರಿಮ್ ಮತ್ತು ನಿರ್ ಓಜ್ ಪ್ರದೇಶದ ಮೇಲೆ ನಡೆದ ಮಾರಣಾಂತಿಕ ದಾಳಿಗೆ ಖೆದ್ರಾ ಪ್ರಮುಖ ಸಂಚುಕೋರನಾಗಿದ್ದ. ಖೆದ್ರಾ ಹತ್ಯೆಯ ಜತೆಗೆ ಹಮಾಸ್ ಮತ್ತು ಪ್ಯಾಲೆಸ್ತೀನಿಯನ್ ಇಸ್ಲಾಮಿಕ್ ಜಿಹಾದ್‌ನಲ್ಲಿರುವ ಇತರ ಕಾರ್ಯಕರ್ತರನ್ನು ಸಹ ನಿರ್ಮೂಲನೆ ಮಾಡಲಾಯಿತು ಎಂದು ಐಡಿಎಫ್​ ಮಾಹಿತಿ ನೀಡಿದೆ.

    ಇದನ್ನೂ ಓದಿ: ನಾಡದೇವತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾಗೆ ನಾದಬ್ರಹ್ಮ ಹಂಸಲೇಖ ಚಾಲನೆ

    ಪ್ಯಾಲೆಸ್ತೀನ್​ನ ಗಾಜಾ ಪಟ್ಟಿಯ ಮೇಲೆ ವಾಯು, ನೆಲ ಮತ್ತು ನೌಕಾ ಪಡೆಗಳನ್ನು ಒಳಗೊಂಡ ‘ಸಂಯೋಜಿತ’ ದಾಳಿಗೆ ಸಿದ್ಧವಾಗಿದೆ ಎಂದು ಇಸ್ರೇಲಿ ಸೇನೆ ಘೋಷಿಸಿದೆ. ಈ ಮೂಲಕ ಗಾಜಾದಲ್ಲಿ ವಿಸ್ತೃತ ಶ್ರೇಣಿಯಲ್ಲಿ ಆಕ್ರಮಣಕಾರಿ ಆಪರೇಟಿವ್ ಯೋಜನೆಗಳನ್ನು ಜಾರಿಗೆ ತರಲು ಐಡಿಎಫ್​ ತಯಾರಿ ನಡೆಸುತ್ತಿದೆ. ಗಾಜಾ ನಗರವನ್ನು ವಶಪಡಿಸಿಕೊಳ್ಳಲು ಇಸ್ರೇಲ್ 10,000 ಸೈನಿಕರನ್ನು ಕಳುಹಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.

    ಹಮಾಸ್ ವಿರುದ್ಧದ ಹೋರಾಟದಲ್ಲಿ ಇಸ್ರೇಲ್ ಅನ್ನು ಬೆಂಬಲಿಸಲು ಯುನೈಟೆಡ್ ಸ್ಟೇಟ್ಸ್ ಎರಡನೇ ನೌಕಾಪಡೆಯ ಗುಂಪನ್ನು ಕಳುಹಿಸಲು ಯೋಜಿಸುತ್ತಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

    ಕನಿಷ್ಠ 6,000 ಬಾಂಬ್ ಬಳಕೆ
    ಘರ್ಷಣೆ ಆರಂಭವಾದ ನಂತರ ಈವರೆಗೆ ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಮೇಲೆ 4,000 ಟನ್ ತೂಕದ ಕನಿಷ್ಠ 6,000 ಬಾಂಬ್​ಗಳನ್ನು ಸ್ಪೋಟಿಸಿದ್ದಾರೆ ಎನ್ನಲಾಗಿದೆ. ಯುದ್ಧದ ಆರನೇ ದಿನವಾದ ಶುಕ್ರವಾರ ಮುಂಜಾನೆ ಆರಂಭವಾದ ಕಾರ್ಯಾಚರಣೆಯಲ್ಲಿ ಹತ್ತಾರು ಫೈಟರ್ ಜೆಟ್​ಗಳು, ಹೆಲಿಕಾಪ್ಟರ್ ಗನ್​ಶಿಪ್​ಗಳು ಮತ್ತು ವಿಮಾನಗಳು ಭಾಗಿಯಾಗಿದ್ದವು. ದಕ್ಷಿಣ ಗಾಜಾದಲ್ಲಿ ರಫಾ ಬ್ರಿಗೇಡ್​ನ ಯುದ್ಧ ನಿರ್ವಹಣಾ ಕೊಠಡಿಯನ್ನು ನಾಶಪಡಿಸಲಾಗಿದೆ. ಕಮಾಂಡ್ ಮತ್ತು ಕಂಟ್ರೋಲ್, ಮಿಲಿಟರಿ ಮೂಲಸೌಕರ್ಯಗಳು, ಯುದ್ಧಸಾಮಗ್ರಿ ಉತ್ಪಾದನಾ ತಾಣಗಳು, ಗುಪ್ತಚರ ಕಚೇರಿ, ನೌಕಾ ಪಡೆ ಇನ್ನಿತರ ಟಾರ್ಗೆಟ್​ಗಳ ಮೇಲೆ ಇಸ್ರೇಲ್ ಸೇನೆ ದಾಳಿ ನಡೆಸುತ್ತಿದೆ. (ಏಜೆನ್ಸೀಸ್​)

    ಗಾಜಾಪಟ್ಟಿ ಒಳಕ್ಕೆ ನುಗ್ಗಿದ ಇಸ್ರೇಲ್ ಪಡೆ; ಸರ್ಕಾರದಿಂದಲೇ ಅಧಿಕೃತ ಘೋಷಣೆ

    ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲ್ ಮಕ್ಕಳ ವಿಡಿಯೋ ಬಿಡುಗಡೆ ಮಾಡಿದ ಹಮಾಸ್

    ಇಸ್ರೆಲ್​ ಜತೆ ಸೌದಿ ಒಪ್ಪಂದ ಕಡಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts