More

    ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲ್ ಮಕ್ಕಳ ವಿಡಿಯೋ ಬಿಡುಗಡೆ ಮಾಡಿದ ಹಮಾಸ್

    ಇಸ್ರೇಲ್: ಇಸ್ರೇಲ್-ಹಮಾಸ್ ಸಂಘರ್ಷ 8ನೇ ದಿನಕ್ಕೆ ಕಾಲಿಟ್ಟಿದೆ. ಏತನ್ಮಧ್ಯೆ, ಹಮಾಸ್ ಇಸ್ರೇಲಿ ಮಕ್ಕಳ ವಿಡಿಯೋ ಕ್ಲಿಪ್ ಬಿಡುಗಡೆ ಮಾಡಿದೆ. ಮಕ್ಕಳನ್ನು ದಕ್ಷಿಣ ಇಸ್ರೇಲ್ ಮೇಲೆ ಮಾರಣಾಂತಿಕ ದಾಳಿಯ ಸಮಯದಲ್ಲಿ ಒತ್ತೆಯಾಳಾಗಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಹಮಾಸ್ ಗುಂಪು ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದೆ.

    ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆದ ದಾಳಿಯ ಸಮಯದಲ್ಲಿ ಭಯೋತ್ಪಾದಕ ಗುಂಪು ಹಮಾಸ್‌ನಿಂದ ದಕ್ಷಿಣ ಇಸ್ರೇಲ್‌ನ ಗಾಜಾ ಗಡಿಗೆ ಸಮೀಪದಲ್ಲಿರುವ ಕಿಬ್ಬುಟ್ಜ್ ಹೋಲಿಟ್ ಭೀಕರ ದೌರ್ಜನ್ಯಕ್ಕೆ ಸಾಕ್ಷಿಯಾಗಿದೆ.

    ದಿ ಜೆರುಸಲೆಮ್ ಪೋಸ್ಟ್ ಪ್ರಕಾರ, ಕಿಬ್ಬುಟ್ಜ್ ಹೋಲಿಟ್ ಮೇಲಿನ ದಾಳಿಯಲ್ಲಿ 13 ಜನ ಇಸ್ರೇಲ್​​​​ ಮಂದಿ ಕೊಲ್ಲಲ್ಪಟ್ಟರು. ಇಸ್ರೇಲ್ ಮಾಧ್ಯಮಗಳ ಪ್ರಕಾರ, ವಿಡಿಯೋದಲ್ಲಿ ಕಂಡುಬರುವ ಮಕ್ಕಳನ್ನು ಇನ್ನೂ ಗುರುತಿಸಲಾಗಿಲ್ಲ. ಅವರನ್ನು ಕರೆದೊಯ್ಯುವಾಗ ಅವರ ಪೋಷಕರನ್ನು ಕೊಲೆ ಮಾಡಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.

    IDF X ನಲ್ಲಿ ಶೇರ್ ಆದ ವಿಡಿಯೋ
    IDF (ಇಸ್ರೇಲ್ ರಕ್ಷಣಾ ಪಡೆ) ತನ್ನ ಸಾಮಾಜಿಕ ಮಾಧ್ಯಮ ‘X’ ನಲ್ಲಿ ಪೋಸ್ಟ್ ಮಾಡಿತು, ಮಕ್ಕಳನ್ನು ಹಮಾಸ್ ಉಗ್ರಗಾಮಿಗಳು ತಮ್ಮ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಈ ಮಕ್ಕಳನ್ನು ಹಮಾಸ್ ಭಯೋತ್ಪಾದಕರು ತಮ್ಮ ಸ್ವಂತ ಮನೆಗಳಲ್ಲಿ ಒತ್ತೆಯಾಳಾಗಿಸಿಕೊಂಡಿರುವುದರಿಂದ ಅವರ ಗಾಯಗಳನ್ನು ನೀವು ನೋಡಬಹುದು, ಕಿರುಚಾಟವನ್ನು ಕೇಳಬಹುದು, ಮತ್ತವರು ಭಯದಿಂದ ನಡುಗುತ್ತಿದ್ದಾರೆ. ಅವರ ಪೋಷಕರು ಅಕ್ಕಪಕ್ಕದಲ್ಲಿದ್ದಾರೆ. ಇವರೇ ನಾವು ಸೋಲಿಸಲು ಹೊರಟಿರುವ ಭಯೋತ್ಪಾದಕರು ಎಂದು ಪೋಸ್ಟ್ ಹೇಳಿದೆ.
    ಕಿಬ್ಬುಟ್ಜ್ ಹೋಲಿಟ್ ಮೇಲಿನ ದಾಳಿಯ ಸಮಯದಲ್ಲಿ ಗುಂಡಿನ ದಾಳಿಗೆ ಕಟ್ಟಡಗಳು, ಸುಟ್ಟುಹೋದ ವಾಹನಗಳು ಮತ್ತು ಒಡೆದ ಗಾಜುಗಳು ಕಾಣಿಸಿಕೊಂಡವು. ಭಯೋತ್ಪಾದಕರು ಬಿಟ್ಟು ಹೋಗಿರುವ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೂ ಅಲ್ಲೊಂದು ಇಲ್ಲೊಂದು ಬಿದ್ದಿರುವುದು ಕಂಡುಬರುತ್ತದೆ. ದಾಳಿಯ ನಂತರ, ಮಿಲಿಟರಿ ಟ್ಯಾಂಕ್‌ಗಳನ್ನು ಹೊಂದಿರುವ ಇಸ್ರೇಲಿ ರಕ್ಷಣಾ ಪಡೆಗಳನ್ನು ನಗರದಾದ್ಯಂತ ನಿಯೋಜಿಸಲಾಗಿದೆ.

    ಒತ್ತೆಯಾಳಾಗಿರಿಸಿಕೊಂಡ ಹಮಾಸ್
    ಕಿಬ್ಬುಟ್ಜ್ ಹೋಲಿಟ್ ದೃಶ್ಯಗಳು ಹಮಾಸ್ ಉಗ್ರಗಾಮಿಗಳು ಮಾಡಿದ ದುಷ್ಕೃತ್ಯಗಳ ಫಲಿತಾಂಶಗಳನ್ನು ತೋರಿಸುತ್ತವೆ. ಅವರು ಮನೆ-ಮನೆಗೆ ಹೋಗಿ ನಿವಾಸಿಗಳನ್ನು ಕೊಲ್ಲುತ್ತಿದ್ದಾರೆ ಅಥವಾ ಅವರನ್ನು ಒತ್ತೆಯಾಳಾಗಿ ಇಟ್ಟಿಕೊಂಡಿದ್ದಾರೆಂದು ವರದಿಯಾಗಿದೆ. ತನ್ನ ಕುಟುಂಬ ಸದಸ್ಯರನ್ನು ಹಮಾಸ್ ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ ಎಂದು ನಿವಾಸಿ ಗಿಲ್ಲಿ ಹೇಳಿದ್ದಾರೆ. ಅವರು ತಮ್ಮ ಸಹೋದರಿಯ ಬಗ್ಗೆ ಮಾತನಾಡುವಾಗ ಅಳುತ್ತಿದ್ದರು. ಏತನ್ಮಧ್ಯೆ ನ್ಯೂಯಾರ್ಕ್‌ನಲ್ಲಿ ಶಿಶುಗಳು, ವೃದ್ಧ ಪುರುಷರು ಮತ್ತು ಮಹಿಳೆಯರು ಸೇರಿದಂತೆ ಇಸ್ರೇಲಿ ಒತ್ತೆಯಾಳುಗಳ ಫೋಟೋಗಳನ್ನು ಯುಎನ್ ಪ್ರಧಾನ ಕಚೇರಿಯ ಕಟ್ಟಡದ ಬದಿಯಲ್ಲಿ ಪ್ರದರ್ಶಿಸಲಾಯಿತು.

    ಗಾಜಾದಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯಿಂದ 120 ಕ್ಕೂ ಹೆಚ್ಚು ನಾಗರಿಕರನ್ನು ಸೆರೆಹಿಡಿಯಲಾಗಿದೆ ಎಂದು IDF ಹೇಳಿದೆ. IDF ಪ್ರಕಾರ, ಇಸ್ರೇಲ್ ಮೇಲೆ ಹಮಾಸ್ ಭಯೋತ್ಪಾದಕ ದಾಳಿಯಲ್ಲಿ 1,300 ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    Assembly Elections 2023: ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದವರಿವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts