More

    ಇಸ್ರೆಲ್​ ಜತೆ ಸೌದಿ ಒಪ್ಪಂದ ಕಡಿತ

    ರಿಯಾದ್​: ಇಸ್ರೇಲ್​ ಸೇನೆ ಮತ್ತು ಹಮಾಸ್‌ ಉಗ್ರರ ಯುದ್ಧದ ಮಧ್ಯೆ ಸೌದಿ ಅರೇಬಿಯಾವು ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಗಳನ್ನು ಸ್ಥಗಿತಗೊಳಿಸಿದೆ.
    ಸೌದಿ ಅರೇಬಿಯಾವು ಇಸ್ರೇಲ್ ನೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಮುರಿದುಕೊಂಡಿರುವುದರ ಜತೆಗೆ ಹಮಾಸ್​ ಮತ್ತು ಇಸ್ರೇಲ್​ ನಡುವೆ ಶಾಂತಿ ಮಾತುಕತೆಗಳಲ್ಲಿ ಸಹ ಭಾಗವಹಿಸದಿರಲು ತೀರ್ಮಾನಿಸಿದೆ.

    ಇದನ್ನೂ ಓದಿ: ಆ ಫಾಂಟ್ ಬಳಸಿ ಪಾಕ್ ಮಾಜಿ ಪ್ರಧಾನಿ ನವಾಜ್​ ಷರೀಫ್​ ಜೈಲು ಸೇರಬೇಕಾಯ್ತು!

    ಇದೇ ವಿಷಯವನ್ನು ಅಮೆರಿಕಾ ಅಧಿಕಾರಿಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ.
    ಇಸ್ರೇಲ್​ ಅರಬ್​ಲೀಗ್​ ನೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಯತ್ನಿಸುತ್ತಲೇ ಬಂದಿದೆ. ಇದರ ಭಾಗವಾಗಿ 1979ರಲ್ಲಿ ಈಜಿಫ್ಟ್​ ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದೇ ಸಂದರ್ಭದಲ್ಲಿ ಯೂಎಇ, ಬಹ್ರೇನ್ ನಂಥ ದೇಶಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿತ್ತು. ಇದಕ್ಕೆ ಅಮೆರಿಕಾ ಸಹಕರಿಸಿತ್ತು. ಇತ್ತೀಚೆಗೆ ಸೌದಿ ಅರೆಬಿಯಾವನ್ನು ಈ ಪಟ್ಟಿಗೆ ಸೇರಿಸಲು ಅಮೆರಿಕಾ ಶತಪ್ರಯತ್ನ ನಡೆಸಿತ್ತು. ಆದರೆ ಪ್ರಸ್ತುತ ನಡೆಯುತ್ತಿರುವ ಯುದ್ಧದಿಂದಾಗಿ ಅಮೆರಿಕಾ ಪ್ರಯತ್ನ ಮಣ್ಣುಪಾಲಾಗಿದೆ. ಅಲ್ಲದೆ ಇಂಥ ಸಂದರ್ಭದಲ್ಲಿ ಒಪ್ಪಂದ ವಿಷಯದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಸೌದಿ ಇಂತಹ ನಿರ್ಣಯಕ್ಕೆ ಬಂದಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

    ಅರಬ್​ ದೇಶಗಳ ಒಕ್ಕೂಟದಲ್ಲಿ ಸೌದಿ ಪ್ರಮುಖ ದೇಶ. ಇಸ್ರೇಲ್​ನೊಂದಿಗೆ ಸೌದಿ ಸಂಬಂಧಗಳನ್ನು ಬಲಪಡಿಸಿಕೊಂಡರೆ ಇತರ ಮುಸ್ಲಿಂ ರಾಷ್ಟ್ರಗಳ ವಿರೋಧ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಇಂತಹ ತೀರ್ಮಾನಕ್ಕೆ ಬಂದಿದೆ ಎನ್ನಲಾಗುತ್ತಿದೆ. ಇನ್ನು ಯುದ್ಧ ಭೀಕರತೆ ಪಡೆದುಕೊಂಡಿರುವುದರಿಂದ ಭಾವನಾತ್ಮಕವಾಗಿ ಪಾಲೇಸ್ತೇನ್​ ಜತೆ ಇರುವ ಇರಾನ್​ ಮತ್ತಿತರ ದೇಶಗಳು ಇಂತಹುದೇ ತೀರ್ಮಾನ ತೆಗೆದುಕೊಳ್ಳಬಹುದು ಎನ್ನಲಾಗುತ್ತಿದೆ.

    ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಪಾಕ್‌ ತಂಡಕ್ಕೆ ಅಗೌರವ ತೋರಬೇಡಿ: ಟೀಂ ಇಂಡಿಯಾ ಫ್ಯಾನ್ಸ್‌ಗೆ ಗಂಭೀರ್‌ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts