More

    ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಪಾಕ್‌ ತಂಡಕ್ಕೆ ಅಗೌರವ ತೋರಬೇಡಿ: ಟೀಂ ಇಂಡಿಯಾ ಫ್ಯಾನ್ಸ್‌ಗೆ ಗಂಭೀರ್‌ ಸೂಚನೆ

    ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದ ದಿನ ಬಂದಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಹುಕಾಲದ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಈ ನಡುವೆ ಎದುರಾಳಿ ತಂಡದ ಆಟಗಾರರನ್ನೂ ವ್ಯಂಗ್ಯಮಾಡುವ ಪ್ರಸಂಗಗಳೂ ಕಂಡುಬಂದಿದ್ದು, ಅಂತಹ ಅಭಿಮಾನಿಗಳಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್‌ ಗಂಭೀರ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಟಾಸ್ ನಂತರ ಸುದ್ದಿವಾಹಿನಿ ಜತೆ ಮಾತನಾಡುವಾಗ ಗಂಭೀರ್,  ವಿಶ್ವಕಪ್‌ನಲ್ಲಿ ಭಾಗವಹಿಸಲು ಬಂದಿರುವ ಪಾಕಿಸ್ತಾನ ತಂಡಕ್ಕೆ ಅಗೌರವಗೊಳಿಸಬೇಡಿ. ನಿಮ್ಮ ತಂಡವನ್ನು ಬೆಂಬಲಿಸಿ. ಆದರೆ ಅಸಭ್ಯವಾಗಿ ವರ್ತಿಸಬೇಡಿ. ಅವರು ನಿಮ್ಮ ಅತಿಥಿಗಳು. ವಿಶ್ವಕಪ್ ಆಡಲು ಇಲ್ಲಿಗೆ ಬಂದಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು’ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ

    ಪಾಕಿಸ್ತಾನಿ ಅಭಿಮಾನಿಗಳು ವೀಸಾ ಪಡೆಯಲು ಸಾಧ್ಯವಾಗದ ಕಾರಣ ನರೇಂದ್ರ ಮೋದಿ ಸ್ಟೇಡಿಯಂ ಹೌಸ್​​​ಫುಲ್​ ಆಗಿದ್ದು, ಬಹುತೇಕ ನೀಲಿ ಬಣ್ಣದಲ್ಲಿ ಕಾಣುತ್ತಿದೆ. ಈ ಪಂದ್ಯದಲ್ಲಿ ಸುಮಾರು 1,20,000 ಪ್ರೇಕ್ಷಕರು ಭಾಗವಹಿಸಿದ್ದಾರೆ ಎನ್ನಲಾಗಿದೆ.

    ಇನ್ನು ಪಂದ್ಯದ ವಿಷಯಕ್ಕೆ ಬಂದರೆ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟಾಯಿತು. ಪಾಕ್ ಬ್ಯಾಟ್ಸ್ ಮನ್ ಗಳಲ್ಲಿ ಬಾಬರ್ ಅಜಮ್ (50) ಅರ್ಧಶತಕ ಗಳಿಸಿದರು. ಮೊಹಮ್ಮದ್ ರಿಜ್ವಾನ್ (49) ಒಂದು ರನ್‌ನಿಂದ ಅರ್ಧಶತಕ ವಂಚಿತರಾದರು. ಇಮಾಮ್ ಉಲ್ ಹಕ್ (36) ಮಿಂಚಿದರು. ಭಾರತದ ಬೌಲರ್‌ಗಳಲ್ಲಿ ಬುಮ್ರಾ, ಸಿರಾಜ್, ಕುಲದೀಪ್, ಹಾರ್ದಿಕ್ ಮತ್ತು ಜಡೇಜಾ ತಲಾ ಎರಡು ವಿಕೆಟ್ ಪಡೆದರು.

    ಮಹಿಳೆಯರು ಅಂದ್ರೆ ಭಯ; 55 ವರ್ಷಗಳಿಂದ ತನ್ನ ಮನೆಗೆ ಬೀಗ ಹಾಕಿಕೊಂಡು ವಾಸಿಸುತ್ತಿರುವ 71 ವರ್ಷದ ವ್ಯಕ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts