More

    ಗೌತಮ್​ ಗಂಭೀರ್​ ಜತೆ ಜಗಳ ಆಡದೇ ಇದ್ದಿದ್ದರೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗ್ತಿತ್ತು ಎಂದ ಮಾಜಿ ಕ್ರಿಕೆಟಿಗ!

    ನವದೆಹಲಿ: ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಬ್ಯಾಟ್ಸ್​ಮನ್​ ಮನೋಜ್​ ತಿವಾರಿ ಕೆಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಕ್ರೀಡಾಲೋಕದಲ್ಲಿ ಬಹಳ ಚರ್ಚೆಗೆ ಗ್ರಾಸವಾಗಿದೆ. ಶತಕ ಬಾರಿಸಿದರು ಕೂಡ ಅಂದಿನ ಕ್ಯಾಪ್ಟನ್​ ಧೋನಿ ನನ್ನನ್ನು ತಂಡದಿಂದ ಕೈಬಿಟ್ಟರು ಎಂಬ ಹೇಳಿಕೆ ಒಂದೆಡೆಯಾದರೆ, ಮಾಜಿ ಬ್ಯಾಟ್ಸ್​ಮನ್​ ಗೌತಮ್​ ಗಂಭೀರ್​ ಜತೆ ಡ್ರೆಸ್ಸಿಂಗ್​ ರೂಮ್​ನಲ್ಲಿ ಜಗಳವಾಡಿದ್ದೆ ಎಂದು ತಿವಾರಿ ಬಹಿರಂಗಪಡಿಸಿದ್ದಾರೆ.

    Manoj Tiwariಅಂದಹಾಗೆ ತಿವಾರಿ ಅವರು ಟೀಮ್​ ಇಂಡಿಯಾವನ್ನು 12 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. 2013ರ ಐಪಿಎಲ್​ ಆವೃತ್ತಿಯಲ್ಲಿ ಗಂಭೀರ ನಾಯಕತ್ವದ ಅಡಿಯಲ್ಲಿ ಕೋಲ್ಕತ ನೈಟ್​ ರೈಡರ್ಸ್​ (ಕೆಕೆಆರ್​) ಪರ ಆಡುವಾಗ ನಡೆದ ಘಟನೆಯನ್ನು ಆನಂದ್​ಬಜಾರ್​ ಪತ್ರಿಕೆಯ ಸಂದರ್ಶನದಲ್ಲಿ ತಿವಾರಿ ಮೆಲಕು ಹಾಕಿದ್ದಾರೆ.

    ನಾನು ಕೆಕೆಆರ್​ ತಂಡವನ್ನು ಪ್ರತಿನಿಧಿಸಿದ ಸಂದರ್ಭದಲ್ಲಿ ಗಂಭೀರ್​ ಜತೆ ಡ್ರೆಸ್ಸಿಂಗ್​ ರೂಮ್​ನಲ್ಲಿ ದೊಡ್ಡದಾಗಿ ಜಗಳ ಮಾಡಿಕೊಂಡಿದ್ದೆ. ಇದು ಎಂದಿಗೂ ಬೆಳಕಿಗೆ ಬರಲಿಲ್ಲ. 2012ರಲ್ಲಿ ಕೆಕೆಆರ್​ ಚಾಂಪಿಯನ್​ ಆಯಿತು. ಹೀಗಾಗಿ ಮತ್ತೊಂದು ವರ್ಷ ಐಪಿಎಲ್​ ಆಡಲು ನನಗೆ ಅವಕಾಶ ದೊರೆಯಿತು. 2013ರಲ್ಲಿ ನಾನೇನಾದರೂ ಗಂಭೀರ್​ ಜತೆ ಜಗಳ ಆಡದೇ ಇದ್ದಿದ್ದರೆ ಇನ್ನೂ ಎರಡ್ಮೂರು ವರ್ಷ ಐಪಿಎಲ್​ ಆಡಬಹುದಿತ್ತು. ಇದರರ್ಥ ಒಪ್ಪಂದದ ಪ್ರಕಾರ ನನಗೆ ಸಿಗಬೇಕಿದ್ದ ಮೊತ್ತ ಹೆಚ್ಚಾಗುತ್ತಿತ್ತು. ಬ್ಯಾಂಕ್ ಬ್ಯಾಲೆನ್ಸ್ ಬಲಗೊಳ್ಳುತ್ತಿತ್ತು. ಆದರೆ ನಾನು ಅದರ ಬಗ್ಗೆ ಯೋಚಿಸಲೇ ಇಲ್ಲ ಎಂದು ತಿವಾರಿ ಹೇಳಿಕೊಂಡಿದ್ದಾರೆ.

    2012ರಲ್ಲಿ ಐಪಿಎಲ್ ಟ್ರೋಫಿ ಗೆದ್ದ KKR ತಂಡದ ಭಾಗವಾಗಿದ್ದ ತಿವಾರಿ, 2010 ರಿಂದ 2013 ರವರೆಗೆ ಫ್ರಾಂಚೈಸಿಗಾಗಿ ಆಡಿದರು. ವಾಸ್ತವವಾಗಿ, ಅವರು 2012ರಲ್ಲಿ KKR ಚಾಂಪಿಯನ್ ಆಗಲು ಬೇಕಾದ ಗೆಲುವಿನ ರನ್ ಗಳಿಸಿದರು. ಕೆಕೆಆರ್​ಗೆ ಬರುವ ಮುನ್ನ ಡೆಲ್ಲಿ ಡೇರ್​ ಡೆವಿಲ್ಸ್​ (ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್​) ಪರ 2008 ಮತ್ತು 2009ರಲ್ಲಿ ಆಡಿದರು. ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವ ವಿಚಾರ ಬಂದಾಗ ದೆಹಲಿ ತಂಡದಲ್ಲಿನ ಆಯ್ಕೆ ಸಮಸ್ಯೆಗಳ ಬಗ್ಗೆ ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದ ತಿವಾರಿ, ಅಂತಿಮವಾಗಿ ತಂಡದಿಂದ ಬಿಡುಗಡೆ ಮಾಡಲು ಡೆಲ್ಲಿ ತಂಡದ ಆಡಳಿತವನ್ನು ಕೇಳಿದ್ದರು. ಬಳಿಕ ಕೆಕೆಆರ್​ ಸೇರಿದರು.

    ನಾನು ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡಿದಾಗ ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದರು. ಆಡುವ ಹನ್ನೊಂದರ ಬಳಗದ ಆಯ್ಕೆ ಸರಿಯಾಗಿ ನಡೆಯುತ್ತಿಲ್ಲ ಎಂಬುದನ್ನು ನನ್ನ ಕಣ್ಣ ಮುಂದೆಯೇ ನೋಡುತ್ತಿದ್ದೆ. ತಂಡದ ಸಂಯೋಜನೆಯು ಸರಿಯಾಗಿಲ್ಲ. ಅರ್ಹ ಕ್ರಿಕೆಟಿಗರಿಗೆ ಆಡಲು ಅವಕಾಶ ಸಿಗುತ್ತಿಲ್ಲ. ಅನೇಕರು ಗಾಯದ ಸಮಸ್ಯೆಯಿಂದ ಹೊರಗಿದ್ದರು. ತಂಡದ ಫಲಿತಾಂಶವು ಚೆನ್ನಾಗಿರಲಿಲ್ಲ. ನಾನು ನೇರವಾಗಿ ತಂಡದ ಆಡಳಿತ ಮಂಡಳಿ ಬಳಿ ಹೋಗಿ, ನನ್ನನ್ನು ಹನ್ನೊಂದರ ಬಳಗದಲ್ಲಿ ಆಡಿಸಲು ಸಾಧ್ಯವಾಗದಿದ್ದರೆ ನನ್ನನ್ನು ಬಿಟ್ಟುಬಿಡಿ’ ಎಂದು ಹೇಳಿದ್ದೆ. ಆಗ ನನ್ನ ಒಪ್ಪಂದ 2.8 ಕೋಟಿ ರೂ. ಎಂಬುದನ್ನು ನಾನು ಯೋಚಿಸಿರಲಿಲ್ಲ ಎಂದು ತಿವಾರಿ ಹೇಳಿದರು. (ಏಜೆನ್ಸೀಸ್​)

    ಶಾರುಖ್​, ನಯನತಾರಾಗೆ ಒಲಿದ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ: ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ

    ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಫಾಲಿ ಎಸ್​ ನಾರಿಮನ್​ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts