More

    ಸುಪ್ರೀಂಕೋರ್ಟ್​ನ ಹಿರಿಯ ವಕೀಲ ಫಾಲಿ ಎಸ್​ ನಾರಿಮನ್​ ನಿಧನ

    ನವದೆಹಲಿ: ಖ್ಯಾತ ನ್ಯಾಯಶಾಸ್ತ್ರಜ್ಞ ಹಾಗೂ ಸುಪ್ರೀಂಕೋರ್ಟ್​ನ ಹಿರಿಯ ವಕೀಲರಾದ ಫಾಲಿ ಎಸ್​ ನಾರಿಮನ್​ (95) ಇಹಲೋಕ ತ್ಯಜಿಸಿದ್ದಾರೆ.

    ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಫಾಲಿ ನಾರಿಮನ್​ ಅವರು ದೆಹಲಿ ನಿವಾಸದಲ್ಲಿ ಇಂದು (ಫೆ.21) ಬೆಳಗ್ಗೆ ಕೊನೆಯುಸಿರೆಳೆದರು. ನಿಧನದ ಸುದ್ದಿಯನ್ನು ಸುಪ್ರೀಂಕೋರ್ಟ್​ನ ಹಿರಿಯ ವಕೀಲರಾದ ಅಭಿಷೇಕ್​ ಮನು ಸಿಂಗ್ವಿ ಅವರು ತಮ್ಮ ಎಕ್ಸ್​ ಖಾತೆಯ ಮೂಲಕ ಖಚಿತಪಡಿಸಿದ್ದು, ಒಂದು ಯುಂಗಾಂತ್ಯ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

    ಕಾನೂನು ಮತ್ತು ಸಾರ್ವಜನಿಕ ಜೀವನದಲ್ಲಿ ಇರುವವರ ಹೃದಯ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಜೀವಂತ ದಂತಕಥೆ. ತಮ್ಮ ಎಲ್ಲ ಸಾಧನೆಗಳ ಹೊರತಾಗಿಯೂ ನಾರಿಮನ್​ ಅವರು ತಮ್ಮ ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡಿದ್ದರು ಎಂದು ಸಿಂಗ್ವಿ ಹೇಳಿದ್ದಾರೆ.

    ನಾರಿಮನ್​​ ಅವರು 1929ರ ಜನವರಿ 10ರಂದು ಮಯನ್ಮಾರ್​ನಲ್ಲಿ ಪ್ಯಾರಿಸ್​ ಕುಟುಂಬದಲ್ಲಿ ಜನಿಸಿದರು. ಬಾಂಬೆ ಹೈಕೋರ್ಟ್​ನಲ್ಲಿ ಕಾನೂನು ಅಭ್ಯಾಸ ಆರಂಭಿಸಿದರು. 38 ವರ್ಷ ವಯಸ್ಸಿನವರಾಗಿದ್ದಾಗ, ಕನಿಷ್ಠ ಅರ್ಹತೆ ವಯಸ್ಸಿನ ಕೆಳಗಿದ್ದ ಕಾರಣ ಹೈಕೋರ್ಟ್‌ನ ನ್ಯಾಯಾಧೀಶರಾಗಲು ನಿರಾಕರಿಸಲಾಯಿತು.

    ನಾರಿಮನ್​ ಅವರು 1971 ರಿಂದ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರಾಗಿದ್ದರು ಮತ್ತು 1991 ರಿಂದ 2010 ರವರೆಗೆ ಭಾರತೀಯ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ನಾರಿಮನ್ ಅವರು ಪದ್ಮಭೂಷಣ ಮತ್ತು ಪದ್ಮವಿಭೂಷಣ ಸೇರಿದಂತೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

    ಖ್ಯಾತ ನ್ಯಾಯಶಾಸ್ತ್ರಜ್ಞರ ನಿಧನಕ್ಕೆ ಸಂತಾಪ ಸೂಚಿಸಿದ ಮಾಜಿ ಕಾನೂನು ಸಚಿವ ಮತ್ತು ಹಿರಿಯ ವಕೀಲ ಕಪಿಲ್ ಸಿಬಲ್, ಭಾರತದ ಮಹಾನ್ ಪುತ್ರ ನಿಧನರಾಗಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್​)

    25 ಲಕ್ಷಕ್ಕಾಗಿ ರಾಜಕಾರಣಿ ಜತೆ ಮಲಗಿದ್ರಾ ತ್ರಿಷಾ? ಸಂಚಲನ ಸೃಷ್ಟಿಸಿದ ಹೇಳಿಕೆ, ಸೌತ್​ ಬ್ಯೂಟಿ ತಿರುಗೇಟು ಹೀಗಿತ್ತು…

    ರಣಬಿಸಿಲಿಗೆ ಜನ ಹೈರಾಣ; ಮಾರ್ಚ್​ನಲ್ಲಿ ಇನ್ನಷ್ಟು ಸುಡುವ ಭೀತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts