ಭುವನೇಶ್ವರ್: ಆಟೋ ಚಾಲಕನೊಬ್ಬ ತನ್ನ ಎಲೆಕ್ಟ್ರಿಕ್ ಆಟೋವನ್ನು ಸೌರಶಕ್ತಿ ಚಾಲಿತ ವಾಹನವನ್ನಾಗಿ ಪರಿವರ್ತಿಸಿ ನೂತನ ಆವಿಷ್ಕಾರವನ್ನು ಮಾಡಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ.
ಇದನ್ನೂ ಓದಿ: ಆರಂಭದಲ್ಲೇ ವಿಘ್ನ: I.N.D.I.A. ಹೆಸರಿಗೆ ಮೈತ್ರಿಕೂಟದಲ್ಲೇ ಅಪಸ್ವರ..?
ಆಟೊ ಚಾಲಕ ಶ್ರೀಕಾಂತ್ ಪಾತ್ರಾ ಎಂಬಾತ ಯುಟ್ಯೂಬ್ ನೆರವಿನಿಂದ ಈ ಆವಿಷ್ಕಾರವನ್ನು ಮಾಡಿದ್ದು, ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ ಅವರ ಆವಿಷ್ಕಾರಕ್ಕೆ ಪ್ರೇರಣೆ ಎಂದು ಹೇಳಿದ್ದಾರೆ.
ಕಳೆದ 15 ವರ್ಷಗಳಿಂದ ಆಟೋ ರಿಕ್ಷಾ ಓಡಿಸುತ್ತಿದ್ದ ಶ್ರೀಕಾಂತ್, ಡೀಸೆಲ್ ಎಂಜಿನ್ ಆಟೋದಿಂದ ದಿನಕ್ಕೆ ಕೇವಲ 300-400 ರೂ ಗಳಿಸುತ್ತಿದ್ದೆ. ಆದರೆ ಬಡತನದಲ್ಲಿ ವಾಸಿಸುತ್ತಿದ್ದ ಆತ ಈ ಹಣದಿಂದ ಮನೆಯನ್ನು ನಡೆಸುವುದು ಕಷ್ಟವಾಗಿದ್ದು, ಮಕ್ಕಳ ಬೋಧನಾ ಶುಲ್ಕವನ್ನು ಭರಿಸಲೂ ಸಹ ಸಾಧ್ಯವಾಗಿರಲಿಲ್ಲ. ಕೊನೆಗೆ ಒಂದೂವರೆ ವರ್ಷಗಳ ಹಿಂದೆ, ಆತ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಖರೀದಿಸಿದ್ದು, ಇದರಿಂದ ಜೀವನೋಪಾಯಕ್ಕೆ ನೆರವಾಗಬಹುದೆಂದು ಆಸೆಯನ್ನು ಇಟ್ಟುಕೊಂಡಿದ್ದ.
ಇದನ್ನೂ ಓದಿ: ಸೇತುವೆ ಕುಸಿದರೂ ಪವಾಡ ಸದೃಶ ರೀತಿಯಲ್ಲಿ ಪಾರಾದ ಬಸ್ನಲ್ಲಿದ್ದ 50 ಮಂದಿ..!
ಆದರೆ. ಈ ಎಲೆಕ್ಟ್ರಿಕ್ ಆಟೋದ ಕಡಿಮೆ ಬ್ಯಾಟರಿ ಮತ್ತು ಚಾರ್ಜಿಂಗ್ ಸಮಸ್ಯೆಯು ತದ್ದು ಒಡ್ಡಿ ಇದು ಆತನ ಆದಾಯದ ಮೇಲೆ ಪರಿಣಾನ ಬೀರಿತು. ಕೊನೆಗೆ ತನ್ನ VI ನೇ ತರಗತಿಯ ಮಗಳು ಯುಟ್ಯೂಬ್ ನೋಡಿದ ನಂತರ ಎಲೆಕ್ಟ್ರಿಕ್ ಆಟೋ-ರಿಕ್ಷಾವನ್ನು ಸೌರಶಕ್ತಿಯ ವಾಹನವನ್ನಾಗಿ ಪರಿವರ್ತಿಸಲು ಶ್ರೀಕಾಂತ್ಗೆ ಸಲಹೆ ನೀಡಿದ್ದಾಳೆ.
ಆಗ ಚಾಲಕನು ಈ ಕುರಿತಾದ ವಿಡಿಯೋಗಳನ್ನು ಯೂಟ್ಯೂಬ್ನಲ್ಲಿ ನೋಡಿ ನೂತನ ಆವಿಷ್ಕಾರ ಮಾಡಿದ್ದು, ಹೊಸ ಸೌರಶಕ್ತಿ ಚಾಲಿತ ಆಟೋ ರಿಕ್ಷಾ ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಆದ ನಂತರ 140 ಕಿಮೀ ಓಡುತ್ತದೆ. ಈ ಸೋಲಾರ್ ಆಟೋ-ರಿಕ್ಷಾ ಪ್ರಯಾಣಿಕರಿಗೆ ಅತ್ಯಂತ ಸುಗಮ ಪ್ರಯಾಣವನ್ನು ಒದಗಿಸುತ್ತದೆ. ನಾನು ದಿನಕ್ಕೆ 1300-1500 ರೂ ಗಳಿಸುತ್ತೇನೆ ಮತ್ತು ರಾಜ್ಯದ ರಾಜಧಾನಿಯಲ್ಲಿ ಸಂತೋಷದ ಕುಟುಂಬವನ್ನು ನಡೆಸುತ್ತಿದ್ದೇನೆ ಎಂದು ಹೇಳಿದ್ದಾನೆ.(ಏಜೆನ್ಸೀಸ್)