ಮಾವಾಯಿ: ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯ ಮಾವಾಯಿ ಗ್ರಾಮದಲ್ಲಿ ನಡೆದಿದೆ.

ಮನೆಯ ಮೇಲ್ಛಾವಣಿ ಕುಸಿದು ಭಾರಿ ಅವಘಡ ಸಂಭವಿಸಿದ್ದು, ಅದರ ಅವಶೇಷಗಳಡಿ ಸಿಲುಕಿ ಕುಟುಂಬಸ್ಥರು ಮೃತಪಟ್ಟಿದ್ದಾರೆ. ಒಂದು ದಿನದ ಹಿಂದೆ ಈ ಮೇಲ್ಛಾವಣಿಯ ಮೇಲೆ ಲೆಂಟರ್ನ್ನು ಹಾಕಲಾಗಿತ್ತು. ಘಟನೆ ಸಂಭವಿಸಿದ ವೇಳೆ ಇಡೀ ಕುಟುಂಬವು ಅದರ ಕೆಳಗಿನ ನೆಲದ ಮೇಲೆ ಮಲಗಿತ್ತು.
ಇದನ್ನೂ ಓದಿ: ಯಾವ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ ಅಲ್ಲಿ ಉಗ್ರರು ಹುಲ್ಲು ಮೇಯುವ ರೀತಿ ಆಗಿದೆ: ಮಾಜಿ ಸಚಿವ ಆರ್. ಅಶೋಕ್
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸುತ್ತಿದ್ದು, ಅವಶೇಷಗಳಡಿಯಿಂದ ಇಬ್ಬರ ಮೃತದೇಹಗಳನ್ನು ಹೊರ ತೆಗೆದು ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನಿಬ್ಬರ ಮೃತದೇಹಗಳ ಬಗ್ಗೆ ಹುಡುಕಾಟ ನಡೆಸುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಮಂಗಳವಾರದಂದು ಮನೆಯ ಎರಡನೇ ಮಹಡಿಯಲ್ಲಿ ಲಿಂಟರ್ ಹಾಕಲಾಗಿತ್ತು. .ಕುಟುಂಬದ 13 ಮಂದಿ ನೆಲ ಮಹಡಿಯಲ್ಲಿ ಮಲಗಿದ್ದರು ಎಂದು ಹೇಳಲಾಗಿದೆ.ಈ ಮಧ್ಯೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.(ಏಜೆನ್ಸೀಸ್)