More

    ಸೇತುವೆ ಕುಸಿದರೂ ಪವಾಡ ಸದೃಶ ರೀತಿಯಲ್ಲಿ ಪಾರಾದ ಬಸ್​​ನಲ್ಲಿದ್ದ 50 ಮಂದಿ..!

    ಜಾಜ್‌ಪುರ: ಸೇತುವೆಯ ಒಂದು ಬದಿಯ ಭಾಗವು ವಾಹನ ದಾಟಿದ ಕೆಲವೇ ಸೆಕೆಂಡುಗಳಲ್ಲಿ ಕುಸಿದು ಬಿದ್ದಿದ್ದರಿಂದ 50ಕ್ಕೂ ಹೆಚ್ಚು ಬಸ್ ಪ್ರಯಾಣಿಕರು ಪವಾಡ ಸದೃಶ ರೀತಿಯಲ್ಲಿ ಪಾರಾಗಿರುವ ಘಟನೆ ಒಡಿಶಾದ ಜಾಜ್‌ಪುರ್ ಜಿಲ್ಲೆಯ ರಸುಲ್‌ಪುರ ಬ್ಲಾಕ್ ಕಚೇರಿ ಬಳಿ ನಡೆದಿದೆ.

    ಈ ಘಟನೆಯು ಕೋಲ್ಕತ್ತಾ-ಚೆನ್ನೈ NH-16ನಲ್ಲಿ ನಡೆದಿದ್ದು, ಬಸ್ ಬಾಲಸೋರ್ ನಿಂದ ಭುವನೇಶ್ವರಕ್ಕೆ ತೆರಳುತ್ತಿತ್ತು. ಬಸ್​​ ದಡವನ್ನು ದಾಟಿದ ಕೂಡಲೇ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಒಂದು ಬದಿಯ ಭಾಗವು ಕುಸಿದಿದೆ. ಈ ವೇಳೆ ಸೇತುವೆಯ ಭಾಗ ಕುಸಿದಿರುವುದನ್ನು ಕಂಡ ಟ್ರ್ಯಾಕ್ಟರ್ ಚಾಲಕ ಇತರ ವಾಹನಗಳು ಮುಂದೆ ಹೋಗದಂತೆ ತಡೆದಿದ್ದಾರೆ.

    ಇದನ್ನೂ ಓದಿ: ಮನೆಯ ಮೇಲ್ಛಾವಣಿ ಕುಸಿದು ಒಂದೇ ಕುಟುಂಬದ ನಾಲ್ವರ ಸಾವು

    ಈ ಕುರಿತು ಮಾತನಾಡಿದ ಟ್ರ್ಯಾಕ್ಟರ್ ಚಾಲಕ ರಘುನಾಥ್, ತಾನು ತನ್ನ ಟ್ರ್ಯಾಕ್ಟರ್‌ನಲ್ಲಿ ಖಾಂಡಿತಾರ್‌ನಿಂದ ಕುವಾಕಿಯಾ ಕಡೆಗೆ ಹೋಗುತ್ತಿದ್ದ. ತಾನು ರಸೂಲ್‌ಪುರ ಬ್ಲಾಕ್ ಆಫೀಸ್ ತಲುಪಿದಾಗ, ತನಗೆ ದೊಡ್ಡ ಶಬ್ದ ಕೇಳಿಸಿತು. ಏನಾಯಿತು ಎಂದು ತಾನು ಊಹಿಸುವ ಮೊದಲು, ಸೇತುವೆಯ ಒಂದು ಭಾಗವು ಕುಸಿದಿರುವುದನ್ನು ನೋಡಿದ್ದಾನೆ. ಕೂಡಲೇ ತಾನು ಟ್ರ್ಯಾಕ್ಟರ್​​ ರಸ್ತೆಗೆ ಅಡ್ಡಲಾಗಿರಿಸಿ ಹೆದ್ದಾರಿಯನ್ನು ನಿರ್ಬಂಧಿಸಿದೆ. ಬೇರೆ ವಾಹನಗಳು ಮುಂದೆ ಹೋಗದಂತೆ ತಡೆದೆ ಎಂದು ಹೇಳಿದ್ದಾರೆ.

    ನಂತರ ಆಗಮಿಸಿದ ಪೊಲೀಸರು ಪಾನಿಕೋಯಿಲಿ ಮತ್ತು ಚಂಡಿಖೋಲೆ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ಹೆದ್ದಾರಿಯ ಇನ್ನೊಂದು ಬದಿಯ ಮೂಲಕ ತೆರಳಲು ಅನುಕೂಲ ಮಾಡಿಕೊಟ್ಟಿದ್ದಾರೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts