ಆರಂಭದಲ್ಲೇ ವಿಘ್ನ: I.N.D.I.A. ಹೆಸರಿಗೆ ಮೈತ್ರಿಕೂಟದಲ್ಲೇ ಅಪಸ್ವರ..?

UPA alliance I.N.D.I.A
Published on

ದೆಹಲಿ: ಮುಂಬರುವ ಲೋಕಸಭೆ ಚುನಾವಣೆಗಾಗಿ 26 ವಿರೋಧ ಪಕ್ಷಗಳ ನಾಯಕರು ಸಭೆ ನಡೆಸಿ, ತಮ್ಮ ಮೈತ್ರಿಗೆ I.N.D.I.A. ಎಂಬ ಹೆಸರನ್ನು ಫೈನಲ್​​ ಮಾಡಿದ್ದರು. ಆದರೆ ಈ ಹೆಸರಿಗೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಹೆಸರಿಗೆ ತೀವ್ರವಾಗಿ ಆಕ್ಷೇಪಿಸಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: VIDEO| ತಂದೆಯೊಂದಿಗೆ ದ್ವೇಷ: ಮಕ್ಕಳ ಪ್ರಾಣ ತೆಗೆಯಲು ಯತ್ನಿಸಿದ ಕಾರು ಚಾಲಕ

ಮಂಗಳವಾರ ಬೆಂಗಳೂರಿನಲ್ಲಿ ನಡೆದ ಸಭೆಯ ನಂತರ ವಿರೋಧ ಪಕ್ಷಗಳು I.N.D.I.A.(Indian National Developmental Inclusive Alliance) ಎಂಬ ಹೆಸರನ್ನು ಹೆಸರನ್ನು ಘೋಷಿಸಿದ್ದವು. ಆದರೆ ವಿರೋಧ ಪಕ್ಷದ ಮೈತ್ರಿಯ ಹೆಸರಿನ ಬಗ್ಗೆ ಕಾಂಗ್ರೆಸ್ ಯಾವುದೇ ಚರ್ಚೆ ನಡೆಸಿಲ್ಲ. ಸಭೆಯಲ್ಲಿ ನಿತೀಶ್ ಕುಮಾರ್​​ರು ಈ ಮೈತ್ರಿಕೂಟಕ್ಕೆ I.N.D.I.A. ಭಾರತ ಎಂದು ಹೇಗೆ ಹೆಸರಿಸಬಹುದು ಎಂದು ಪ್ರಶ್ನಿಸಿದ್ದರು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್​​ರ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಪಕ್ಷವು ಈ ಮೈತ್ರಿಯನ್ನು ಹೈಜಾಕ್ ಮಾಡಿರುವ ರೀತಿ ಜೆಡಿಯು ಮತ್ತು ಆರ್‌ಜೆಡಿ ನಾಯಕರನ್ನು ಬೆಚ್ಚಿಬೀಳಿಸಿದೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮೈತ್ರಿಗಾಗಿ I.N.D.I.A. ಎಂಬ ಹೆಸರನ್ನು ಫೈನಲ್​​ ಮಾಡಿರುವ ವಿರೋಧ ಪಕ್ಷದ ಬಣವನ್ನು ಈ ಹಿಂದೆ ಯುಪಿಎ (ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್) ಎಂದು ಕರೆಯಲಾಗುತ್ತಿತ್ತು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net