ನ್ಯೂಸ್

ನೀವು ಈ ದಿನಾಂಕದಂದು ಹುಟ್ಟಿದ್ದೀರಾ? ಹಾಗಾದ್ರೆ ಲಕ್ಷ್ಮೀ ದೇವಿಯ ಕೃಪೆಯಿಂದ ಅಪಾರ ಸಂಪತ್ತು ಗಳಿಸುತ್ತೀರಿ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ ಜೀವನದ ಎಲ್ಲ ವಿಷಯಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿವೆ. ಅಲ್ಲದೆ, ಈ ಸಂಖ್ಯೆಗಳು ನೈಸರ್ಗಿಕವಾಗಿ ವಿಶ್ವದಲ್ಲಿ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಯಾರನ್ನಾದರೂ ಮೇಲಕ್ಕೇರಿಸಬಹುದು ಮತ್ತು ಕೆಳಗಿಳಿಸಬಹುದು. ಸಂಖ್ಯಾಶಾಸ್ತ್ರವು ವ್ಯಕ್ತಿಯ ಹೆಸರು, ಆತನ ಹುಟ್ಟಿದ ದಿನಾಂಕ, ತಿಂಗಳು, ವರ್ಷದ ಆಧಾರದ ಮೇಲೆ ಅವರ ಭವಿಷ್ಯದ ಜೀವನ ಹೇಗಿರುತ್ತದೆ ಎಂದು ಊಹಿಸುವ ವಿಜ್ಞಾನವಾಗಿದೆ.

ಅಂದಹಾಗೆ ಸಂಖ್ಯಾಶಾಸ್ತ್ರವನ್ನು ರಾಡಿಕ್ಸ್ ಸಂಖ್ಯೆಗಳ ಆಧಾರದ ಮೇಲೆ ಹೇಳಲಾಗುತ್ತದೆ. ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಮೊತ್ತವನ್ನು ರಾಡಿಕ್ಸ್ ಸಂಖ್ಯೆ ಅಥವಾ ಮೂಲಾಂಕ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಒಬ್ಬ 24ನೇ ತಾರೀಖಿನಂದು ಜನಿಸಿದರೆ ಆತನ ರಾಡಿಕ್ಸ್​ ಸಂಖ್ಯೆ 2+4= 6 ಆಗಿರುತ್ತದೆ. ರಾಶಿಗಳಂತೆ ರಾಡಿಕ್ಸ್​ ಸಂಖ್ಯೆಗಳು ಕೂಡ ಗ್ರಹಗಳೊಂದಿಗೆ ಸಂಬಂಧ ಹೊಂದಿವೆ. ಸಂಖ್ಯಾಶಾಸ್ತ್ರದಲ್ಲಿ 01 ರಿಂದ 09ರವರೆಗಿನ ಸಂಖ್ಯೆಗಳನ್ನು ರಾಡಿಕ್ಸ್ ಸಂಖ್ಯೆಗಳು ಎಂದು ಹೇಳಲಾಗುತ್ತದೆ. ಈ ಒಂಬತ್ತು ರಾಡಿಕ್ಸ್ ಸಂಖ್ಯೆಗಳು ಕೂಡ ನವಗ್ರಹಗಳಲ್ಲಿ ಒಂದೊಂದು ಗ್ರಹಗಳಿಗೆ ಸೀಮಿತವಾಗಿವೆ.

ಜನ್ಮದಿನಾಂಕಗಳಲ್ಲಿ ನವಗ್ರಹಗಳು ಹೇಗೆ ಪ್ರಬಲವಾಗಿವೆಯೋ ಹಾಗೆಯೇ ಕೆಲವು ದೇವತೆಗಳೂ ಸಹ ಪ್ರಾಬಲ್ಯವನ್ನು ಹೊಂದಿವೆ ಎಂದು ನಂಬಲಾಗಿದೆ. ಹೀಗಾಗಿ, ನಿರ್ದಿಷ್ಟ ಸಂಖ್ಯೆಯ ಅಡಿಯಲ್ಲಿ ಜನಿಸಿದವರು ಸ್ವಾಭಾವಿಕವಾಗಿ ಲಕ್ಷ್ಮೀ ದೇವಿಯ ಸಂಪೂರ್ಣ ಆಶೀರ್ವಾದವನ್ನು ಹೊಂದಿರುತ್ತಾರೆ. ಲಕ್ಷ್ಮೀಯನ್ನು ಹಣದ ಅಧಿದೇವತೆ ಎಂದು ಕರೆಯಲಾಗುತ್ತದೆ. ಆದ್ದರಿಂದ, ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವ ಜನರ ಜೀವನವು ಖಂಡಿತವಾಗಿಯೂ ತ್ವರಿತ ಪ್ರಗತಿ ಮತ್ತು ಸಮೃದ್ಧಿಗೆ ಸಾಕ್ಷಿಯಾಗುತ್ತದೆ.

ಯಾವ ದಿನಾಂಕಗಳಲ್ಲಿ ಜನಿಸಿದವರು ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಿ ಸಂಪತ್ತು ಗಳಿಸುತ್ತಾರೆಂಬುದನ್ನು ನಾವೀಗ ತಿಳಿಯೋಣ.

ಸಂಖ್ಯೆ 6

6, 15 ಮತ್ತು 24ನೇ ದಿನಾಂಕಗಳಂದು ಜನಿಸಿದವರು ಇತರ ದಿನಾಂಕಗಳಲ್ಲಿ ಜನಿಸಿದವರಿಗಿಂತ ಶುಕ್ರ ಮತ್ತು ಲಕ್ಷ್ಮೀ ದೇವಿಯ ಆಶೀರ್ವಾದ ಮತ್ತು ಅನುಗ್ರಹವನ್ನು ಸ್ವಲ್ಪ ಹೆಚ್ಚು ಪಡೆಯುತ್ತಾರೆ. ಪ್ರೀತಿ, ಐಷಾರಾಮಿ ಮತ್ತು ಸೌಂದರ್ಯ ಸೇರಿದಂತೆ ಎಲ್ಲ ಲೌಕಿಕ ಸಂತೋಷಗಳ ಅಧಿಪತಿ ಶುಕ್ರ. ಇನ್ನು ಲಕ್ಷ್ಮೀ ದೇವಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮೀಯು ಎಲ್ಲ ರೀತಿಯ ಸಂಪತ್ತು ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಆದ್ದರಿಂದ, 6 ನೇ ಸಂಖ್ಯೆಯ ಅಡಿಯಲ್ಲಿ ಜನಿಸಿದವರು, ಅಂದರೆ, ಯಾವುದೇ ತಿಂಗಳ 6, 15 ಮತ್ತು 24ನೇ ದಿನಾಂಕದಂದು ಜನಿಸಿದವರು ಬಹಳ ಸಮೃದ್ಧ ಜೀವನವನ್ನು ಹೊಂದಿರುತ್ತಾರೆ. ಅವರು ತಮ್ಮ ಜೀವನದಲ್ಲಿ ಎಂದಿಗೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುವುದಿಲ್ಲ.

ಜಗತ್ತಿನಲ್ಲಿ ಯಾರಿಗೂ ಸಿಗದ ಅವಕಾಶಗಳು ತಾನಾಗಿಯೇ ಅವರ ಬಳಿ ಬರುತ್ತವೆ. ಹೆಚ್ಚಿನ ದೈಹಿಕ ಶ್ರಮವನ್ನು ಬಳಸದೆಯೇ ಅವರು ಕಡಿಮೆ ಸಮಯದಲ್ಲಿ ಪ್ರಗತಿ ಹೊಂದುತ್ತಾರೆ. ಅಲ್ಲದೆ, ಈ ಸಂಖ್ಯೆಯ ಜನರು ಶುಕ್ರನಿಂದ ಆಳಲ್ಪಡುವುದರಿಂದ ಮೊದಲ ನೋಟದಲ್ಲೇ ಇತರರನ್ನು ಆಕರ್ಷಿಸುವ ಆಕರ್ಷಕ ನೋಟವನ್ನು ಹೊಂದಿರುತ್ತಾರೆ. ಅವರ ಜೀವನವು ಪ್ರತಿ ಹಂತದಲ್ಲೂ ಉತ್ತಮ ಪ್ರಗತಿಯಿಂದ ಗುರುತಿಸಲ್ಪಡುತ್ತದೆ. ಲಕ್ಷ್ಮಿ ದೇವಿಯ ಪರಿಪೂರ್ಣ ಅನುಗ್ರಹದಿಂದ, ಅವರು ಚಿಕ್ಕ ವಯಸ್ಸಿನಲ್ಲಿ ಕೋಟಿಗಟ್ಟಲೆ ಹಣವನ್ನು ಗಳಿಸುತ್ತಾರೆ ಮತ್ತು ತಮ್ಮ ಜೀವನದಲ್ಲಿ ಆರ್ಥಿಕ ತೊಂದರೆಗಳನ್ನು ಎದುರಿಸುವುದು ಬಹಳ ಅಪರೂಪ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.