ನ್ಯೂಸ್

ಹೆಚ್ಚಾಗಲಿದೆ ಜೆಎನ್​.1 ಪ್ರಕರಣಗಳ ಸಂಖ್ಯೆ, ಹೆದರುವ ಅಗತ್ಯವಿಲ್ಲ: ಹೀಗೆಂದು ಹೇಳಿದೆ ಉನ್ನತ ವೈದ್ಯಕೀಯ ಸಂಸ್ಥೆ

ನವದೆಹಲಿ: ಜನರು ಭಯಭೀತರಾಗಬಾರದು. ಆದರೆ, ಜಾಗರೂಕರಾಗಿರಬೇಕು. ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಹೆಚ್ಚಾಗುತ್ತಿಲ್ಲ, ರೋಗಿಗಳಿಗೆ ಆಮ್ಲಜನಕದ ಅವಶ್ಯಕತೆ ಇಲ್ಲ, ಮರಣ ಪ್ರಮಾಣ ಹೆಚ್ಚಾಗುತ್ತಿಲ್ಲ, ಆದ್ದರಿಂದ ಗಾಬರಿಪಡುವ ಅಗತ್ಯವಿಲ್ಲ, ಆದರೆ, ಇದು ಎಚ್ಚರವಾಗಿರಬೇಕಾದ ಸಮಯ, ಈ ಹಿಂದೆಯೂ ಈ ರೋಗದ ವಿರುದ್ಧ ಹೋರಾಡಲಾಗಿದೆ. ನಾವು ಸಿದ್ಧರಿದ್ದೇವೆ. ಏಕೆಂದರೆ ಭವಿಷ್ಯದಲ್ಲಿ ಪ್ರಕರಣಗಳು ಇನ್ನಷ್ಟು ಹೆಚ್ಚಾಗಬಹುದು...

ಹೊಸ ಕೋವಿಡ್ ರೂಪಾಂತರ ಜೆಎನ್.1 ರ ಪ್ರಕರಣಗಳು ದೇಶದಲ್ಲಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS- ಏಮ್ಸ್) ಹೀಗೆ ಸಲಹೆ ನೀಡಿದೆ.

"ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್-ಜೆಎನ್.1 ರ ಹೊಸ ರೂಪಾಂತರದಿಂದ ಜನರು ಸೋಂಕಿಗೆ ಒಳಗಾಗುತ್ತಿದ್ದಾರೆ. ರೋಗಿಗಳ ರೋಗಲಕ್ಷಣಗಳು ಸೌಮ್ಯವಾಗಿರುತ್ತವೆ. ಆದ್ದರಿಂದ, ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರವಾಗಿರಬೇಕಾದ ಅವಶ್ಯಕತೆಯಿದೆ" ಎಂದು ಎಐಐಎಂಎಸ್ ವೈದ್ಯ ನೀರಜ್ ನಿಶ್ಚಲ್ ಹೇಳಿದ್ದಾರೆ.

ದೆಹಲಿಯ ಏಮ್ಸ್‌ನ ಮೆಡಿಸಿನ್ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾಗಿರುವ ನಿಶ್ಚಲ್ ಅವರು, "ಈ ರೀತಿಯ ಅಲೆಗಳು ಸಂಭವಿಸುತ್ತಲೇ ಇರುತ್ತವೆ ಎಂದು ನಾವು ಹೇಳುತ್ತಲೇ ಇದ್ದೇವೆ. ಮೊದಲ ಮತ್ತು ಎರಡನೇ ಅಲೆಗಳ ಸಮಯದಲ್ಲಿ ಸಹ, ಈ ವೈರಸ್ ಮತ್ತಷ್ಟು ರೂಪಾಂತರಗೊಳ್ಳುತ್ತದೆ ಎಂದು ನಾವು ಭವಿFeatoಷ್ಯ ನುಡಿದಿದ್ದೇವು. ಈ ಹಂತವು ಅದು ಹೆಚ್ಚು ಪ್ರಸರಣಗೊಳ್ಳುತ್ತದೆ. ಆದರೆ, ಕಡಿಮೆ ಪ್ರಮಾಣದ ಮರಣ ಅಥವಾ ಅನಾರೋಗ್ಯವನ್ನು ಉಂಟು ಮಾಡುತ್ತದೆ" ಎಂದು ವಿವರಿಸಿದ್ದಾರೆ.

ಮುಖ್ಯವಾದ ವಿಷಯವೆಂದರೆ ನಾವು ಈ ವೈರಸ್ ಬಗ್ಗೆ ಹೆಚ್ಚು ತಿಳಿದಿರುತ್ತೇವೆ. ಅದನ್ನು ಹೇಗೆ ಎದುರಿಸಬೇಕೆಂದು ನಮಗೆ ತಿಳಿದಿದೆ. ಹಾಗಾಗಿ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೀವು ನೋಡಿದರೆ, ನಮ್ಮ ಕಣ್ಗಾವಲು ವ್ಯವಸ್ಥೆಯು ಜಾರಿಯಲ್ಲಿದೆ ಎಂದು ತೋರಿಸುತ್ತದೆ. ಆದ್ದರಿಂದ ಇದು ಆತಂಕಕ್ಕೆ ಕಾರಣವಾಗಬಾರದು. ನಾವು ಈಗ ಎಷ್ಟು ಚೆನ್ನಾಗಿ ಸಿದ್ಧರಾಗಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ. ನಾವು ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದ್ದಾರೆ.

"ಹೊಸ ರೂಪಾಂತರವು ಓಮಿಕ್ರಾನ್‌ಗಿಂತ ಹೆಚ್ಚು ಭಿನ್ನವಾಗಿಲ್ಲ. ವೈರಸ್ ಕೆಮ್ಮು, ಶೀತ, ಸೀನುವಿಕೆ, ಜ್ವರ ಮತ್ತು ದೇಹದ ನೋವುಗಳಂತಹ ಒಂದೇ ರೀತಿಯ ರೋಗಲಕ್ಷಣಗಳನ್ನು ಉಂಟುಮಾಡುತ್ತಿದೆಯೇ ಎಂದು ನಾವು ಪರಿಶೀಲಿಸುತ್ತಿದ್ದೇವೆ" ಎಂದಿದ್ದಾರೆ.