More

    2023ರಲ್ಲಿ ಭಾರತೀಯರನ್ನು ಸೆಳೆದ ತಾಣಗಳಿವು… 2024ರಲ್ಲಿ ಫ್ರಾನ್ಸ್​ ನಗರದತ್ತ ಆಕರ್ಷಣೆ ಏಕೆ?

    ನವದೆಹಲಿ: 2023ನೇ ಸಾಲಿನಲ್ಲಿ ಭಾರತೀಯರ ಪ್ರಯಾಣದ ಉತ್ಸಾಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ಈ ಪ್ರವೃತ್ತಿಯು 2024 ರಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಸ್ಕೈಸ್ಕ್ಯಾನರ್ ಸಂಸ್ಥೆಯ ದತ್ತಾಂಶಗಳು ಈ ಸಂಗತಿಯನ್ನು ಬೆಳಕಿಗೆ ತಂದಿವೆ.

    ಭಾರತೀಯರಲ್ಲಿ ಕಡಿಮೆ ಅಂತರ- ಅವಧಿಯ ಪ್ರಯಾಣದ ಬಗ್ಗೆ ಬಲವಾದ ಆಸಕ್ತಿಯಿದೆ, ಹತ್ತಿರದ ನಗರಗಳತ್ತ ಅವರು ಒಲವು ತೋರಿದ್ದಾರೆ. ವಿಶ್ರಾಂತಿ ಮತ್ತು ಸೂರ್ಯೋದಯ ಆಸ್ವಾದನೆಯ ಆದ್ಯತೆಗಾಗಿ ಕ್ರಾಬಿ ಮತ್ತು ಮಾಹೆ ದ್ವೀಪಗಳ ಕುರಿತು ಹುಡುಕಾಟ ನಡೆಸಿರುವುದು ಕಂಡುಬಂದಿದೆ.

    ಒಸಾಕಾ ಮತ್ತು ಆಕ್ಲೆಂಡ್‌ನಂತಹ ದೂರದ ಸ್ಥಳಗಳು ಸಹ ಪ್ರವಾಸಿಗರಲ್ಲಿ ಜನಪ್ರಿಯವಾಗಿವೆ, ಇದು ವೈವಿಧ್ಯಮಯ ಅನುಭವಗಳ ಬಯಕೆಯನ್ನು ಪ್ರತಿಬಿಂಬಿಸುತ್ತದೆ.

    ವಿಯೆಟ್ನಾಂನ ಡಾ ನಾಂಗ್, ಕಝಾಕಿಸ್ತಾನದ ಅಲ್ಮಾಟಿ, ಅಜೆರ್ಬೈಜಾನ್​ನ ಬಾಕು, ಜಪಾನ್​ನ ಒಸಾಕಾ, ವಿಯೆಟ್ನಾಂನ ಹನೋಯಿ, ಥೈಲ್ಯಾಂಡ್​ನ ಕ್ರಾಬಿ, ಹಂಗೇರಿಯ ಬುಡಾಪೆಸ್ಟ್, ಸೀಶೆಲ್ಸ್​ನ ಮಾಹೆ ದ್ವೀಪ, ನ್ಯೂಜಿಲ್ಯಾಂಡ್​ನ ಆಕ್ಲೆಂಡ್, ಆಸ್ಟ್ರಿಯಾದ ವಿಯೆನ್ನಾ ಪ್ರವಾಸಿ ತಾಣಗಳು ಇತ್ತೀಚಿನ ಹುಡುಕಾಟದಲ್ಲಿ ಮುಂಚೂಣಿಯಲ್ಲಿವೆ.

    ಭಾರತೀಯ ಪ್ರಯಾಣದ ಮಾದರಿಗಳ ಮೇಲೆ ಪ್ರಭಾವ ಬೀರುವ ಅಂಶಗಳು ಕೂಡ ಗಮನಾರ್ಹವಾಗಿವೆ.
    ಆಹಾರ (71%), ಸಂಸ್ಕೃತಿ (65%) ಮತ್ತು ಹವಾಮಾನ (65%) ಈ ಮೂರು ಪ್ರಮುಖ ಅಂಶಗಳನ್ನು ಆಧರಿಸಿ ಭಾರತೀಯ ಪ್ರವಾಸಿಗರು ರಜಾ ಕಾಲದಲ್ಲಿ ಎಲ್ಲಿಗೆ ಹೋಗಬೇಕೆಂದು ನಿರ್ಧರಿಸುತ್ತಾರೆ, ಶಾಪಿಂಗ್, ಐತಿಹಾಸಿಕ ತಾಣ, ಸ್ಥಳೀಯ ಆಹಾರದ ಮಾದರಿಗಳು ಕೂಡ ಪರಿಣಾಮ ಬೀರುತ್ತವೆ.

    ಭಾರತೀಯ ಪ್ರವಾಸಿಗರಿಗೆ ಹಣದ ಮೌಲ್ಯವು (ವ್ಯಾಲ್ಯೂ ಫಾರ್​ ಮನಿ) ಪ್ರಮುಖ ಅಂಶವಾಗಿ ಉಳಿದಿದೆ, ವಿಮಾನದ ವೆಚ್ಚ (26%) ಮತ್ತು ಆಕರ್ಷಣೆಗಳು (18%) ಗಮ್ಯಸ್ಥಾನವನ್ನು ನಿರ್ಧರಿಸುವ ದೊಡ್ಡ ಅಂಶಗಳಾಗಿವೆ.

    2024ರಲ್ಲಿ ಆಕರ್ಷಣೆಯ ತಾಣ:

    ಫ್ರಾನ್ಸ್‌ನಲ್ಲಿರುವ ಈ ತಾಣವು 2024 ರಲ್ಲಿ ಭಾರತೀಯರ ಆಕರ್ಷಕ ತಾಣ ಆಗುವ ಸಾಧ್ಯತೆಯಿದೆ.

    ಸ್ಕೈಸ್ಕ್ಯಾನರ್‌ನ ಟ್ರಾವೆಲ್ ಟ್ರೆಂಡ್‌ಗಳು ಮತ್ತು ಡೆಸ್ಟಿನೇಶನ್ ತಜ್ಱ ಮೋಹಿತ್ ಜೋಶಿ ಅವರು, 2024ರಲ್ಲಿಯೂ ಕೂಡ 2023ರ ಸಮ ಪ್ರಮಾಣದಲ್ಲಿಯೇ ಭಾರತೀಯರು ವಿದೇಶ ಪ್ರವಾಸ ಕೈಗೊಳ್ಳುವ ನಿರೀಕ್ಷೆ ಇದೆ ಎನ್ನುತ್ತಾರೆ.

    “2024 ರಲ್ಲಿ ಫ್ರಾನ್ಸ್‌ನಲ್ಲಿರುವ ನೈಸ್ ಭಾರತೀಯ ಪ್ರಯಾಣಿಕರಿಗೆ ಉತ್ತಮ-ಮೌಲ್ಯದ ತಾಣವಾಗಲಿದೆ ಎಂದು ನಾವು ಊಹಿಸುತ್ತೇವೆ. ಕಳೆದ 12 ತಿಂಗಳುಗಳಲ್ಲಿ ವಿಮಾನ ದರಗಳು ಮೂರನೇ ಒಂದು ಭಾಗದಷ್ಟು ಕಡಿಮೆಯಾಗಿದೆ” ಎಂದು ಅವರು ಹೇಳುತ್ತಾರೆ.

    ಸ್ಕೈಸ್ಕ್ಯಾನರ್ ಪ್ರಕಾರ, ಫ್ರಾನ್ಸ್‌ನ ನೈಸ್​ಗೆ ಭಾರತದಿಂದ ವಿಮಾನ ದರಗಳಲ್ಲಿ ಕಳೆದ ವರ್ಷದಲ್ಲಿ 39% ಕುಸಿತವಾಗಿದೆ. ಜಗತ್ತಿನಾದ್ಯಂತ ಎಲ್ಲಾ ಜನಪ್ರಿಯ ಸ್ಥಳಗಳಿಗೆ ಹೋಲಿಸಿದರೆ ಇದು ಅತಿದೊಡ್ಡ ಇಳಿಕೆಯಾಗಿದೆ.

    ನಿಫ್ಟಿಯಲ್ಲಿ ಈ ವರ್ಷ 2 ಷೇರುಗಳಿಗೆ ಮಾತ್ರ ನಷ್ಟ; ಕೆಲವು ಶೇ. 80ಕ್ಕೂ ಅಧಿಕ ಲಾಭ; 2024ರಲ್ಲಿ ಏನಾಗಲಿದೆ?

    ಲೋಕಸಭೆ ಚುನಾವಣೆ ತಯಾರಿಗಾಗಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ: ಬಿಜೆಪಿ ನಾಯಕರಿಗೆ ಪ್ರಧಾನಿ ಮೋದಿ ನೀಡಿದ ಗುರಿ ಏನು?

    300ಕ್ಕೂ ಅಧಿಕ ಪ್ರಯಾಣಿಕರಲ್ಲಿ 13 ಅಪ್ರಾಪ್ತರು: ಭಾರತೀಯರು ಪ್ರಯಾಣಿಸುತ್ತಿದ್ದ ವಿಮಾನವನ್ನು ಫ್ರಾನ್ಸ್​ನಲ್ಲಿ ತಡೆಹಿಡಿದಿದ್ದೇಕೆ?:

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts