More

    ಬೆಂಕಿ ಹೊತ್ತಿಕೊಂಡ ಇಸ್ರೇಲ್​ ನೌಕೆ ಜತೆ ಸಂಪರ್ಕ: ಡ್ರೋನ್​ ದಾಳಿಯ ಕುರಿತು ನೌಕಾಪಡೆಯಿಂದ ತನಿಖೆ

    ನವದೆಹಲಿ: ಇಸ್ರೇಲ್​ಗೆ ಸೇರಿದ ವ್ಯಾಪಾರಿ ನೌಕೆಯೊಂದಿಗೆ ಭಾರತದ ಕೋಸ್ಟ್ ಗಾರ್ಡ್ ಅಧಿಕಾರಿಗಳು ಯಶಸ್ವಿಯಾಗಿ ಸಂಪರ್ಕವನ್ನು ಸ್ಥಾಪಿಸಿದ್ದಾರೆ. ಮಾನವರಹಿತ ವೈಮಾನಿಕ ವಾಹನದ ದಾಳಿಯಿಂದಾಗಿ ಈ ನೌಕೆಯಲ್ಲಿ ಶನಿವಾರ ಬೆಂಕಿ ಹೊತ್ತಿಕೊಂಡಿತ್ತು.

    ಭಾರತೀಯ ಕೋಸ್ಟ್ ಗಾರ್ಡ್‌ನ ಡೋರ್ನಿಯರ್ ಕಡಲ ಕಣ್ಗಾವಲು ವಿಮಾನವು ಶನಿವಾರ ಗುಜರಾತ್ ಕರಾವಳಿಯಲ್ಲಿ ಮಾನವರಹಿತ ವೈಮಾನಿಕ ವಾಹನದಿಂದ ಡಿಕ್ಕಿ ಹೊಡೆದ ಎಂವಿ ಕೆಮ್ ಪ್ಲುಟೊ ನೌಕೆಯೊಂದಿಗೆ ಸಂಪರ್ಕವನ್ನು ಸ್ಥಾಪಿಸಿದೆ.

    ಡ್ರೋನ್ ದಾಳಿಯ ನಂತರ ಭಾರತೀಯ ನೌಕಾಪಡೆಯ ಯುದ್ಧನೌಕೆಗಳಿಗೆ ಸೂಚನೆ ರವಾನಿಸಲಾಗಿತ್ತು. ತಕ್ಷಣವೇ ಈ ಯುದ್ಧನೌಕೆಗಳು ಇಸ್ರೇಲ್​ ನೌಕೆಯ ಸಿಬ್ಬಂದಿ ಸದಸ್ಯರಿಗೆ ಸಹಾಯ ಮಾಡಲು ಎಂ.ವಿ. ಕೆಮ್ ಪ್ಲುಟೊ ನೌಕೆ ಕಡೆಗೆ ತೆರಳಿದವು.

    “ಭಾರತದ ಯುದ್ಧನೌಕೆಗಳು ಮತ್ತು ಕೋಸ್ಟ್ ಗಾರ್ಡ್ ಹಡಗುಗಳು ಮಧ್ಯರಾತ್ರಿಯ ಹೊತ್ತಿಗೆ ಎಂವಿ ಕೆಮ್ ಪ್ಲುಟೊವನ್ನು ತಲುಪುವ ನಿರೀಕ್ಷೆಯಿದೆ. ಹೆಚ್ಚಿನ ಮೌಲ್ಯದ ಸರಕುಗಳನ್ನು ಹೊಂದಿರುವ ಈ ವ್ಯಾಪಾರಿ ಹಡಗಿನ ಮೇಲೆ ಡ್ರೋನ್ ಅಥವಾ ಇತರ ವಿಧಾನಗಳ ಮೂಲಕ ಹೇಗೆ ಸಮುದ್ರದಲ್ಲಿ ದಾಳಿ ಮಾಡಲಾಯಿತು ಎಂಬುದನ್ನು ಭದ್ರತಾ ಪಡೆಗಳು ತನಿಖೆ ಮಾಡಲಿವೆ” ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಇಸ್ರೇಲ್​ ಹಡಗಿನ ಬೆಂಕಿಯನ್ನು ನಂದಿಸಲಾಗಿದ್ದು, ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ, ಘಟನೆಯು ಹಡಗಿನ ಕಾರ್ಯನಿರ್ವಹಣೆಗೆ ಅಡಚಣೆ ಉಂಟು ಮಾಡಿದೆ ಎನ್ನಲಾಗಿದೆ.

    “ಡ್ರೋನ್ ದಾಳಿಯ ನಂತರ, ದೋಣಿಗಳ ಜಾಡು ಹಿಡಿಯಲು ಬಳಸಲಾಗುವ ಹಡಗಿನ ಸ್ವಯಂಚಾಲಿತ ಗುರುತಿನ ವ್ಯವಸ್ಥೆ ಬಂದ್ ಆಗಿದೆ. ಹಡಗಿನ ವಿದ್ಯುತ್ ಉತ್ಪಾದನಾ ವ್ಯವಸ್ಥೆಯು ಈಗ ಕಾರ್ಯನಿರ್ವಹಿಸುತ್ತಿದೆ. ಅದು ಪ್ರಯಾಣ ಮುಂದುವರಿಸುವ ಮೊದಲು ಹೆಚ್ಚಿನ ತಪಾಸಣೆಗಳನ್ನು ನಡೆಸಲಾಗುತ್ತಿದೆ” ಎಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

    ಈ ನೌಕೆಯು ಕಚ್ಚಾ ತೈಲವನ್ನು ಹೊತ್ತೊಕೊಂಡು ಸೌದಿ ಅರೇಬಿಯಾದ ಬಂದರಿನಿಂದ ಮಂಗಳೂರಿಗೆ ಬರುತ್ತಿತ್ತು.

    ಪಾಕ್ ಸೇನೆಯು ತನ್ನ ಮಿಲಿಟರಿ ಪೋಸ್ಟ್​ಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇಕೆ?

    2023ರಲ್ಲಿ ಭಾರತೀಯರನ್ನು ಸೆಳೆದ ತಾಣಗಳಿವು… 2024ರಲ್ಲಿ ಫ್ರಾನ್ಸ್​ ನಗರದತ್ತ ಆಕರ್ಷಣೆ ಏಕೆ?

    ನಿಫ್ಟಿಯಲ್ಲಿ ಈ ವರ್ಷ 2 ಷೇರುಗಳಿಗೆ ಮಾತ್ರ ನಷ್ಟ; ಕೆಲವು ಶೇ. 80ಕ್ಕೂ ಅಧಿಕ ಲಾಭ; 2024ರಲ್ಲಿ ಏನಾಗಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts