More

    ಪಾಕ್ ಸೇನೆಯು ತನ್ನ ಮಿಲಿಟರಿ ಪೋಸ್ಟ್​ಗೆ ತಾನೇ ಬೆಂಕಿ ಹಚ್ಚಿಕೊಂಡಿದ್ದೇಕೆ?

    ಶ್ರೀನಗರ: ಗಡಿಗಳನ್ನು ಕಾಯುವುದಕ್ಕಾಗಿ ಮಿಲಿಟರಿಗೆ ಪೋಸ್ಟ್​ಗಳನ್ನು (ಸೇನಾ ಠಾಣೆಗಳು) ನಿರ್ಮಿಸಲಾಗಿರುತ್ತದೆ. ನೆರೆಯ ದೇಶದ ಜತೆ ಸಂಘರ್ಷಗಳಾದ ಸಂದರ್ಭದಲ್ಲಿ ಈ ಪೋಸ್ಟ್​ಗಳು ಧ್ವಂಸಗೊಳ್ಳಬಹುದು. ಆದರೆ, ಪಾಕಿಸ್ತಾನ ಈಗ ತನ್ನ ಪೋಸ್ಟ್​ ಒಂದಕ್ಕೆ ತಾನೇ ಬೆಂಕಿ ಹಚ್ಚಿ ನಾಶ ಮಾಡಿದೆ ಎಂಬುದು ನಂಬಲಸಾಧ್ಯವಾದರೂ ಸತ್ಯ.

    ಪಾಕಿಸ್ತಾನ ಇಂತಹ ಕೃತ್ಯ ಎಸಗಿರುವುದರಲ್ಲಿ ಕುತಂತ್ರ ಅಡಗಿದೆ.

    ಜಮ್ಮುವಿನ ಗಡಿಯಲ್ಲಿ ಭಾರತೀಯ ಸೇನೆಯು ಉಗ್ರರ ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ. ಈ ಸಂದರ್ಭದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯಲಾಗಿದ್ದರೆ, ಇನ್ನಿಬ್ಬರು ಪಾಕಿಸ್ತಾನದ ಕಡೆಗೆ ವಾಪಸಾಗಿದ್ದಾರೆ.

    ಈ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನಕ್ಕೆ ಸಹಾಯ ಮಾಡುವ ಕುತಂತ್ರದೊಂದಿಗೆ ಪಾಕ್ ಸೇನೆಯು ತನ್ನ ಪೋಸ್ಟ್​ಗೆ ತಾನೇ ಬೆಂಕಿ ಹಚ್ಚಿಕೊಂಡಿದೆ.

    ಕಳೆದ ರಾತ್ರಿ ಜಮ್ಮುವಿನ ಅತಾರಾಷ್ಟ್ರೀಯ ಗಡಿಯ ಮೂಲಕ ಭಾರತದೊಳಗೆ ನುಸುಳಲು ಯತ್ನಿಸಿದ ನಾಲ್ವರು ಭಯೋತ್ಪಾದಕರಿಗೆ ಪಾಕ್ ಸೇನೆ ನೆರವು ನೀಡಿದೆ. ಈ ಸಂದರ್ಭಲ್ಲಿ ಭಾರತದ ಕಡೆಗಿದ್ದ ಕಣ್ಗಾವಲು ಉಪಕರಣಗಳ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನಿ ಸೇನೆಯು ತನ್ನ ಒಂದು ಪೋಸ್ಟ್​ಗೆ ಸ್ವತಃ ಬೆಂಕಿ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ.

    ಆದರೆ, ಭಾರತೀಯ ಸೇನೆಯು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿವೆ. ವೈಟ್ ನೈಟ್ ಕಾರ್ಪ್ಸ್ ಎಂದೂ ಕರೆಯಲ್ಪಡುವ ಭಾರತೀಯ ಸೇನೆಯ 16ನೇ ಕಾರ್ಪ್ಸ್ ಸೇನಾ ಘಟಕವು ಅಖ್ನೂರ್ ಸೆಕ್ಟರ್‌ನಲ್ಲಿ ನಾಲ್ವರು ಭಯೋತ್ಪಾದಕರ ಚಲನವಲನ ಗಮನಿಸಿದೆ ಎಂದು ಎಕ್ಸ್ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದೆ. ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಅಲ್ಲದೆ, ಒಂದು ಶವವನ್ನು ಗಡಿಯುದ್ದಕ್ಕೂ ಹಿಂದಕ್ಕೆ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ ಎಂದು ಅದು ಹೇಳಿದೆ.

    ಭಯೋತ್ಪಾದನೆಯ ಹೊಸ ತಾಣವಾಗಿ ಹೊರಹೊಮ್ಮುತ್ತಿರುವ ರಜೌರಿ-ಪೂಂಚ್ ಪ್ರದೇಶದ 200 ಕಿ.ಮೀ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ಒಳನುಸುಳುವಿಕೆ ಮತ್ತು ಭಯೋತ್ಪಾದಕರ ವಿರುದ್ಧ ಸೇನೆಯು ಈಗ ತೀವ್ರ ಕಾರ್ಯಾಚರಣೆ ಆರಂಭಿಸಿದೆ.

    ಗುರುವಾರ ಪೂಂಚ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದು, ಮೂವರು ಗಾಯಗೊಂಡಿದ್ದಾರೆ. ಡೇರಾ ಕಿ ಗಲಿ ಪ್ರದೇಶದ ಮೂಲಕ ಸಾಗುತ್ತಿದ್ದ ಎರಡು ಸೇನಾ ವಾಹನಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಈ ಪ್ರದೇಶದಲ್ಲಿ ಎನ್‌ಕೌಂಟರ್ ನಡೆದಿತ್ತು.

    ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಜೌರಿ-ಪೂಂಚ್ ಪ್ರದೇಶದಲ್ಲಿ ನಡೆದ ಅವಳಿ ದಾಳಿಯಲ್ಲಿ 10 ಸೈನಿಕರು ಹುತಾತ್ಮರಾಗಿದ್ದರು.

    2023ರಲ್ಲಿ ಭಾರತೀಯರನ್ನು ಸೆಳೆದ ತಾಣಗಳಿವು… 2024ರಲ್ಲಿ ಫ್ರಾನ್ಸ್​ ನಗರದತ್ತ ಆಕರ್ಷಣೆ ಏಕೆ?

    ನಿಫ್ಟಿಯಲ್ಲಿ ಈ ವರ್ಷ 2 ಷೇರುಗಳಿಗೆ ಮಾತ್ರ ನಷ್ಟ; ಕೆಲವು ಶೇ. 80ಕ್ಕೂ ಅಧಿಕ ಲಾಭ; 2024ರಲ್ಲಿ ಏನಾಗಲಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts