More

    ಕೈ ವಿರುದ್ಧ ಮೋದಿ ಸಿಡಿಗುಂಡು; ಬೆಳಗಾವಿ, ಶಿರಸಿ, ದಾವಣಗೆರೆ, ಹೊಸಪೇಟೆಯಲ್ಲಿ ನಮೋ ಮೋಡಿ

    ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನ ನಡೆಯುವ 14 ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಭಾನುವಾರ ಇಡೀ ದಿನ ಮತಬೇಟೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಬೆಳಗಾವಿ, ಶಿರಸಿ, ದಾವಣಗೆರೆ, ಹೊಸಪೇಟೆಯಲ್ಲಿ ಕಾಂಗ್ರೆಸ್ ವಿರುದ್ಧ ಕಹಳೆ ಮೊಳಗಿಸಿದರು.

    ಬೆಳಗಾವಿ ದಲಿತ ಮಹಿಳೆ ವಿವಸ್ತ್ರ ಪ್ರಕರಣ, ಹುಬ್ಬಳ್ಳಿ ನೇಹಾ ಹತ್ಯೆ ವಿಚಾರ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಉಲ್ಲೇಖಿಸಿ ರಾಜ್ಯ ಸರ್ಕಾರದ ಮೇಲೆ ಗದಾ ಪ್ರಹಾರ ನಡೆಸಿದರು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು, ಅಭಿವೃದ್ಧಿ ಹಳ್ಳ ಹಿಡಿದಿದೆ. ಕಾಂಗ್ರೆಸ್ ಪಿಎಫ್​ಐ ಜತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿದೆ ಎಂದು ಚಾಟಿ ಬೀಸಿದರು.

    ಒಂದೇ ದಿನ ನಾಲ್ಕು ಲೋಕಸಭೆ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ ಮೋದಿ, ಅಬ್ಬರ, ವಿನಮ್ರ, ವಿಶ್ವಾಸ ತುಂಬುವ ಮಾತುಗಳ ಮೂಲಕ ಲಕ್ಷಾಂತರ ಜನರ ಮನಸೆಳೆದು ಮತಶಿಕಾರಿಗೆ ಇಳಿದದ್ದು ವಿಶೇಷವಾಗಿತ್ತು. ಗಂಡುಮೆಟ್ಟಿನ ನೆಲವೆನಿಸಿದ ಕರ್ನಾಟಕದ ಉತ್ತರ ಪ್ರಾಂತದ ಬೆಳಗಾವಿ, ಶಿರಸಿ, ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ‘ವಿಕಸಿತ ಭಾರತಕ್ಕಾಗಿ ವಿಜಯಸಂಕಲ್ಪ’ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಕ್ ಪ್ರಹಾರ ನಡೆಸಿದರು. ಅಭಿವೃದ್ಧಿ, ಹಿಂದುತ್ವ ಹಾಗೂ ಓಲೈಕೆ ರಾಜಕಾರಣದ ಅಸ್ತ್ರ ಪ್ರಯೋಗಿಸಿ ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಒಳಗೊಂಡ ಇಂಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ವರ್ಷಕ್ಕೊಬ್ಬರು ಪ್ರಧಾನಿಯಾಗುತ್ತಾರೆ. ಅಧಿಕಾರಕ್ಕಾಗಿ ಬಡಿದಾಡುಕೊಂಡು, ಸ್ಥಿರ ಆಡಳಿತ, ದೇಶದ ಸುರಕ್ಷತೆ, ಅಭಿವೃದ್ಧಿ ಕಡೆಗಣಿಸುತ್ತಾರೆ ಎಂದು ಜನರಿಗೆ ಎಚ್ಚರಿಸುವುದನ್ನೂ ಮೋದಿ ಮರೆಯಲಿಲ್ಲ.

    ತುಷ್ಟೀಕರಣದ ಪರಾಕಾಷ್ಠೆ: 

    ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಅಸ್ತವ್ಯಸ್ತವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದಿದ್ದು, ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆಯಿಂದ ಆಂತರಿಕ ಸುರಕ್ಷತೆಗೆ ಅಪಾಯ ತಂದೊಡ್ಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧವೂ ಮುಗಿಬಿದ್ದರು. ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟಕ್ಕೆ ಬೇರೆ ಬಣ್ಣ ಹಚ್ಚಲು ಪ್ರಯತ್ನಿಸಿದರು. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಅತ್ಯಂತ ಗಂಭೀರವಾಗಿದ್ದು, ಈ ಘಟನೆಯಲ್ಲೂ ಮೃದು ಧೋರಣೆ ತಳೆದು ಓಲೈಕೆಗೆ ಮುಂದಾದರು ಎಂದು ಮೋದಿ ಆಕ್ರೋಶ ಹೊರಹಾಕಿದರು.

    ಎಚ್​ಡಿಕೆ, ಬಿವೈವಿ ಸಾಥ್:

    ಪ್ರಧಾನಿ ಮೋದಿಯವರೊಂದಿಗೆ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ 2ನೇ ಬಾರಿ ವೇದಿಕೆ ಹಂಚಿಕೊಂಡರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲ ಬಾರಿಗೆ ಸಾಥ್ ನೀಡಿದ್ದು ಹೊಸಪೇಟೆ ಸಭೆಯ ವಿಶೇಷವಾಗಿತ್ತು.

    ಬಾಗಲಕೋಟೆಗೆ ಇಂದು ನಮೋ:

    ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, 12ಕ್ಕೆ ವೇದಿಕೆಗೆ ಮೋದಿ ಆಗಮಿಸಲಿದ್ದಾರೆ.

    ನನಗಂತೂ ಇದು ಸರಿ ಅನಿಸಲಿಲ್ಲ! ದೆಹಲಿ ಏರ್​ಪೋರ್ಟ್​ನ ಪಾಸ್​ಪೋರ್ಟ್​ ಅಧಿಕಾರಿ ವಿರುದ್ಧ ರಷ್ಯನ್​ ಚೆಲುವೆ ಕಿಡಿ

    ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts