More

    IPL 2024: ಈಡನ್​ನಲ್ಲಿ ಇಂದು ನೈಟ್​ರೈಡರ್ಸ್-ಕ್ಯಾಪಿಟಲ್ಸ್​ ಮರುಮುಖಾಮುಖಿ

    ಕೋಲ್ಕತ: ತವರಿನಲ್ಲಿ 250 ಪ್ಲಸ್​ ರನ್​ ಕಲೆಹಾಕಿದರೂ ಸೋಲು ಅನುಭವಿಸಿದ ಕೋಲ್ಕತ ನೈಟ್​ರೈಡರ್ಸ್​ ತಂಡ ಐಪಿಎಲ್​-17ರ ತನ್ನ 9ನೇ ಲೀಗ್​ ಪಂದ್ಯದಲ್ಲಿ, ಲಯದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಸೋಮವಾರ ಸೆಣಸಾಡಲಿದೆ. ಅಂಕಪಟ್ಟಿಯ ಅಗ್ರ 4ರಲ್ಲಿ ಸ್ಥಾನ ಪಡೆಯಲು ರಿಷಭ್​ ಪಂತ್​ ಪಡೆ ಹೋರಾಡಲಿದೆ. ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್​ ಮರುಮುಖಾಮುಖಿಯಲ್ಲಿ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.

    ಹಿಂದಿನ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಪ್ಲೇಆಫ್​​ ಅವಕಾಶ ವೃದ್ಧಿಸಿಕೊಂಡಿರುವ ಡೆಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು, 5 ಸೋಲಿನೊಂದಿಗೆ 10 ಅಂಕ ಸಂಪಾದಿಸಿದೆ. ಇತ್ತ ಆರಂಭಿಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೆಕೆಆರ್​ ಕಳೆದ 3 ಪಂದ್ಯಗಳಲ್ಲಿ 2 ಸೋಲು ಅನುಭವಿಸಿದೆ. ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು, 3 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಆದರೆ ರನ್​ರೇಟ್​ನಲ್ಲಿ ಡೆಲ್ಲಿ ವಿರುದ್ಧ ಮೇಲುಗೈ ಸಾಧಿಸಿದೆ. ಪಂಜಾಬ್​ ವಿರುದ್ಧ 261 ರನ್​ ರಸಿಕೊಳ್ಳುವಲ್ಲಿ ವಿಫಲವಾದ ಕೆಕೆಆರ್​ಗೆ ಬೌಲಿಂಗ್​ ವಿಭಾಗ ತಲೆನೋವು ತಂದಿದೆ. ಈಡನ್​ ಗಾರ್ಡನ್ಸ್​ನಲ್ಲಿ ಮತ್ತೆ ರನ್​ಮಳೆ ಹರಿಯುವ ಸಾಧ್ಯತೆಗಳಿದ್ದು, ಹಿಂದಿನ ಪಂದ್ಯದಲ್ಲಿ ಒಟ್ಟು 523 ರನ್​, 42 ಸಿಕ್ಸರ್​ಗಳಿಗೆ ಸಾಯಾಗಿತ್ತು. ಕೆಕೆಆರ್​ ಒತ್ತಡದಲ್ಲಿ ಕಣಕ್ಕಿಳಿಯಲಿದ್ದು ಪ್ಲೇ ಆಫ್​​ಗೇರುವ ಹಾದಿಯಲ್ಲಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್​, ಲಖನೌ ಸೂಪರ್​ ಜೈಂಟ್ಸ್​ ಎದುರು ಕಠಿಣ ಸವಾಲು ಎದುರಾಗುವ ನಿರೀೆ ಇದೆ.

    ಡೆಲ್ಲಿಗೆ ಬದಲಿ ಆಟಗಾರನ ಬಲ
    ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಟೂರ್ನಿಯಿಂದ ಹೊರಬಿದ್ದ ಬಳಿಕ ಬದಲಿ ಆಟಗಾರನಾಗಿ ಡೆಲ್ಲಿ ಸೇರಿದ ಜೇಕ್ ಫ್ರೇಸರ್​ ಮೆಕ್​ಗುರ್ಕ್​ ತಂಡದ ಯಶಸ್ಸಿನಲ್ಲಿ ಎಕ್ಸ್​ ಪ್ಯಾಕ್ಟರ್​ ಆಗಿದ್ದಾರೆ. ವಿಶ್ವ ಶ್ರೇಷ್ಠ ಬೌಲರ್​ಗಳನ್ನು ಸರಾಗವಾಗಿ ದಂಡಿಸುವ ಫ್ರೇಸರ್​, ಆಡಿರುವ 5 ಪಂದ್ಯಗಳಲ್ಲಿ 247 ರನ್​ ಕಲೆಹಾಕಿದ್ದಾರೆ. ಮುಂಬೈ ಎದುರು ರನ್​ಹೊಳೆ ಹರಿಸಿದ ಡೆಲ್ಲಿಗೆ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ರಿಷಭ್​ ಪಂತ್​, ಟ್ರಸ್ಟಾನ್​ ಸ್ಟಬ್ಸ್​ ಸ್ಲಾಗ್​ ಓವರ್​ಗಳಲ್ಲಿ ಬೌಲರ್​ಗಳಿಗೆ ಕಂಟಕವಾಗಿದ್ದಾರೆ.

    ಮುಖಾಮುಖಿ: 33
    ಡೆಲ್ಲಿ: 15
    ಕೆಕೆಆರ್​: 17
    ರದ್ದು: 1
    ನೇರಪ್ರಸಾರ: ಸ್ಟಾರ್​ ಸ್ಪೋಟ್ಸ್​, ಜಿಯೋ ಸಿನಿಮಾ .

    ಏಷ್ಯನ್​ ಕಿರಿಯರ ಅಥ್ಲೆಟಿಕ್ಸ್​ನಲ್ಲಿ ರಾಜ್ಯದ ಉನ್ನತಿ, ನಿಯೋಲ್​ಗೆ ಕಂಚಿನ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts