ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಎನ್‌ಐಎ ಅಧಿಕಾರಿಗಳು (NIA) ಓರ್ವ ಆರೋಪಿಯನ್ನು ಬಂಧಿಸಿದ್ದರು. ಅರೆಸ್ಟ್ ಆದವನನ್ನು ಮುಜಮ್ಮಿಲ್ ಶರೀಫ್ ಎಂದು ಗುರುತಿಸಲಾಗಿದೆ. ಇದರ ಬೆನ್ನಲ್ಲೇ ಇದೀಗ ಶಂಕಿತರ ಫೋಟೋ ಬಿಡುಗಡೆಗೊಳಿಸಿದ NIA, ಆರೋಪಿಗಳನ್ನು ಹುಡುಕಿಕೊಟ್ಟವರಿಗೆ ಭರ್ಜರಿ ನಗದು ಬಹುಮಾನ ಘೋಷಣೆ ಮಾಡಿದೆ.
ಇದನ್ನೂ ಓದಿ: ಕೇವಲ 8 ತಿಂಗಳಲ್ಲಿ ಷೇರುಗಳ ಬೆಲೆ ರೂ. 75ರಿಂದ 850ಕ್ಕೆ: 1000% ಲಾಭದೊಂದಿಗೆ ಹೂಡಿಕೆದಾರರಿಗೆ ಶ್ರೀಮಂತಿಕೆ
ಬುಧವಾರ ಮೂರು ರಾಜ್ಯಗಳ ಅನೇಕ ಸ್ಥಳಗಳಲ್ಲಿ ಭಾರಿ ದಾಳಿ ನಡೆಸಿದ್ದ ನಂತರ ಪ್ರಮುಖ ಸಂಚುಕೋರನನ್ನು ಎನ್‌ಐಎ ತಂಡ ಬಂಧಿಸಿತು. ರಾಜ್ಯದಲ್ಲಿ 12, ತಮಿಳುನಾಡಿನ 5 ಮತ್ತು ಉತ್ತರ ಪ್ರದೇಶದ 1 ಸೇರಿದಂತೆ 18 ಸ್ಥಳಗಳಲ್ಲಿ ಎನ್‌ಐಎ ಅಧಿಕಾರಿಗಳು ಬಿರುಸಿನ ಕಾರ್ಯಾಚರಣೆ ನಡೆಸಿದ್ದರು. ಸ್ಫೋಟವನ್ನು ನಡೆಸಿದ ಪ್ರಮುಖ ಆರೋಪಿ ಮುಸ್ಸಾವಿರ್ ಶಜೀಬ್ ಹುಸೇನ್ ಎಂದು ಎನ್‌ಐಎ ಮೊದಲು ಗುರುತಿಸಿತ್ತು.
ಇದೀಗ ಶಂಕಿತರ ಫೋಟೋ ಮತ್ತು ಅವರ ವಿವರಗಳನ್ನು ಸ್ಪಷ್ಟವಾಗಿ ಬಿಡುಗಡೆಗೊಳಿಸಿರುವ ಎನ್‌ಐಎ, ವಾಟೆಂಡ್ ಲಿಸ್ಟ್ನಲ್ಲಿರುವವರನ್ನು ಹುಡುಕಿಕೊಟ್ಟವರಿಗೆ 10,00,000 ಲಕ್ಷ ರೂ. ನಗದು ಹಣವನ್ನು ಬಹುಮಾನವಾಗಿ ಘೋಷಣೆ ಮಾಡಿದೆ,(ಏಜೆನ್ಸೀಸ್).