ಮುಂಬೈ: ಬೊಂಡಾಡಾ ಇಂಜಿನಿಯರಿಂಗ್ ಷೇರುಗಳು ಕೇವಲ 8 ತಿಂಗಳಲ್ಲಿ ಹೂಡಿಕೆದಾರರನ್ನು ಸಾಕಷ್ಟು ಶ್ರೀಮಂತರನ್ನಾಗಿಸಿದೆ.
ಕಂಪನಿಯ ಐಪಿಒ ಆಗಸ್ಟ್ 2023 ರಲ್ಲಿ ಬಂದಿತ್ತು. ಐಪಿಒದಲ್ಲಿ ಷೇರುಗಳ ಬೆಲೆ 75 ರೂ. ಇತ್ತು. ಈಗ 28 ಮಾರ್ಚ್ 2024 ರಂದು ಈ ಷೇರುಗಳ ಬೆಲೆ ರೂ 850 ದಾಟಿದೆ. ಕಂಪನಿಯ ಷೇರುಗಳು ಕಳೆದ 8 ತಿಂಗಳುಗಳಲ್ಲಿ ಹೂಡಿಕೆದಾರರಿಗೆ 1000% ಲಾಭವನ್ನು ನೀಡಿವೆ.
ಈ ಷೇರುಗಳ 52 ವಾರಗಳ ಗರಿಷ್ಠ ಬೆಲೆ 949.95 ರೂ. ಹಾಗೂ ಕನಿಷ್ಠ ಬೆಲೆ 142.50 ರೂ. ಇದೆ.
ಬೊಂಡಾಡಾ ಇಂಜಿನಿಯರಿಂಗ್‌ನ ಐಪಿಒ ಅನ್ನು 18 ಆಗಸ್ಟ್ 2023 ರಂದು ತೆರೆಯಲಾಗಿತ್ತು. ಐಪಿಒದಲ್ಲಿ ಷೇರುಗಳ ಬೆಲೆ 75 ರೂ. ಇತ್ತು. ಕಂಪನಿಯ ಷೇರುಗಳನ್ನು ಆಗಸ್ಟ್ 30, 2023 ರಂದು ರೂ 142.50 ನಲ್ಲಿ ಪಟ್ಟಿ ಮಾಡಲಾಗಿತ್ತು. ಪಟ್ಟಿ ಮಾಡಿದ ನಂತರ ಷೇರುಗಳ ಬೆಲೆಯಲ್ಲಿ ಬಲವಾದ ಏರಿಕೆಯಾಗಿದೆ.
ಐಪಿಒ ಬೆಲೆಗೆ ಹೋಲಿಸಿದರೆ ಈಗ ಕಂಪನಿಯ ಷೇರುಗಳ ಬೆಲೆ 1037% ಹೆಚ್ಚಾಗಿದೆ. ಗುರುವಾರ, ಮಾರ್ಚ್ 28, 2024 ರಂದು ಈ ಷೇರುಗಳ ಬೆಲೆ ರೂ 852.15 ಕ್ಕೆ ತಲುಪಿದೆ.
ಬೊಂಡಾಡಾ ಇಂಜಿನಿಯರಿಂಗ್ ಕಂಪನಿಯನ್ನು 2012 ರಲ್ಲಿ ಪ್ರಾರಂಭಿಸಲಾಗಿದೆ. ದೂರಸಂಪರ್ಕ ಮತ್ತು ಸೌರಶಕ್ತಿ ಉದ್ಯಮಗಳಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ನಿರ್ಮಾಣ ಕಂಪನಿಗಳಿಗೆ ಕಾರ್ಯಾಚರಣೆಗಳು ಮತ್ತು ನಿರ್ವಹಣೆ ಸೇವೆಗಳನ್ನು ಒದಗಿಸುತ್ತದೆ.
ನಿಮ್ಮ ಬಳಿ ಈ ಷೇರುಗಳಿವೆಯೇ? ಪ್ರಸ್ತುತ ಹಣಕಾಸು ವರ್ಷದಲ್ಲಿ 1 ಲಕ್ಷವಾಯ್ತು 6 ಲಕ್ಷ; ಮ್ಯೂಚುವಲ್ ಫಂಡ್ಗಳಿಗೆ 617%ವರೆಗೆ ಲಾಭ