ಸಾಂದರ್ಭಿಕ ಚಿತ್ರ 
ನ್ಯೂಸ್

ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಯೋಧನ ಮೃತದೇಹ ಪತ್ತೆ: ಯುದ್ಧ ನೌಕೆಯಲ್ಲಿ ನಡೆದಿದ್ದೇನು..?

Webdesk - Naveen Kamakeri

ಮುಜಾಫರ್‌ಪುರ: ಭಾರತದ ಯುದ್ಧ ನೌಕೆ ಐಎನ್​ಎಸ್ ವಿಕ್ರಾಂತ್​ ಹಡಗಿನಲ್ಲಿ ನಾವಿಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಲವ್​ ಮಾಡಿ ಸ್ಮಶಾನದಲ್ಲಿ ಅದ್ಧೂರಿಯಾಗಿ ವಿವಾಹವಾದ ಜೋಡಿ: ಮದುವೆಗೂ ಮಸಣದ ನಡುವಿದೆ ಸಂಬಂಧ..!

ಮೃತನ ಗುರುತನ್ನು ಕಾರಣಾಂತರಗಳಿಂದ ಬಹಿರಂಗಪಡಿಸಿಲ್ಲವಾದರೂ, 19 ವರ್ಷದ ಯೋಧನು ಬಿಹಾರದ ಮುಜಾಫರ್‌ಪುರಕ್ಕೆ ಸೇರಿದವನಾಗಿದ್ದಾನೆ. ಆತನಿಗೆ ಇನ್ನು ಮದುವೆಯಾಗಿರಲಿಲ್ಲ ಎಂದು ಹೇಳಲಾಗಿದ್ದು, ಗುರುವಾರ ಮುಂಜಾನೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಮೇಲ್ನೋಟಕ್ಕೆ ಇದು ಆತ್ಮಹತ್ಯೆಯ ಪ್ರಕರಣವೆಂದು ತೋರುತ್ತಿದ್ದರೂ ಸಹಿತ ಘಟನೆಯ ಕುರಿತು ಶಾಸನಬದ್ಧ ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಸೇನಾ ಶಿಬಿರದಲ್ಲಿ ಸೇನಾ ಯೋಧನೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಆತನನ್ನು ಮಹಾರಾಷ್ಟ್ರ ಮೂಲದ ಡೊಂಬಲ್ ಮಯೂರ್ ಎಂದು ಗುರುತಿಸಲಾಗಿತ್ತು.(ಏಜೆನ್ಸೀಸ್​​)