ಐಐಟಿ ಬಾಂಬೆ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
- ಐಐಟಿ ಬಾಂಬೆ ಕ್ಯಾಂಪಸ್‌ನ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ನುಗ್ಗಿದ ಚಿರತೆ
- ನಾಯಿಯನ್ನು ಬೇಟೆಯಾಡಿ ಕಚ್ಚಿ ಹೊತ್ತೊಯ್ದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
ಮುಂಬೈ: ಇತ್ತೀಚೆಗೆ ಐಐಟಿ ಬಾಂಬೆ ಕ್ಯಾಂಪಸ್‌ನ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯವೊಂದು ಕಾಲೇಜಿನ ವಿದ್ಯಾರ್ಥಿಗಳ ಹಾಗೂ ಅಕ್ಕ-ಪಕ್ಕದ ಮನೆಯವರ ಭಯಕ್ಕೆ ಕಾರಣವಾಗಿದೆ.
ಕಾಲೇಜಿನ ಕ್ಯಾಂಪಸ್‌ಗೆ ಎಂಟ್ರಿಕೊಟ್ಟ ಚಿರತೆಯೊಂದು ನಾಯಿಯನ್ನು ಕೊಂದು ಹೊತ್ತುಕೊಂಡು ಹೋಗಿರುವ ವಿಡಿಯೋ (Leopard In IIT Bombay) ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ವಿಡಿಯೋನಲ್ಲೇನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋನಲ್ಲಿ, ವಿದ್ಯಾರ್ಥಿಗಳ ವಸತಿ ನಿಲಯದಲ್ಲಿದ್ದ ನಾಯಿಯೊಂದರ ಮೇಲೆ ಚಿರತೆ ದಾಳಿ ಮಾಡಿದೆ. ಕ್ಷಣಾರ್ಧದಲ್ಲಿ ದಾಳಿ ನಡೆಸಿದ ಚಿರತೆ ನಾಯಿಯನ್ನು ಕೊಂದು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವಿದ್ಯಾರ್ಥಿಗಳ ಮತ್ತು ಸುತ್ತಮುತ್ತಲಿರುಬ ಜನರ ಮನದಲ್ಲಿ ಆತಂಕವನ್ನು ಮೂಡಿಸಿದೆ.
ಈ ವಿಡಿಯೋ ಹರಿದಾಡುತ್ತಿದ್ದಂತೆ, ಐಐಟಿ ಕ್ಯಾಂಪಸ್ ಸುತ್ತ ಮನೆಗಳಲ್ಲಿ ವಾಸಿಸುತ್ತಿರುವ ಜನರು ಭಯಭಿತರಾಗಿದ್ದಾರೆ. ಹೀಗೆ ರಾತ್ರಿ ಹೊತ್ತು ಕಾಡು ಪ್ರಾಣಿಗಳು ಜನನಿಬಿಡ ಪ್ರದೇಶಕ್ಕೆ ಬಂದರೆ ನಾವು ಇಲ್ಲಿ ಹೇಗೆ ವಾಸಿಸುವುದೆಂದು ವ್ಯಕ್ತಿಯೊಬ್ಬರು ಹೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ಐಐಟಿ ಚಿರತೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಬಾಕ್ಸ್ ತುಂಬಿಸುವ ಕೆಲಸಕ್ಕೆ ಇಳಿದ್ದಿದ್ದಾರೆ. ಕಾಡನ್ನು ಕಡಿದು ಕಟ್ಟಡ ನಿರ್ಮಿಸಿದರೆ ಕಾಡು ಪ್ರಾಣಿಗಳು ಎಲ್ಲಿಗೆ ಹೋಗಬೇಕು? ಎಂದು ಪರಿಸರ ಪ್ರೇಮಿಯೊಬ್ಬರು ಪ್ರಶ್ನಿಸಿದ್ದಾರೆ.
ಅಷ್ಟು ಸುರಕ್ಷಿತವಾಗಿರುವ ಐಐಟಿಗೆ ಈ ಚಿರತೆ ಎಂಟ್ರಿ ಕೊಟ್ಟದ್ದಾದರೂ ಹೇಗೆ? ಅಲ್ಲಿ ಯಾವುದೇ ಭದ್ರತೆ ಇಲ್ಲವೇ? ಎಂದು ಇನ್ನೊಬ್ಬರು ಆಕ್ರೋಶ ಹೊರಹಾಕಿದ್ದಾರೆ. ರಾತ್ರಿ ಹೀಗೆ ಕಾಡು ಪ್ರಾಣಿಗಳು ಅಡ್ಡಾಡುತ್ತಿದ್ದರೆ, ಅಲ್ಲಿರುವ ಜನಕ್ಕೆ ಹೇಗೆ ತಾನೆ ಸುಖವಾದ ನಿದ್ದೆ ಬಂದಿತು ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).