ಮುಂಬೈ: ಕೆಲ ಕ್ಷೇತ್ರಗಳಲ್ಲಿ ಲಿಂಗ ಸಮಾನತೆ ಎಂಬ ಪರಿಕಲ್ಪನೆಯೇ ಇರುವುದಿಲ್ಲ. ಹೀಗೂ ಇರುತ್ತಾ ಎಂದೇ ಪ್ರಶ್ನೆ ಕೇಳುತ್ತಾರೆ. ಐರೋಪ್ಯ ದೇಶಗಳಲ್ಲಿ ದಶಕಗಳ ಹಿಂದೆಯೇ ಜಾರಿಯಾದ ಅಂಶವೊಂದು ಭಾರತದಲ್ಲೀಗ ಗಮನ ಸೆಳೆಯುತ್ತಿದೆ. ದೇಶದಲ್ಲೇ ಮೊದಲು ಎನಿಸಿದೆ.
ಮುಂಬೈನ ದಾದರ್ನಲ್ಲಿರುವ ಸಂಚಾರ ನಿಯಂತ್ರಕ ದೀಪ ಹಾಗೂ ಬೋರ್ಡ್ಗಳು ವಾಹನ ಸವಾರರ ಹಾಗೂ ಪಾದಚಾರಿಗಳ ಗಮನ ಸೆಳೆಯುತ್ತಿವೆ. ನೆಟ್ಟಿಗರಂತೂ ಫುಲ್ ಫಿದಾ ಆಗಿದ್ದಾರೆ. ಮುಂಬೈ ಪಾಲಿಕೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್ ಯಶಸ್ಸಿಗೆ ಹೋಲಿಕೆ
ಇಲ್ಲಿನ ಸಿಗ್ನಲ್ ಲೈಟ್ಗಳಲ್ಲಿ ಮಹಿಳೆಯರನ್ನು ಪ್ರತಿನಿಧಿಸುವ ಚಿತ್ರಗಳನ್ನು ಬಳಸಲಾಗುತ್ತಿದೆ. ಸಂಚಾರ ಸೂಚನಾ ಫಲಕಗಳಲ್ಲೂ ಮಹಿಳೆಯರ ಚಿತ್ರ ಬಳಕೆಯಾಗುತ್ತಿದೆ. ಇಂಥದ್ದೊಂದು ಕ್ರಮ ದೇಶದಲ್ಲೇ ಮೊದಲು ಎನ್ನಲಾಗಿದೆ.
ಮಹಾರಾಷ್ಟ್ರ ಸಚಿವ ಹಾಗೂ ಸಿಎಂ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಈ ಚಿತ್ರಗಳನ್ನು ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದಾದರ್ ಮೂಲಕ ಹಾದು ಹೋಗಿದ್ದರೆ ನಿಮ್ಮನ್ನು ಹೆಮ್ಮೆ ಪಡುವಂತೆ ಮಾಡುತ್ತದೆ. ಮುಂಬೈ ಪಾಲಿಕೆ ಸರಳ ಉಪಾಯದೊಂದಿಗೆ ಲಿಂಗ ಸಮಾನತೆ ಸಾಧಿಸುತ್ತಿದೆ. ಟ್ರಾಫಿಕ್ ಸಿಗ್ನಲ್ ಲೈಟ್ಗಳಲ್ಲೂ ಮಹಿಳೆಯರಿದ್ದಾರೆ...! ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ; ಆಗಸ್ಟ್ ಅಂತ್ಯಕ್ಕೆ ಕರೊನಾ ನಿಗ್ರಹಿಸುತ್ತಾ ಮುಂಬೈ; ಶೇ.76ಕ್ಕೆ ಏರಿದ ಚೇತರಿಕೆ; 20 ಸಾವಿರಕ್ಕಿಳಿದ ಸಕ್ರಿಯ ಪ್ರಕರಣ
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಂಥ ಸರಳ ವಿಚಾರಗಳಿಂದ ದೊಡ್ಡ ಬದಲಾವನೆಗಳು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.