More

    ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

    ಮಾಸ್ಕೋ: ಕರೊನಾ ಲಸಿಕೆ ಸಂಶೋಧನೆಯಲ್ಲಿ ತಾನೇ ಮುಂಚೂಣಿಯಲ್ಲಿರುವುದಾಗಿ ಘೋಷಿಸಿಕೊಂಡಿರುವ ರಷ್ಯಾ, ವೈರಸ್​ ನಿಗ್ರಹಕ್ಕೆ  ಜಗತ್ತಿನಲ್ಲಿಯೇ ಮೊತ್ತ ಮೊದಲ ಲಸಿಕೆ ಸಿದ್ಧಗೊಳಿಸಿದ್ದು, ಅಕ್ಟೋಬರ್​ನಲ್ಲಿ ಸಾರ್ವತ್ರಿಕವಾಗಿ ಲಸಿಕೆ ನೀಡುವ ಬೃಹತ್​ ಪ್ರಮಾಣದ ಅಭಿಯಾನ ಆಯೋಜಿಸಲು ಸಿದ್ಧತೆಗಳನ್ನು ನಡೆಸಿದೆ.

    ಮಾಸ್ಕೋದಲ್ಲಿರುವ ಸರ್ಕಾರಿ ಸ್ವಾಮ್ಯದ ಗಾಮಲೆಯಾ ಇನ್​ಸ್ಟಿಟ್ಯೂಟ್ ಕರೊನಾ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸುವ ಕ್ಲಿನಿಕಲ್​ ಟ್ರಯಲ್​ ಪೂರ್ಣಗೊಳಿಸಿದೆ. ಲಸಿಕೆಯ ನೋಂದಣಿಗಾಗಿ ಸಂಶೋಧನಾ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಳಿಕ ಇದರ ನೋಂದಣಿ ಕಾರ್ಯ ನಡೆಯಲಿದೆ ಎಂದು​ ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್​ ಮುರಾಷ್ಕೋ ಹೇಳಿದ್ದಾಗಿ ಇಂಟರ್​ಫ್ಯಾಕ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಇದನ್ನೂ ಓದಿ; ಆಗಸ್ಟ್​ ಅಂತ್ಯಕ್ಕೆ ಕರೊನಾ ನಿಗ್ರಹಿಸುತ್ತಾ ಮುಂಬೈ; ಶೇ.76ಕ್ಕೆ ಏರಿದ ಚೇತರಿಕೆ; 20 ಸಾವಿರಕ್ಕಿಳಿದ ಸಕ್ರಿಯ ಪ್ರಕರಣ

    ಕ್ಲಿನಿಕಲ್​ ಟ್ರಯಲ್​ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಅಕ್ಟೋಬರ್​ನಲ್ಲಿ ಕರೊನಾ ಲಸಿಕೆ ನೀಡುವ ಅಭಿಯಾನ ನಡೆಸಲು ರಷ್ಯಾ ಸಿದ್ಧತೆ ನಡೆಸಿದೆ. ವೈದ್ಯರು ಹಾಗೂ ಶಿಕ್ಷಕರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಮಿಖಾಯಿಲ್ ತಿಳಿಸಿದ್ದಾರೆ.

    ಕರೊನಾ ನಿಗ್ರಹಕ್ಕೆ ರಷ್ಯಾದ ಪ್ರಥಮ ಲಸಿಕೆ ಇದಾಗಿದ್ದು, ಆಗಸ್ಟ್​ ಮೊದಲ ವಾರದಲ್ಲಿ ದೇಶೀಯ ನಿಯಂತ್ರಣ ಪ್ರಾಧಿಕಾರಗಳ ಪರವಾನಗಿ ಪಡೆದುಕೊಳ್ಳಲಿದೆ. ಬಳಿಕ ಆರೋಗ್ಯ ಕಾಯರ್ಯಕರ್ತರಿಗೆ ನೀಡಲಾಗುತ್ತದೆ ಎಂದು ಸ್ಥಳೀಯ ಮೂಲಗಳು ತಿಳಿಸಿದ್ದಾಗಿ ರಾಯ್ಟರ್ಸ್​ ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಲಸಿಕೆ ವಿಚಾರವಾಗಿ ಇಷ್ಟೊಂದು ತರಾತುರಿ ನಡೆಸಿರುವ ರಷ್ಯಾ ಜನರ ಸುರಕ್ಷೆ ಹಾಗೂ ಆರೋಗ್ಯ ವಿಚಾರವನ್ನು ಕಡೆಗಣಿಸಿ ಪ್ರತಿಷ್ಠೆಯನ್ನೇ ಮುಖ್ಯವಾಗಿಸಿಕೊಂಡಿದೆ ಎಂಬ ಟೀಕೆಯೂ ಕೇಳಿ ಬಂದಿದೆ.

    ಇದನ್ನೂ ಓದಿ; ಕರೊನಾ ಪಾಸಿಟಿವ್​ ಆದಾಗ ಆಸ್ಪತ್ರೆಗೆ ದಾಖಲಾಗಬೇಕೇ? ಬೇಡವೇ? ನೆರವಾಗಲಿದೆ ತಂತ್ರಜ್ಞಾನ

    ಏಕೆಂದರೆ, ಯಾವುದೇ ಲಸಿಕೆಯ ಬೃಹತ್​ ಪ್ರಮಾಣದ ಬಳಕೆಗೂ ಮುನ್ನ ಅದನ್ನು ಹತ್ತಾರು ಸಾವಿರಾರು ಜನರಿಗೆ ಪ್ರಾಯೋಗಿಕವಾಗಿ ನೀಡಬೇಕಾಗುತ್ತದೆ. ಇಷ್ಟೊಂದು ಬೃಹತ್​ ಮಟ್ಟದಲ್ಲಿ ರಷ್ಯಾ ಕ್ಲಿನಿಕಲ್​ ಟ್ರಯಲ್​ ನಡೆಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.
    ಆದರೆ, ಕರೊನಾ ಲಸಿಕೆಯ ಸಂಶೋಧನೆಯನ್ನು 1957ರಲ್ಲಿ ರಷ್ಯಾ ಹಾರಿಸಿದ ಜಗತ್ತಿನ ಮೊತ್ತ ಮೊದಲ ಉಪಗ್ರಹ ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಸಲಾಗುತ್ತಿದೆ.

    ರಷ್ಯಾದಲ್ಲಿ ಶನಿವಾರ (ಆಗಸ್ಟ್​ 1) 5,462 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 8,45,443ಕ್ಕೆ ತಲುಪಿದೆ. ಜತೆಗೆ, 95 ಜನರು ಮೃತಪಟ್ಟಿದ್ದು, ಈವರೆಗಿನ ಸಾವಿನ ಪ್ರಮಾಣ 14,058ಕ್ಕೆ ಏರಿಕೆಯಾಗಿದೆ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts