More

    ಆರಂಭವಾಗಿದೆ ಕರೊನಾದ ಅಂತ್ಯಕಾಲ; ದೆಹಲಿ ಮುಂಚೂಣಿಯಲ್ಲಿ; ಏನಿದು ಆರ್​-ವ್ಯಾಲ್ಯೂ ಲೆಕ್ಕಾಚಾರ…?

    ನವದೆಹಲಿ: ದೇಶದಲ್ಲಿ ಕಳೆದ 10 ದಿನಗಳಿಂದಲೂ ನಿತ್ಯ 50 ಸಾವಿರಕ್ಕೂ ಹೆಚ್ಚು ಕೇಸ್​ಗಳು ವರದಿಯಾಗುತ್ತಿವೆ. ಜತೆಗೆ, ಕರ್ನಾಟಕದಲ್ಲಿ 5 ಸಾವಿರಕ್ಕಿಂತ ಕಡಿಮೆ ಇಲ್ಲವೇ ಇಲ್ಲ ಎನ್ನುವಂತಾಗಿದೆ.

    ಇದರ ನಡುವೆ, ಗಣಿತಶಾಸ್ತ್ರಜ್ಞರ ಲೆಕ್ಕಾಚಾರವೊಂದು ಭಾರಿ ಭರವಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕರೊನಾ ಸೋಂಕು ಯಾವ ಮಟ್ಟದಲ್ಲಿ ವ್ಯಾಪಿಸಲಿದೆ ಎಂಬುದಕ್ಕೆ ಹಲವು ಸೂತ್ರಗಳ ಆಧಾರದಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ.

    ಸದ್ಯ ಚೆನ್ನೈನ ಇನ್​ಸ್ಟಿಟ್ಯೂಟ್​ ಆಫ್​ ಮ್ಯಾಥಮೆಟಿಕಲ್​ ಸೈನ್ಸ್​ನ ಸೀತಾಭ್ರ ಸಿನ್ಹಾ ಹಾಗೂ ಸಂಶೋಧನಾ ತಂಡದ ಲೆಕ್ಕಾಚಾರದಂತೆ, ದೆಹಲಿ, ಮುಂಬೈ ಹಾಗೂ ಚೆನ್ನೈಯಲ್ಲಿ ಕರೊನಾದ ಅಂತ್ಯಕಾಲ ಆರಂಭವಾಗಿದೆ ಎಂದು ವಿಶ್ಲೇಷಿಸಲಾಗಿದೆ.

    ದೆಹಲಿಯಲ್ಲಿ ಸದ್ಯ ಆರ್​- ವ್ಯಾಲ್ಯೂ ಅರ್ಥಾತ್​ ರಿಪ್ರೊಡಕ್ಷನ್​ ನಂಬರ್​ ಶೇ.1ಕ್ಕಿಂತ ಕೆಳಗಿದೆ. ರಿಪ್ರೊಡಕ್ಷನ್​ ಅಂದರೆ ಸೋಂಕಿತ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡುವ ಪ್ರಮಾಣ. ಕರೊನಾ ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಈ ಸಂಖ್ಯೆ ಇಷ್ಟೊಂದು ಕಡಿಮೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ಅಂದರೆ, ಮೊದಲೆಲ್ಲ ಹೊಸ ಪ್ರಕರಣ ಪತ್ತೆಯಾದಾಗ ಅವರಿಂದ ಹತ್ತಾರು ಜನರಿಗೆ ಹಬ್ಬುತ್ತಿತ್ತು. ಈಗ ಆ ಪ್ರಮಾಣದ ಸರಾಸರಿ ಒಂದು ಅಥವಾ ಅದಕ್ಕಿಂತ ಕಡಿಮೆಯಾಗಿದೆ. ಇಂಥ ಫಲಿತಾಂಶ ಕಂಡು ಬಂದಿದೆ ಎಂದರೆ ಸಮುದಾಯದಲ್ಲಿ ಕರೊನಾ ಇಳಿಮುಖವಾಗುತ್ತಿದೆ ಎಂದೇ ಅರ್ಥ. ದೆಹಲಿಯಲ್ಲಂತೂ ಇದು ಹೆಚ್ಚು ನಿಚ್ಚಳವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

    ದೆಹಲಿಯಲ್ಲಿ ಸದ್ಯ 10,600 ಸಕ್ರಿಯ ಪ್ರಕರಣಗಳಿವೆ. ಸೆಪ್ಟಂಬರ್​ ಮೊದಲ ವಾರದಲ್ಲಿ ಈ ಸಂಖ್ಯೆ 1,000ಕ್ಕಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಅದರಂತೆ, ದೆಹಲಿಯಲ್ಲಿ ಕಳೆದ ತಿಂಗಳು ಸೋಂಕಿತರ ಪ್ರಮಾಣಕ್ಕಿಂತ ಚೇತರಿಕೆ ಕಂಡವರ ಸಂಖ್ಯೆ ಹೆಚ್ಚಾಗಿತ್ತು. ದೆಹಲಿಯಲ್ಲಿ ನಿತ್ಯ ಹೆಚ್ಚು ಪರೀಕ್ಷೆ ನಡೆಸಿ ಸೋಂಕಿತರನ್ನು ಐಸೋಲೇಷನ್​ನಲ್ಲಿ ಇರಿಸಿದ ಪರಿಣಾಮ ಮತ್ತಷ್ಟು ಜನರಿಗೆ ವ್ಯಾಪಿಸುವುದನ್ನು ತಡೆದಂತಾಗಿದೆ. ಇನ್ನು, ಮುಂಬೈನ ಕೊಳೆಗೇರಿ ಧಾರಾವಿಯಲ್ಲೂ ಕೂಡ ಇದು ಯಶಸ್ವಿಯಾಗಿದೆ. ಅಲ್ಲದೇ, ಇಲ್ಲಿನ ಕಾರ್ಯ ವಿಧಾನ ಮಾದರಿ ಎನಿಸಿಕೊಂಡಿದೆ.

    ಇದನ್ನೂ ಓದಿ; ಜಗತ್ತಿನ ಮೊದಲ ಕರೊನಾ ಲಸಿಕೆ ರಷ್ಯಾದಲ್ಲಿ ಸಿದ್ಧ; ಅಕ್ಟೋಬರ್​ನಲ್ಲಿ ಎಲ್ಲರಿಗೂ ಲಭ್ಯ; ಸ್ಪುಟ್ನಿಕ್​ ಯಶಸ್ಸಿಗೆ ಹೋಲಿಕೆ

    ಸದ್ಯ ಆಂಧ್ರಪ್ರದೇಶದಲ್ಲಿ ಆರ್​ ವ್ಯಾಲ್ಯೂ ಅತಿ ಹೆಚ್ಚಾಗಿದ್ದು, ಶೇ.1.48 ಅಂದರೆ ನೂರು ಜನರಿಂದ 148 ಜನರಿಗೆ ಸೋಂಕು ವ್ಯಾಪಿಸುತ್ತಿದೆ. ರಾಷ್ಟ್ರೀಯ ಸರಾಸರಿ ಶೇ.1.6 ಆಗಿದೆ. ಕರ್ನಾಟಕ, ಕೇರಳ, ಬಿಹಾರ, ಪಶ್ಚಿಮ ಬಂಗಾಳ, ಬಿಹಾರ, ಉತ್ತರಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.

    ಆರ್​- ವ್ಯಾಲ್ಯೂ ಲೆಕ್ಕಾಚಾರ ಹಿಂದಿನ ಅಂಕಿ-ಅಂಶಗಳನ್ನು ಆಧರಿಸಿದ್ದೇ ಹೊರತು, ಮುನ್ಸೂಚನೆಯಲ್ಲ. ಕೆಲ ಗ್ರಹಿತ ಅಂಶಗಳ ಆಧಾರದಲ್ಲಿ ಇದನ್ನು ಕಂಡುಕೊಳ್ಳಲಾಗುತ್ತಿದ್ದು, ಕೆಲವೊಮ್ಮೆ ಅಚ್ಚರಿಯ ಫಲಿತಾಂಶಗಳು ಪ್ರಕಟಗೊಳ್ಳಬಹುದು ಎಂಬುದು ಸಂಶೋಧಕರ ಅಭಿಪ್ರಾಯ.

    ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts