More

    ಕರೊನಾ ಚಿಕಿತ್ಸೆಗೆ ಬೆಡ್​ಗಳಿವೆ ; ರೋಗಿಗಳೇ ಇಲ್ಲ; ಒಂದೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಏನಿದು ಬದಲಾವಣೆ?

    ನವದೆಹಲಿ: ಕರ್ನಾಟಕದಲ್ಲಿ ದಿನೇದಿನೆ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಜತೆಗೆ ಚಿಕಿತ್ಸೆಗೆ ಆಸ್ಪತ್ರೆಗೆಗಳಿಗೆ ಅಲೆಯುತ್ತ ಬವಣೆ ಪಡಬೇಕಾಗಿದೆ. ಆದರೆ, ರಾಷ್ಟ್ರ ರಾಜಧಾನಿಯಲ್ಲಿ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ.

    ಈವರೆಗೆ ದೇಶದಲ್ಲೇ ಅತಿ ಹೆಚ್ಚು ವೇಗದಲ್ಲಿ ಕೋವಿಡ್​ ರೋಗಿಗಳ ಸಂಖ್ಯೆ ಏರಿಕೆ ಕಂಡಿದ್ದ ದೆಹಲಿಯಲ್ಲೀಗ ಬೆಡ್​ಗಳಿವೆ; ಚಿಕಿತ್ಸೆ ನೀಡುತ್ತೇವೆ ಎಂದರೆ ಅದಕ್ಕೆ ತಕ್ಕಂತೆ ರೋಗಿಗಳಿಲ್ಲ….!

    ಇದನ್ನೂ ಓದಿ; ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ 

    ಕಳೆದ ಒಂದು ತಿಂಗಳಿಗೆ ಹೋಲಿಸಿದಲ್ಲಿ ದೆಹಲಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿದೆ. ಒಟ್ಟಾರೆ 1,33,310 ಸೋಂಕಿತರಿದ್ದರೆ, ಅವರಲ್ಲಿ ಸಕ್ರಿಯ ಪ್ರಕರಣಗಳು ಕೇವಲ 10,770. ಒಂದು ತಿಂಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಸಕ್ರಿಯ ಪ್ರಕರಣಗಳಿವೆ. ಅಂದರೆ ಚೇತರಿಕೆ ಪ್ರಮಾಣ ಭಾರಿ ಏರಿಕೆ ಕಂಡಿದೆ.

    ಇನ್ನು, ಸರ್ಕಾರಿ ಆಸ್ಪತ್ರೆ ಹೊರತು ಪಡಿಸಿ ವಿವಿಧ ಆಸ್ಪತ್ರೆಗಳಲ್ಲಿ 15,438 ಬೆಡ್​ಗಳಿವೆ. ಇವುಗಳಲ್ಲಿ 2,158 ಐಸಿಯು ಬೆಡ್​ಗಳಾಗಿವೆ. ಇವುಗಳಲ್ಲಿ ಶೇ.33 ಬೆಡ್​ಗಳಲ್ಲಿ ಮಾತ್ರ ರೋಗಿಗಳಿದ್ದಾರೆ.

    ಇದನ್ನೂ ಓದಿ; ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ 

    ಇನ್ನೂ, ಸಮಾಧಾನಕರ ಸಂಖ್ಯೆ ಏನೆಂದರೆ ಕಳೆದ ಒಂದು ತಿಂಗಳ ಅವಧಿಯಲ್ಲಿ ದೆಹಲಿಯಲ್ಲಿ ಹಾಸಿಗೆಗಳ ಸಂಖ್ಯೆ ಶೇ.42ರಷ್ಟು ಹೆಚ್ಚಳವಾಗಿದೆ. ಅಂದರೆ, ಕೋವಿಡ್​ ರೋಗಿಗಳ ಸಂಖ್ಯೆ ಅನಿರೀಕ್ಷಿತವಾಗಿ ಏರಿದರೂ ಚಿಕಿತ್ಸೆಗೆ ಎಲ್ಲ ರೀತಿಯಿಂದಲೂ ಸಿದ್ಧರಿದ್ದೇವೆ ಎಂದೇ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಹೇಳಿದ್ದಾರೆ.

    ಇದಲ್ಲದೇ, ದೆಹಲಿಯಲ್ಲಿ ನಡೆಸಲಾದ ರಕ್ತದ ಮಾದರಿ ಪರೀಕ್ಷೆಯಲ್ಲಿ ಶೇ.23 ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದು ಕಂಡು ಬಂದಿದೆ. ಆಗಸ್ಟ್​ 1ರಿಂದ ಮತ್ತೊಂದು ಸುತ್ತಿನ ರಕ್ತ ಮಾದರಿ ಪರೀಕ್ಷೆ ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ.

    ಮುಂಬೈನಲ್ಲಿ ಮಾಯವಾಗುತ್ತಿದೆ ಕರೊನಾ…! ಮೂರು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕುಸಿತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts