More

    ಮುಂಬೈನಲ್ಲಿ ಮಾಯವಾಗುತ್ತಿದೆ ಕರೊನಾ…! ಮೂರು ತಿಂಗಳ ಬಳಿಕ ದಾಖಲೆ ಪ್ರಮಾಣದಲ್ಲಿ ಕುಸಿತ

    ಮುಂಬೈ: ದೇಶದಲ್ಲಿಯೇ ಅತಿ ಹೆಚ್ಚು ಕೋವಿಡ್​ ಸಂಕಷ್ಟಕ್ಕೊಳಗಾಗಿದ್ದ ಮುಂಬೈ ಜನರಲ್ಲೀಗ ನೆಮ್ಮದಿಯ ನಿಟ್ಟುಸಿರಿಗೆ ಕಾರಣವಾಗುವ ಬೆಳವಣಿಗೆಯೊಂದು ಕಂಡು ಬಂದಿದೆ.

    ಕಳೆದ ನೂರು ದಿನಗಳಲ್ಲಿ ಇದೇ ಮೊದಲ ಬಾರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಹೊಸ ಕರೊನಾ ಸೋಂಕಿನ ಪ್ರಕರಣಗಳು ದೇಶದ ವಾಣಿಜ್ಯ ರಾಜಧಾನಿಯಲ್ಲಿ ಪತ್ತೆಯಾಗಿವೆ. ಸೋಮವಾರ ಇಲ್ಲಿ ಕಂಡು ಬಂದ ಪ್ರಕರಣಗಳ ಸಂಖ್ಯೆ ಕೇವಲ 700ಕ್ಕೆ ಇಳಿದಿದೆ.

    ಮೂರು ತಿಂಗಳಿನಿಂದ ಇಲ್ಲಿ ಪ್ರತಿದಿನವೂ ಇಲ್ಲಿ ಸಾವಿರಗಟ್ಟಲೇ ಪ್ರಕರಣಗಳು ವರದಿಯಾಗುತ್ತಿದ್ದವು. ಒಟ್ಟು 9,000 ಜನರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ 700 ಜನರಷ್ಟೇ ಕರೊನಾ ಪಾಸಿಟಿವ್​ ಆಗಿದ್ದಾರೆ. ಇದಕ್ಕೂ ಹಿಂದಿನ 1,033 ಕೇಸ್​ಗಳಷ್ಟೇ ಕಂಡುಬಂದಿದ್ದವು.

    ಇದನ್ನೂ ಓದಿ; ಕರೊನಾ ಲಸಿಕೆಗೆ ಜಗತ್ತಿನ ಅತಿ ದೊಡ್ಡ ಕ್ಲಿನಿಕಲ್​ ಟ್ರಯಲ್​; 30 ಸಾವಿರ ಜನರ ಮೇಲೆ ಪ್ರಯೋಗ 

    ಇನ್ನೊಂದು ಸಂತೋಷದ ವಿಷಯವೆಂದರೆ ಕೋವಿಡ್​ ರೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ಕಾಲಾವಧಿ ಈಗ 68 ದಿನಕ್ಕೆ ತಲುಪಿದೆ. ಕಳೆದ ಒಂದು ವಾರದಲ್ಲಿ ಕರೊನಾ ಬೆಳವಣಿಗೆ ದರ ಶೇ.1.03ಕ್ಕೆ ಇಳಿಕೆಯಾಗಿದೆ. ರೋಗಿಗಳು ಚೇತರಿಸಿಕೊಳ್ಳುವ ಪ್ರಮಾಣ ಭಾರಿ ಹೆಚ್ಚಾಗಿದ್ದು, ಶೇ.73 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿದ್ದಾರೆ.

    ಸದ್ಯ ಮುಂಬೈನಲ್ಲಿ ಒಟ್ಟಾರೆ 1,10,182 ಸೋಂಕಿತರಿದ್ದು, ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಕೇವಲ 21,812 ಆಗಿದ್ದು, ಉಳಿದ ನಗರಕ್ಕೆ ಹೋಲಿಸಿದಲ್ಲಿ ಇದು ಭಾರಿ ಕಡಿಮೆಯಾಗಿದೆ. ಥಾಣೆಯಲ್ಲಿ 34,471, ಪುಣೆಯಲ್ಲಿ 48,672 ಸಕ್ರಿಯ ಪ್ರಕರಣಗಳಿವೆ.

    ಇದನ್ನೂ ಓದಿ; ಕರೊನಾ ಲಸಿಕೆಯ ಒಂದು ದಿನದ ಉತ್ಪಾದನೆ ಈ ಜನಾಂಗಕ್ಕೆ ಮೀಸಲು? 

    ಏಷ್ಯಾದ ಅತಿ ದೊಡ್ಡ ಕೊಳೆಗೇರಿ ಮುಂಬೈನ ಧಾರಾವಿಯಲ್ಲಿ ಕೇವಲ 9 ಹೊಸ ಪ್ರಕರಣಗಳು ವರದಿಯಾಗಿವೆ. ಇಲ್ಲಿ 98 ಸಕ್ರಿಯ ಪ್ರಕರಣಗಳಿವೆ. ಇಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 2,540 ಆಗಿದೆ.

    ತಮಿಳುನಾಡಿನ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಸಂದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts