ಮುಂಬೈ: ಮೊಬೈಲ್ ಫೋನ್ ಕಳವು ಇತ್ತೀಚೆಗೆ ಸರ್ವೇಸಾಮಾನ್ಯ. ರಸ್ತೆ ಬದಿಯಲ್ಲಿ ಕಾಲ್ ಮಾಡುತ್ತ ಹೋಗುವಾಗ ಕಳ್ಳರು ಮೊಬೈಲ್ಫೋನ್ ಎಗರಿಸಿಕೊಂಡು ಹೋದ ಅನೇಕ ಪ್ರಕರಣಗಳಿವೆ. ಆದರೆ ಇಂಥ ಹಲವು ಪ್ರಕರಣಗಳು ಬಾಲಿವುಡ್ನ ಖ್ಯಾತನಟನ ಮನೆ ಎದುರು ಒಂದೇ ದಿನದಲ್ಲಿ ಸಂಭವಿಸಿವೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನ ಮನೆ 'ಮನ್ನತ್' ಬಳಿ ಒಂದೇ ದಿನದಲ್ಲಿ 30ಕ್ಕೂ ಅಧಿಕ ಮೊಬೈಲ್ ಫೋನ್ಗಳು ಕಳವಾಗಿವೆ. ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಫ್ರೆಷರ್ಸ್ಗೆ ಹೋಲಿಸಿದ್ರೆ ಇನ್ಫೊಸಿಸ್ ಸಿಇಒ ಸಂಬಳ 2,200 ಪಟ್ಟು ಹೆಚ್ಚು!; ಅವರು ಎಷ್ಟು ಗಂಟೆ ಕೆಲಸ ಮಾಡ್ತಾರೆ?
ನಿನ್ನೆ ಅಂದರೆ ನ. 2ರಂದು ಶಾರುಖ್ ಖಾನ್ ಜನ್ಮದಿನವಾಗಿದ್ದು, ಅವರಿಗೆ ಶುಭ ಹಾರೈಸಲು ಅಭಿಮಾನಿಗಳು ಅವರ ಮನೆ ಮನ್ನತ್ ಮುಂದೆ ಜಮಾಯಿಸಿದ್ದರು. ಹೀಗೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದಾಗಿ 'ಮನ್ನತ್' ಮುಂದೆ ದೊಡ್ಡ ಜನಜಂಗುಳಿ ಸೃಷ್ಟಿಯಾಗಿತ್ತು.
ಆ ಜನಸಂದಣಿ ನಡುವೆಯೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಫೋಟೋ-ವಿಡಿಯೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ಅಂಥವರ ಪೈಕಿ ಹಲವರು ಬಳಿಕ ತಮ್ಮ ಮೊಬೈಲ್ ಫೋನ್ಗಳನ್ನು ಕಳೆದುಕೊಂಡಿದ್ದು, ಅತ್ತ ಫೋಟೋ-ವಿಡಿಯೋ ಇಲ್ಲ, ಇತ್ತ ಮೊಬೈಲ್ಫೋನ್ ಕೂಡ ಎಲ್ಲ ಎಂಬ ಫಜೀತಿಗೆ ಒಳಗಾಗಿದ್ದಾರೆ.