ನ್ಯೂಸ್

6,000 ಸಾವಿರ ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಮೆಟಾ!

ನವದೆಹಲಿ: ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಪೋಷಕ ಸಂಸ್ಥೆಯಾದ ಮೆಟಾ ಮತ್ತೊಂದು ಸುತ್ತಿನ ಉದ್ಯೋಗ ಕಡಿತವನ್ನು ಘೋಷಣೆ ಮಾಡಿದೆ.

ಉದ್ಯೋಗ ಕಡಿತ ಪ್ರಕ್ರಿಯೆಯೂ ಮುಂದಿನ ವಾರದಿಂದ ಆರಂಭವಾಗುತ್ತದೆ ಎಂದು ಮೆಟಾ ಸಂಸ್ಥೆಯ ಜಾಗತಿಕ ವ್ಯವಹಾರಗಳ ಅಧ್ಯಕ್ಷ ನಿಕ್​ ಕ್ಲೆಗ್​ ತಿಳಿಸಿದ್ದಾರೆ.

ಉದ್ಯೋಗಿಗಳು ವಜಾ

ಇತ್ತೀಚಿಗೆ ಮೆಟಾ ಸಂಸ್ಥೆಯ ಸಿಇಒ ಮಾರ್ಕ್​ ಜುಕರ್​ಬರ್ಗ್​ ಮೇ ತಿಂಗಳಲ್ಲಿ ಉದ್ಯೋಗ್ ಕಡಿತ ಪ್ರಾರಂಭವಾಗಲಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಈ ಆದೇಶವನ್ನು ಹೊರಡಿಸಲಾಗಿದೆ.

ಸುಮಾರು 6,000 ಸಾವಿರ ಜನರನ್ನು ಉದ್ಯೋಗದಿಂದ ಕಡಿತ ಮಾಡಲಾಗುವುದು ಎಮದು ಸಂಸ್ಥೆಯ ಅಧಿಕೃತ ಸುದ್ದಿ ಮೂಲಗಳು ತಿಳಿಸಿವೆ.

ಶೀಘ್ರದಲ್ಲೇ ನೋಟಿಸ್​

ಕಳೆದ ವರ್ಷ ನವೆಂಬರ್​ನಲ್ಲಿ ಸಂಸ್ಥೆಯೂ 11,000 ಸಾವಿರ, ಮಾರ್ಚ್​ 2023ರಲ್ಲಿ 10,000 ಸಾವಿರ ಉದ್ಯೊಗಗಳನ್ನು ಕಡಿತ ಮಾಡಲಾಗುವುದು ಎಂದು ಸಂಸ್ಥೆ ಹೇಳಿತ್ತು. ಅದರಂತೆ ಏಪ್ರಿಲ್​ ತಿಂಗಳಲ್ಲಿ 4,000ಸಾವಿರ ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಮೆಟಾದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಅಧಿಕಾರಿಗಳು ಶೀಘ್ರದಲ್ಲೇ ನೋಟಿಸ್​ ಕಳುಹಿಸಲಿದ್ದಾರೆ. ಪ್ರಕ್ರಿಯೆ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಯಾವ ತಂಡದ ಮೇಲೆ ಇದು ಪರಿಣಾಮ ಬೀರುತ್ತದೆ ಎಂಬುದರ ಕುರಿತು ತಿಳಿಸಲಿದ್ದಾರೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.