ನವದೆಹಲಿ: ಮಾಸ್ಕ್ ಇಲ್ಲದೆ ಸಂಚರಿಸಿ ಕೋವಿಡ್ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬನನ್ನು ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳಿಬ್ಬರು ತಡೆದು ಪ್ರಶ್ನಿಸಿದ್ದಾರೆ. ಆದರೆ ಆತ ಅವರಿಗೇ ಹೇಗ್ಹೇಗೋ ಪೀಡಿಸಿ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ.
ಮೊಹಮದ್ ಜೈದ್ ಎಂಬ ವ್ಯಕ್ತಿ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಹತ್ತು ವರ್ಷದ ಬಾಲಕನೊಂದಿಗೆ ಬೈಕ್ನಲ್ಲಿ ಮಾಸ್ಕ್ ಧರಿಸದೆ ಬರುತ್ತಿದ್ದ ಈತನನ್ನು ಕರ್ತವ್ಯದ ಮೇಲಿದ್ದ ಈ ಇಬ್ಬರು ಮಹಿಳಾ ಪೊಲೀಸ್ ಕಾನ್ಸ್ಟೆಬಲ್ಗಳು ತಡೆದು ಪ್ರಶ್ನಿಸಿದ್ದಾರೆ. ಅದಾಗ್ಯೂ ಉದ್ಧಟತನ ತೋರಿದ ಈತ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಪುರುಷರೇ ಹೆಚ್ಚು, ಏಕೆ?; ಗೃಹಿಣಿಯರಿಗೆ ಖುಷಿ ಕೊಟ್ಟೀತು ಈ ಅಧ್ಯಯನ ವರದಿ!
ಪುಂಡಾಟಿಕೆ ತೋರುವವರನ್ನು ಹಿಡಿದು ಕ್ರಮ ಜರುಗಿಸಲೆಂದೇ ರೂಪಿಸಲಾಗಿರುವ ಆ್ಯಂಟಿ ರೋಮಿಯೋ ಸ್ಕ್ವಾಡ್ನಲ್ಲಿದ್ದ ಈ ಮಹಿಳಾ ಕಾನ್ಸ್ಟೆಬಲ್ಗಳೇ ಲೈಂಗಿಕ ಕಿರುಕುಳ ಅನುಭವಿಸುವಂಥ ವಿಪರ್ಯಾಸ ಈ ಮೂಲಕ ಸಂಭವಿಸಿದೆ. ಸದ್ಯ ಈತನ ವಿರುದ್ಧ ಅಮ್ರೋಹ ಠಾಣಾ ಪೊಲೀಸರು ಲೈಂಗಿಕ ಕಿರುಕುಳ ಜತೆಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೂ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುರಂತವೆಂದರೆ ಈ ಸಂದರ್ಭದಲ್ಲಿ ಯಾರೂ ಪೊಲೀಸರ ನೆರವಿಗೆ ಬರಲಿಲ್ಲ ಎನ್ನಲಾಗಿದೆ. (ಏಜೆನ್ಸೀಸ್)