ನವದೆಹಲಿ: ಜೀವಕ್ಕೆ ಕಂಟಕ ಬರುವಂಥ ಸಂದರ್ಭ-ಸೂಚನೆಗಳಿದ್ದಾಗ ಮೃತ್ಯುಂಜಯ ಹೋಮ-ಜಪ ಮಾಡಿಸುವುದು ಸಾಮಾನ್ಯ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಈ ಜಾಗದಲ್ಲಿ ಯಾರೂ ಸಾವಿಗೀಡಾಗದಿರಲಿ ಎಂದು ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ್ದಕ್ಕೆ ಆತನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್ಪ್ರೆಸ್ವೇನಲ್ಲಿ ಜು. 1ರಂದು ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು 25 ಮಂದಿ ಸತ್ತು ಸುಟ್ಟು ಕರಕಲಾಗಿದ್ದರು. ಅಲ್ಲದೆ ಕಳೆದ 6 ತಿಂಗಳಲ್ಲಿ ಈ ಪ್ರದೇಶದಲ್ಲಿ 80ಕ್ಕೂ ಅಧಿಕ ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಈ ಹಿನ್ನೆಲೆಯಲ್ಲಿ ಬುಲ್ದಾನದ ನೀಲೇಶ್ ಅಧವ್ ಎಂಬ ವ್ಯಕ್ತಿ ಜುಲೈ 23ರಂದು ಈ ಪ್ರದೇಶದಲ್ಲಿ ಮೃತ್ಯುಂಜಯ ಯಂತ್ರ ಅಳವಡಿಸಿ, ಜನರನ್ನು ಸೇರಿಸಿ ಮೃತ್ಯುಂಜಯ ಜಪ ಮಾಡಿಸಿದ್ದ. ಇದನ್ನು ವಿರೋಧಿಸಿ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಹಮಿದ್ ದಾಭೋಲ್ಕರ್ ಎಂಬಾತ ಪೊಲೀಸರಿಗೆ ದೂರು ನೀಡಿದ್ದ. ಆದ್ದರಿಂದ ಮಹಾರಾಷ್ಟ್ರ ಪೊಲೀಸರು ಅಧವ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಕ್ಕಳನ್ನು ಡೌನ್ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!
ಮೃತ್ಯುಂಜಯ ಯಂತ್ರ ಅಳವಡಿಸಿದ ಜಾಗದಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಇನ್ನು ಅಪಘಾತ ಸಂಭವಿಸುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಿರುವ ಹಿನ್ನೆಲೆಯಲ್ಲಿ ಅಧವ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.