ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ವಿುಕ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮೂರು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವ ನಡೆದಿದೆ. ಈ ಮೂರೇ ದಿನಗಳಲ್ಲಿ ದೇವಸ್ಥಾನಕ್ಕೆ ಭರ್ಜರಿ ಎಂಬಂಥ ಆದಾಯ ಬಂದಿದೆ.
ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಮಹದೇಶ್ವರ ಬೆಟ್ಟದಲ್ಲಿ ಅ.12ರಿಂದ 14ರವರೆಗೆ ಮಹಾಲಯ ಅಮಾವಾಸ್ಯೆ ಜಾತ್ರೆ ಜರುಗಿದ್ದು, ಲಕ್ಷಕ್ಕೂ ಹೆಚ್ಚು ಭಕ್ತರು ಬೇಟಿ ನೀಡಿದ್ದರು.
ಈ ಮೂರು ದಿನಗಳ ಅವಧಿಯಲ್ಲಿ ಹುಲಿವಾಹನ, ರುದ್ರಾಕ್ಷಿ ವಾಹನ, ಚಿನ್ನ ಹಾಗೂ ಬೆಳ್ಳಿ ತೇರಿನ ಉತ್ಸವಗಳು, ಪಂಚಕಳಸ ಸಮೇತ ನವರತ್ನ ಕಿರೀಟ ಧಾರಣೆ, ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂ ಪಂಚಾಮೃತ ಅಭಿಷೇಕ ಇನ್ನಿತರ ಸೇವೆಗಳು ಜರುಗಿವೆ. ಮಾತ್ರವಲ್ಲ ಒಂದು ಕೋಟಿಗೂ ಅಧಿಕ ಆದಾಯ ಬಂದಿದೆ.
ಇದನ್ನೂ ಓದಿ: ‘ದೇಶದ ಕುರಿತ ಮೈಂಡ್ಸೆಟ್ ಬದಲಿಸುತ್ತೇನೆ’ ಅಂತ ಹೊರಟ ಮಿಸ್ ಯೂನಿವರ್ಸ್ ಸ್ಪರ್ಧಿಗೆ ಆರಂಭದಲ್ಲೇ ಹಿನ್ನಡೆ!
ಲಾಡು, ತೀರ್ಥ, ಬ್ಯಾಗ್, ಮಿಶ್ರ ಪ್ರಸಾದ, ಕಲ್ಲು ಸಕ್ಕರೆ, ಬ್ಯಾಗ್ ಮಾರಾಟ, ಅಕ್ಕಿಸೇವೆ, ವಿಶೇಷ ಪ್ರವೇಶ ಶುಲ್ಕ, ಪಾರ್ಕಿಂಗ್ ಶುಲ್ಕ, ಪುದುವಟ್ಟು ಠೇವಣಿ ಹಾಗೂ ಇನ್ನಿತರ ಸೇವಾ ಮೂಲಗಳಿಂದ 1,06,26,716 ರೂ. ಸಂಗ್ರಹವಾಗಿದೆ.
ಇದರಲ್ಲಿ ಉತ್ಸವಾದಿಗಳಿಂದ 40,94,624 ರೂ., ಸೇವೆಗಳಿಂದ 3,85,300 ರೂ., ಲಾಡು ಮಾರಾಟದಿಂದ 32,75,395 ರೂ., ದೇವರ ದರ್ಶನದ ವಿಶೇಷ ಪ್ರವೇಶದಿಂದ 15,11,500 ರೂ., ಮಿಶ್ರ ಪ್ರಸಾದದಿಂದ 6,33,250 ರೂ., ಅಕ್ಕಿ ಸೇವೆಯಿಂದ 1,06,650 ರೂ. ಹಾಗೂ ತೀರ್ಥ ಮಾರಾಟದಿಂದ 1,04,370 ರೂ. ಸಂಗ್ರಹವಾಗಿದೆ.