ಬೆಂಗಳೂರು: ಮೋಹಕ ತಾರೆ ರಮ್ಯಾ, ಕೆಲ ಸಮಯದ ಹಿಂದೆ ದಪ್ಪ ಆಗಿದ್ದಕ್ಕೆ ಟ್ರೋಲ್ ಆಗಿದ್ದರು. ಆದರೆ ಇದೀಗ “ಪದ್ಮಾವತಿ” ಮತ್ತೊಮ್ಮೆ ಸ್ಲಿಮ್ ಆ್ಯಂಡ್ ಫಿಟ್ ಆಗಿ ಕಾಣಿಸಿಕೊಂಡಿದ್ದು, ಕನ್ನಡಿ ಮುಂದೆ ಡ್ಯಾನ್ಸ್ ಮಾಡಿ ಲೈಕ್‍ಗಳ ಸುರಿಮಳೆಯನ್ನೇ ಪಡೆದಿದ್ದಾರೆ.
ಕನ್ನಡಿ ಮುಂದೆ ಮೋಹಕ ತಾರೆ ರಮ್ಯಾ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿದ್ದು, ಅವರ ಫಿಟ್ ನೆಸ್ ಕಂಡು ಅಭಿಮಾನಿಗಳು ಹೆಬ್ಬೇರಿಸಿದ್ದಾರೆ. ಕೈಯಲ್ಲೇ ಮೊಬೈಲ್ ಹಿಡಿದುಕೊಂಡು ಕನ್ನಡಿ ಮುಂದೆ ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ರಮ್ಯಾರ ಡ್ಯಾನ್ಸ್ ಸಖತ್ ವೈರಲ್ ಆಗಿದೆ.
ಈ ಹಿಂದೆ ರಮ್ಯಾ, ದಶಕಗಳ ಕಾಲ ಸ್ಯಾಂಡಲ್ವುಡ್‍ನಲ್ಲಿ ಮಿಂಚಿದ್ದರು. ಇದೀಗ ಅವರು ಕಂಬ್ಯಾಕ್ ಮಾಡಿದ್ದಾರೆ ಎಂದೇ ಹೇಳಬಹುದು. ಸದ್ಯ ಹಾಸ್ಟೆಲ್ ಹುಡುಗರು, ಉತ್ತರಾಕಂಡ ಚಿತ್ರದಲ್ಲಿ ಆ್ಯಕ್ಟ್ ಮಾಡುತ್ತಿದ್ದು ಚಂದನವನದಲ್ಲಿ ಮಿಂಚಲು ಮತ್ತೊಮ್ಮೆ ರೆಡಿ ಆಗಿ ಬಂದಿದ್ದಾರೆ ಎಂದೇ ಹೇಳಬಹುದು.
ಅವರು ಮಾಡಿರುವ ಡ್ಯಾನ್ಸ್ ನೋಡಿದರೆ, ಮತ್ತೆ ಹಿಂದಿದ್ದ ಉತ್ಸಾದಲ್ಲೇ, ತಮ್ಮ ಎಂದಿನ ಚಾರ್ಮ್‍ನೊಂದಿಗೆ, ಅಭಿಮಾನಿಗಳ ಮನಸ್ಸನ್ನು ಗೆಲ್ಲೋಕೆ ರಮ್ಯಾ ಸಜ್ಜಾಗಿದ್ದಾರೆ ಎಂದೇ ಹೇಳಬಹುದು.