More

    ಹೈನುಗಾರರೇ ಎಚ್ಚರ! ರಾಜ್ಯಕ್ಕೆ ಲಗ್ಗೆ ಇಟ್ಟಿದೆ ಮಾರಕ ಕಾಯಿಲೆ; ನಿಮ್ಮ ಹಸುವಿಗೂ ಈ ರೋಗ ಲಕ್ಷಣ ಇದೆಯಾ?

    ಬೆಂಗಳೂರು: ನೀವು ಹೈನುಗಾರಿಕೆ ಮಾಡುತ್ತಿರುವವರಾದರೆ ಈ ಸುದ್ದಿಯನ್ನು ಓದಲೇಬೇಕು. ತಮಿಳುನಾಡು ಭಾಗದಲ್ಲಿ ವ್ಯಾಪಕವಾಗಿ ಕಾಣಿಸಿಕೊಂಡಿದ್ದ ಒಟೈಟಿಸ್ ಎಂಬ ಮಾರಕ ಕಾಯಿಲೆ ಇದೀಗ ರಾಜ್ಯಕ್ಕೂ ಕಾಲಿಟ್ಟಿದೆ.

    ಒಟೈಟಿಸ್‍ ಕಾಯಿಲೆ ಇದೀಗ ಬೆಂಗಳೂರು ಸಮೀಪದ ಆನೆಕಲ್ ಭಾಗದಲ್ಲಿನ ಹೈನುಗಾರರಿಗೆ ತಲೆನೋವಾಗಿ ಪರಿಣಮಿಸಿದೆ. ಆನೇಕಲ್ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಈ ಕಾಯಿಲೆ ಹಬ್ಬಿದ್ದು. ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ,ದಿನ್ನೂರು ಸೇರಿ ಹಲವೆಡೆ ರಾಸುಗಳು ಸಾವಿಗೀಡಾಗಿವೆ.

    ಈ ಕಾಯಿಲೆ ಬಂದಲ್ಲಿ ಹಸು ಸಾವಿಗೀಡಾಗುವ ಸಾಧ್ಯತೆಯೇ ಹೆಚ್ಚಿರುತ್ತದೆ. ಹಸು ಬಚಾವಾದರೂ ಬಹಳ ಕಷ್ಟದಲ್ಲಿ ಎನ್ನಲಾಗುತ್ತದೆ.

    ರೋಗ ಲಕ್ಷಣಗಳೇನು?

    ಪ್ರಾರಂಭದಲ್ಲಿ ಹಸುವಿನ ಕಿವಿ ಸೋರಲು ಪ್ರಾರಂಭ ಆಗುತ್ತದೆ. ಬಳಿಕ ಅದಕ್ಕೆ ತಲೆ‌ ನೋವು ಕಾಣಿಸಿಕೊಂಡು ಸೊರಗುತ್ತದೆ. ಇದಾದ ಮೇಲೆ ಮೂಗು, ಬಾಯಿ, ಕಿವಿ ಕೂಡ ಸೋರಲು ಪ್ರಾರಂಭ ಆಗುತ್ತದೆ. ಕಳೆದ ವರ್ಷ ಇದೇ ವೈರಲ್ ಕಾಯಿಲೆಯನ್ನು ವಿಜ್ಞಾನಿಗಳು MCF ಎಂದು ಕರೆದಿದ್ದರು. ಈ ಕಾಯಿಲೆಗೆ ನಿರ್ದಿಷ್ಟ ಔಷದ ಇಲ್ಲದೇ ರೈತರು ಪರದಾಡುತ್ತಿರುವುದು ಮಾತ್ರ ಸುಳ್ಳಲ್ಲ.

    ಕಾಯಿಲೆ ಕಾಣಿಕೊಂಡಾಗ ರೈತರು ಏನು‌ಮಾಡಬೇಕು?

    ಮೇಲೆ ಹೇಳಿರುವ ರೋಗ ಲಕ್ಷಣಗಳು ನಿಮ್ಮ ಹಸುವಿನಲ್ಲೂ ಕಾಣಿಸಿಕೊಂಡರೆ ಏನು ಮಾಡಬೇಕು? ರೈತರು ಎಚ್ಚರ ವಹಿಸಬೇಕಾದ ಕ್ರಮಗಳು ಹೀಗಿವೆ:

    ಪಶು ವೈದ್ಯರು ಹೇಳುವಂತೆ, ಕಾಯಿಲೆ ಕಾಣಿಸಿಕೊಂಡಾಗ ಹಸುವನ್ನು ಪ್ರತ್ಯೇಕವಾಗಿ ಕಟ್ಟಿಹಾಕಬೇಕು.ವೈದ್ಯರಿಂದ ನಿರಂತರ ಚಿಕಿತ್ಸೆ ನೀಡಿಸಬೇಕು. ಹಸುವಿಗೆ ವೈದ್ಯರಿಂದ ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಎಂಬ ಇಂಜೆಕ್ಷನ್ ಕೊಡಿಸಬೇಕು.

    ಇನ್ನು ಕಾಯಿಲೆ ಇರುವ ಹಸು ತಿಂದ ಆಹಾರ ಯಾವುದೇ ಕಾರಣಕ್ಕೂ ಇನ್ನೊಂದು ಹಸುವಿಗೆ ನೀಡಬಾರದು. ಇದರಿಂದ ಒಂದು ಹಸುವಿನಿಂದ ಇನ್ನೊಂದು ಹಸುವಿಗೆ ರೋಗ ಹರಡುವುದನ್ನು ತಪ್ಪಿಸಬಹುದು (ಏಜೆನ್ಸೀಸ್)

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts