More

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ನವದೆಹಲಿ: ಚಹಾ ಬೇಕಾ ಎಂದು ಕೇಳಿದರೆ, ಬಹುಶಃ ಯಾರೂ ಬೇಡ ಎನ್ನುವುದಿಲ್ಲ. ಅನೇಕ ಜನರಿಗೆ ಚಹಾದ ಗೀಳು ಎಷ್ಟರ ಮಟ್ಟಿಗೆ ಅಂಟಿಕೊಂಡಿದೆ ಎಂದರೆ. ಅತಿಥಿಗಳು ಮನೆಗೆ ಬಂದರೆ ನಾವು ಸತ್ಕಾರ ಮಾಡಲು ಚಹಾ ಅಥವಾ ಕಾಫಿ ನೀಡುವುದು ಸರ್ವೇ ಸಾಮಾನ್ಯ ಆಗಿದೆ. ಚಹಾ ಜತೆಗೆ ತಿನ್ನಲೂ ಏನಾದರು ನೀಡುತ್ತೇವೆ. ಆದರೆ ಚಹಾದೊಂದಿಗೆ ಕೆಲ ಆರೋಗ್ಯಕರ ಆಹಾರಗಳನ್ನು ತಿನ್ನುವುದು ಕೂಡ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಯಾವುವು ಆ ಆಹಾರ ಪದಾರ್ಥಗಳು? ಇಲ್ಲಿದೆ ಸಂಪೂರ್ಣ ಮಾಹಿತಿ…

    ಚಹಾ ಮತ್ತು ಡ್ರೈ ಫ್ರೂಟ್ಸ್!

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಹೌದು. ಚಹಾ ಹಾಗೂ ಡ್ರೈ ಫ್ರೂಟ್ಸ್ ಜತೆಗೆ ಸೇವಿಸುವುದರಿಂದ ಕೆಲ ಆರೋಗ್ಯ ಸಮಸ್ಯೆ ಎದುರಿಸದೇ ಹೋದರೂ, ತಿಂದ ಆಹಾರ ವ್ಯರ್ಥವಾಗುತ್ತದೆ! ಹೇಗೆ? ಇಲ್ಲಿದೆ ವಿವರಣೆ: ಹಾಲು ಕ್ಯಾಲ್ಶಿಯಂ ಭರಿತ ಆಹಾರವಾಗಿದ್ದರೆ, ಡ್ರೈ ಫ್ರೂಟ್ಸ್ ಕಬ್ಬಿಣಾಂಶ ತುಂಬಿದ ಆಹಾರ ಪದಾರ್ಥ. ಇವೆರಡನ್ನೂ ಒಟ್ಟಿಗೆ ಸೇವಿಸಿದರೆ ಕ್ಯಾಲ್ಶಿಯಂ ಹಾಗೂ ಕಬ್ಬಿಣ, ಎರೆಡನ್ನೂ ಶರೀರ ಹೀರಿಕೊಳ್ಳದೇ ಹೋಗಬಹುದು. ಇನ್ನು ಬಹುತೇಕ ಎಲ್ಲಾ ಡ್ರೈ ಫ್ರೂಟ್ಸ್ ವಿಟಮಿನ್ ಸಿ ಅಂಶವನ್ನು ಹೊಂದಿರುತ್ತವೆ. ಹೀಗಾಗಿ ಚಹಾ ಜತೆ ಒಣ ಹಣ್ಣುಗಳನ್ನು ತಿನ್ನುವುದು ಎಂದರೆ ಹಾಲನ್ನು ಕುಡಿದು ಬಾಯಲ್ಲಿ ಹುಳಿ ಹಿಂಡುವುಕ್ಕೆ ಸಮಾನ…

    ಹಾಲು ಮತ್ತು ಹಸಿ ತರಕಾರಿ ಹಾಗೂ ಸೊಪ್ಪಿನ ಸ್ಯಾಲಡ್

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಚಹಾ ಮತ್ತು ಕಬ್ಬಿಣಾಂಶ ಭರಿತ ತರಕಾರಿಗಳು: ಕಬ್ಬಿಣಾಂಶ ಭರಿತ ಆಹಾರಗಳನ್ನು ಚಹಾದೊಂದಿಗೆ ತಿನ್ನಬಾರದು. ಏಕೆಂದರೆ ಚಹಾವು ಟ್ಯಾನಿನ್ ಗಳು ಮತ್ತು ಆಕ್ಸಲೇಟ್ ಎಂಬ ಪದಾರ್ಥಗಳನ್ನು ಹೊಂದಿರುತ್ತದೆ. ಇದು ಕಬ್ಬಿಣಾಂಶ ಭರಿತ ಆಹಾರಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ, ಹಸಿರು ಎಲೆಗಳ ತರಕಾರಿಗಳು, ಧಾನ್ಯಗಳು, ಬೇಳೆಕಾಳುಗಳಂತಹ ಕಬ್ಬಿಣಾಂಶ ಭರಿತ ಆಹಾರಗಳನ್ನು ಚಹಾದೊಂದಿಗೆ ತಿನ್ನುವುದನ್ನು ತಪ್ಪಿಸಿ.

    ಲೆಮನ್ ಟೀ

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಅನೇಕ ಜನರು ನಿಂಬೆ ಬೆರೆಸಿದ ಚಹಾವನ್ನು ತೂಕ ಕಳೆದುಕೊಳ್ಳಲು ಸಹಾಯ ಆಗುತ್ತದೆ ಎಂದು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಲೆಮನ್ ಟೀ, ಕುಡಿಯುವುದರಿಂದ ಶರೀರದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಇಉ ದೇಹದಲ್ಲಿ ಉರಿಯೂತಕ್ಕೆ ಕಾರಣವಾಗಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಂಬೆ ಚಹಾವನ್ನು ಕುಡಿಯುವುದರಿಂದ ಆಸಿಡ್ ರಿಫ್ಲಕ್ಸ್ ಮತ್ತು ಎದೆಯುರಿ ಸಮಸ್ಯೆಗಳಿಗೆ ಕಾರಣವಾಗಬಹುದು.

     

    ಚಹಾ ಮತ್ತು ಕಡಲೆ ಹಿಟ್ಟಿನಿಂದ ಮಾಡಿದ ತಿಂಡಿ:

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಅನೇಕ ಜನರು ಚಹಾದೊಂದಿಗೆ ತರಕಾರಿಗಳು ಅಥವಾ ಸಮೋಸಾಗಳನ್ನು ತಿನ್ನುತ್ತಾರೆ. ಆದರೆ, ಚಹಾದೊಂದಿಗೆ ಕಡಲೆ ಹಿಟ್ಟಿನಿಂದ ಮಾಡಿದ ತಿನಿಸನ್ನು ತಿನ್ನುವುದು ಜೀರ್ಣಾಂಗ ವ್ಯೂಹಕ್ಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ಪೋಷಕಾಂಶಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ನಂಬುತ್ತಾರೆ. ಆದ್ದರಿಂದ, ಕಡಲೆ ಹಿಟ್ಟಿನಿಂದ ತಯಾರಿಸಿದ ಆಹಾರವನ್ನು ಚಹಾದೊಂದಿಗೆ ಎಂದಿಗೂ ತಿನ್ನಬೇಡಿ.

    ಬಿಸಿ ಬಿಸಿ ಚಹಾದ ನಂತರ ತಂಪು ಪಾನೀಯ ಕುಡಿಯುವುದು…

    ಚಹಾ ಜತೆ ಈ ಆಹಾರಗಳ ಸೇವನೆ ಅನಾರೋಗ್ಯಕ್ಕೆ ದಾರಿ ಆಗಬಹುದು..!

    ಬಿಸಿ ಚಹಾದೊಂದಿಗೆ ಅಥವಾ ನಂತರ ಐಸ್‍ ಕ್ರೀಂ ಅಥವಾ ತಣ್ಣನೆಯ ಜ್ಯೂಸ್‍, ಯಾವುದನ್ನೂ ಸೇವಿಸಬೇಡಿ. ಹಾಗೆ ಮಾಡುವುದರಿಂದ ಜೀರ್ಣಾಂಗ ವ್ಯೂಹದಲ್ಲಿ ಸಮಸ್ಯೆಗಳು ಉಂಟಾಗಬಹುದು. ವಿಭಿನ್ನ ತಾಪಮಾನದ ಆಹಾರವನ್ನು ಒಟ್ಟಿಗೆ ತಿನ್ನುವುದು ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಕೆಲವರಲ್ಲಿ ಇದು ವಾಕರಿಕೆಗೂ ಕಾರಣವಾಗಬಹುದು. ಬಿಸಿ ಚಹಾ ಕುಡಿದ ನಂತರ ಕನಿಷ್ಠ 30 ನಿಮಿಷಗಳ ಕಾಲ ತಣ್ಣಗಿನ ಆಹಾರ ಸೇವಿಸದಿರಿ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts