More

    ಜೈಲಲ್ಲೂ ಹುಟ್ಟುತ್ತಾ ಪ್ರೇಮ್ ಕಹಾನಿ? ಪರೋಲ್‍ ಮೇಲೆ ಹೊರ ಬಂದು ಮದುವೆ!

    ಪಶ್ಚಿಮಬಂಗಾಳ: ಅಬ್ದುಲ್ ಹಸೀಮ್ ಅಸ್ಸಾಂ ಮೂಲದವರಾಗಿದ್ದು, ಶಹನಾರಾ ಖಾತುನ್ ಪಶ್ಚಿಮ ಬಂಗಾಳದವರು. ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಇಬ್ಬರನ್ನು ಪಶ್ಚಿಮ ಬಂಗಾಳದ ಬರ್ಧಮಾನ್ ಸೆಂಟ್ರಲ್ ಕರೆಕ್ಷನಲ್ ಹೋಮ್ನಲ್ಲಿ ಬಂಧಿಸಿ ಇಡಲಾಗಿತ್ತು. ಈ ಹಿಂದೆ ಇಬ್ಬರಿಗೂ ಪರಸ್ಪರ ಪರಿಚಯ ಇರಲಿಲ್ಲ.

    ಪೂರ್ವ ಬರ್ಧಮಾನ್ ಜಿಲ್ಲೆಯ ಬರ್ಧಮಾನ್ ಜಿಲ್ಲಾ ಸುಧಾರಣಾ ಕೇಂದ್ರದಲ್ಲಿ ಅಬ್ದುಲ್ ಹಸೀಮ್ ಮತ್ತು ಶಹನಾರಾ ಖಾತುನ್ ಅವರ ಪ್ರೇಮ ಕಥೆ ಪ್ರಾರಂಭವಾಗಿತ್ತು. ಹಸೀಂಗೆ 8 ವರ್ಷ ಮತ್ತು ಶಹನಾರಾಗೆ 6 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಇಬ್ಬರನ್ನೂ ಒಂದೇ ಆವರಣ ಉಳ್ಳ ಸುಧಾರಣಾ ಗೃಹದಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ಇಬ್ಬರೂ ಪರಸ್ಪರ ಪರಿಚಿತರಾಗಿದ್ದು ನಂತರ ಅವರ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹವು ಪ್ರೀತಿಯಾಗಿ ಬದಲಾಗಿದೆ.

    ಶೀಘ್ರದಲ್ಲೇ, ಅವರು ತಮ್ಮ ಪ್ರೀತಿಯ ಬಗ್ಗೆ ಮನೆಯಲ್ಲಿ ತಿಳಿಸಿದ್ದು ನಂತರ ಮದುವೆಯಾಗಲು ನಿರ್ಧರಿಸಿದ್ದಾರೆ. ಬುಧವಾರ ಅಬ್ದುಲ್ ಹಸೀಂ ಮತ್ತು ಶಹನಾರಾ ಖತುನ್ ಅವರನ್ನು ಐದು ದಿನಗಳ ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಅವರು ಪೂರ್ವ ಬರ್ಧಮಾನ್‍ನ ಮೊಂಟೇಶ್ವರ ಬ್ಲಾಕ್‍ನ ಕುಸುಮ್ಗ್ರಾಮ್ ನಲ್ಲಿ ಮುಸ್ಲಿಂ ಸಂಪ್ರದಾಯದ ಪ್ರಕಾರ ವಿವಾಹವಾದರು. ಪೆರೋಲ್ ಮುಗಿದ ನಂತರ ಮತ್ತೇ ಕಾರಾಗೃಹಕ್ಕೆ ಮರಳಬೇಕಾಗಿರುವುದರಿಂದ ದಂಪತಿಗಳಿಗೆ ಜತೆಗಿರಲು ಕಡಿಮೆ ಸಮಯವಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts