More

    PHD ಪ್ರವೇಶ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆಪತ್ರಿಕೆಯೇ ಲೀಕ್ ಆಗಿರಬಹುದು ಎಂದು ವಿದ್ಯಾರ್ಥಿಗಳ ಆರೋಪ!

    ಬೆಂಗಳೂರು: ಸರ್ಕಾರಿ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಲ್ಲಿ ನಾನಾ ರೀತಿಯಲ್ಲಿ ಅಕ್ರಮ ನಡೆಯುವುದನ್ನು ನಾವು ಈಗಾಗಲೇ ನೋಡಿದ್ದೇವೆ. ಅದೇ ರೀತಿ ಇದೀಗ PHD ಪ್ರವೇಶ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿ ವಿವಿ ಕುಲಪತಿಗೆ ಪತ್ರ ಬರೆದಿದ್ದಾರೆ.

    ಇದನ್ನೂ ಓದಿ: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ, ಪ್ರಥಮ ರ‍್ಯಾಂಕ್ ಪಡೆದಿದ್ದವಳ ಬಂಧನ.

    ನಿನ್ನೆ ಬೆಂಗಳೂರು ವಿಶ್ವವಿದ್ಯಾನಿಯಲ್ಲಿ PHD ಪ್ರವೇಶ ಪರೀಕ್ಷೆ ನಡೆದಿದ್ದು ಈ ಒಂದು‌ ಪರೀಕ್ಷೆಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿವೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ PHD ವಿದ್ಯಾರ್ಥಿಗಳು ಬೆಂಗಳೂರು ವಿವಿ ಕುಲಪತಿಗಳಿಗೆ ದೂರನ್ನೂ ನೀಡಿದ್ದಾರೆ.

    ದೂರಿನಲ್ಲಿ ಏನಿದೆ?

    ವಿದ್ಯಾರ್ಥಿಗಳು ಕುಲಪತಿಗಳಿಗೆ ನೀಡಿರುವ ದೂರಿನಲ್ಲಿ “ಅನೇಕರು ಮೊಬೈಲ್ ನೋಡಿಕೊಂಡು ಪರೀಕ್ಷೆ ಬರೆದಿದ್ದಾರೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿದೆ. ಪ್ರಶ್ನೆ ಪತ್ರಿಕೆಯನ್ನು ಸೀಲ್ ಮಾಡದೇ ಇದ್ದ ಓಪನ್ ಪ್ಯಾಕೆಟ್‍ನಿಂದ ನೇರವಾಗಿ ತೆಗೆದು ಕೊಟ್ಟಿದ್ದಾರೆ. ಇದರಿಂದಾಗಿ ಪ್ರಶ್ನೆಪತ್ರಿಕೆ ಲೀಕ್‍ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕಲು ಆಗುವುದಿಲ್ಲ. ಇದು ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

    ಇದನ್ನೂ ಓದಿ: ಜೈಲು ಸೇರಿದ ಕಿಂಗ್​ಪಿನ್ ದಿವ್ಯಾ ಹಾಗರಗಿ: ಪಿಎಸ್​ಐ ನೇಮಕಾತಿ ಪರೀಕ್ಷೆ ಅಕ್ರಮ, ಡೀಲ್ ಗಿರಾಕಿಗಳ ವಿಚಾರಣೆ ಮುಂದುವರಿಕೆ

    ಈ PHD ಪ್ರವೇಶ ಪರೀಕ್ಷೆಯಲ್ಲಿ ಒಂದು ಪದವಿ ಪರೀಕ್ಷೆಯಲ್ಲಿ ಅನುಸರಿಸುವ ಕನಿಷ್ಠ ನಿಯಮಗಳನ್ನೂ ಇಲ್ಲಿ ಪಾಲಿಸಲಿಲ್ಲ. ಯಾರು ಯಾವಾಗ ಬೇಕಿದ್ದರೂ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು. ಕೆಲವರಂತೂ ಮೊಬೈಲ್ ನಲ್ಲಿ ನೋಡಿ ಬರೆಯುತ್ತಿದ್ದರು. ಕೆಲವರು ಅಕ್ಕ ಪಕ್ಕದವರ ಬಳಿ ಚರ್ಚಿಸಿ ಬರೆಯುತ್ತಿದ್ದರು. ಇದಕ್ಕೆ ಸೂಕ್ತ ಸಾಕ್ಷಿ ಸಿಸಿ ಟಿವಿ ಕ್ಯಾಮೆರಾ ಅದು ಕೂಡ ಸರಿಯಾಗಿ ಕಾರ್ಯ ನಿರ್ವಹಿಸುತ್ತಿತ್ತೋ ಒಂದೂ ಗೊತ್ತಿಲ್ಲ. ಒಬ್ಬೇ ಒಬ್ಬ ಸ್ಕ್ವಾರ್ಡ್ ಕೂಡ ಭೇಟಿ ನೀಡಲಿಲ್ಲ. 

    ಇದನ್ನೂ ಓದಿ: ಎಲ್ಲರ ಮಂಪರು ಪರೀಕ್ಷೆ ನಡೆಯಲಿ: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕುರಿತು ನಿವೃತ್ತ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ

    ಈ ಹಿಂದೆ ನಡೆದಿರುವ ಪಿಎಚ್ಡಿ ಪರೀಕ್ಷೆಗಳಲ್ಲಿ ಅನುಸರಿಸಿದ ಯಾವುದೇ ನಿಯಮಗಳು ಇಲ್ಲಿ ಇರಲಿಲ್ಲ” ಎಂದು ಆರೋಪಿಸಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆಯನ್ನು ನಡೆಸುವಂತೆ ಮನವಿ ಮಾಡುತ್ತಿದ್ದು, ಬೇಡಿಕೆ ಈಡೇರದಿದ್ದ ಪಕ್ಷದಲ್ಲಿ ಹೋರಾಟದ ಎಚ್ಚರಿಕೆಯನ್ನು ವಿದ್ಯಾರ್ಥಿಗಳು ನೀಡಿದ್ದಾರೆ. 

    PHD ಪ್ರವೇಶ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆಪತ್ರಿಕೆಯೇ ಲೀಕ್ ಆಗಿರಬಹುದು ಎಂದು ವಿದ್ಯಾರ್ಥಿಗಳ ಆರೋಪ! PHD ಪ್ರವೇಶ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆಪತ್ರಿಕೆಯೇ ಲೀಕ್ ಆಗಿರಬಹುದು ಎಂದು ವಿದ್ಯಾರ್ಥಿಗಳ ಆರೋಪ! PHD ಪ್ರವೇಶ ಪರೀಕ್ಷೆಯಲ್ಲೂ ನಡೆಯಿತಾ ಅಕ್ರಮ? ಪ್ರಶ್ನೆಪತ್ರಿಕೆಯೇ ಲೀಕ್ ಆಗಿರಬಹುದು ಎಂದು ವಿದ್ಯಾರ್ಥಿಗಳ ಆರೋಪ!

    ನಗರವನ್ನು ಸಿಗರೇಟ್ ಮುಕ್ತವಾಗಿಸಲು ಹಾಂಕಾಂಗ್ ಜನ ಮಾಡುತ್ತಿರುವುದೇನು? ಈ ಅಸ್ತ್ರದ ಮುಂದೆ ಎಲ್ಲಾ ಕಾನೂನುಗಳೂ ಒಂದೆ ಹೆಜ್ಜೆ ಹಿಂದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts