More

    ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ, ಪ್ರಥಮ ರ‍್ಯಾಂಕ್ ಪಡೆದಿದ್ದವಳ ಬಂಧನ


    ಕಲಬುರಗಿ: ಪಿಎಸ್‌ಐ ನೇಮಕ ಪರೀಕ್ಷೆ ಅಕ್ರಮ ಹಗರಣದಲ್ಲಿ ಓಎಂಆರ್ ಉತ್ತರ ಪತ್ರಿಕೆಯಲ್ಲಿ ತಿದ್ದುಪಡಿ ಮಾಡಿಸಿ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದು ರದ್ದುಗೊಂಡಿರುವ ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿಯ ರಚನಾ ಹನುಮಂತ (೨೫) ಎಂಬುವರನ್ನು ಸಿಐಡಿ ಅಧಿಕಾರಿಗಳು ಶನಿವಾರ ಬಂಧಿಸಿz್ದÁರೆ.
    ಪಿಎಸ್‌ಐ ನೇಮಕದಲ್ಲಿ ಅಕ್ರಮ ವಿಷಯದೊಂದಿಗೆ ಬೆಂಗಳೂರಿನಲ್ಲಿ ಅಭ್ಯರ್ಥಿಗಳು ಕೈಗೊಂಡಿದ್ದ ಹೋರಾಟದಲ್ಲಿ ರಚನಾ ಇತರರು ಮುಂಚೂಣಿಯಲ್ಲಿದ್ದರು. ಇವರ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿತ್ತು. ಹಗರಣದಲ್ಲಿ ಅವರ ಪಾತ್ರವೂ ಇದೆ ಎಂಬುದು ಬೆಳಕಿಗೆ ಬಂದು ಕೇಸ್ ಆಗುತ್ತಲೇ ಮೂರೂವರೆ ತಿಂಗಳಿAದ ಸಿಐಡಿ ಪೊಲೀಸರಿಂದ ತಲೆಮರೆಸಿಕೊಂಡಿದ್ದರು.
    ಮಹಾರಾಷ್ಟç ಗಡಿಗೆ ಹೊಂದಿಕೊAಡಿರುವ ಆಳಂದ ತಾಲೂಕಿನ ಹಿರೊಳ್ಳಿ ಕ್ರಾಸ್ ಬಳಿ ಇದ್ದಾರೆ ಎಂಬ ಮಾಹಿತಿ ಸಿಗುತ್ತಲೇ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪತ್ತೇದಾರಿ ಪಿಎಸ್‌ಐ ಮಂಜುನಾಥ ಹಾಗೂ ಮಹಿಳಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶುಕ್ರವಾರ ರಾತ್ರಿ ವಶಕ್ಕೆ ತೆಗೆದುಕೊಂಡರು.
    ಮೂರೂವರೆ ತಿಂಗಳಿAದ ಸಿಐಡಿಯವರು ಎಷ್ಟೇ ಹುಡುಕಾಟ ನಡೆಸಿದ್ದರೂ ರಚನಾ ಸುಳಿವು ಸಿಗಲಿಲ್ಲ. ಮೇಲಿಂದ ಮೇಲೆ ತನ್ನ ವಾಸ್ತವ್ಯದ ಸ್ಥಳ ಬದಲಾಯಿಸುತ್ತಿದ್ದರಿಂದ ಬಂಧಿಸುವುದು ಕಷ್ಟಕರವಾಗಿತ್ತು. ಕೊನೆಗೆ ಕಲಬುರಗಿ ಸಿಐಡಿ ಟೀಮ್ ಮೇಲಧಿಕಾರಿಗಳ ಮಾರ್ಗದರ್ಶನದಂತೆ ನಿಗಾ ಇರಿಸಿ ಸೆರೆ ಹಿಡಿಯುವಲ್ಲಿ ಸಫಲವಾಗಿದೆ.
    ಶನಿವಾರ ಬಂಧಿಸಿದ ರಚನಾ ಅವರನ್ನು ವಿಚಾರಣೆಗೆ ಒಳಪಡಿಸಿ ಆರೋಗ್ಯ ತಪಾಸಣೆ ಮಾಡಿಸಿದ ಬಳಿಕ ನಗರದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದಸ್ತಗೀರ್‌ಸಾಬ್ ಮು¯್ಲÁ ಎದುರು ಹಾಜರುಪಡಿಸಿದರು. ಬೆಂಗಳೂರಿನಲ್ಲಿ ಕೇಸ್ ದಾಖಲಾಗಿದ್ದರಿಂದ ಟ್ರಾನ್ಸಿಟ್ ವಾರೆಂಟ್ ಪಡೆದುಕೊಂಡರು. ಬಂಧಿತಳನ್ನು ಸಿಐಡಿ ಅಧಿಕಾರಿಗಳು ಮತ್ತು ಮಹಿಳಾ ಸಿಬ್ಬಂದಿ ಸೇರಿ ಬೆಂಗಳೂರಿಗೆ ಕರೆದೊಯ್ಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts