ನ್ಯೂಸ್

ಜೆಡಿಎಸ್‌ ಅಭ್ಯರ್ಥಿಗಳ 4ನೇ ಹಾಗೂ ತಾರಾ ಪ್ರಚಾರಕರ ಪಟ್ಟಿ ಬಿಡುಗಡೆ

ಬೆಂಗಳೂರು: ಕಾಂಗ್ರೆಸ್​ ಅಂತಿಮ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಜೆಡಿಎಸ್‌ ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ, ತನ್ನ ತಾರಾ ಪ್ರಚಾರಕರನ್ನು ಬಹಿರಂಗಪಡಿಸಿದೆ.

13 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಎಸ್​ ಬಿಡುಗಡೆ ಮಾಡಿದೆ. ಶಿಗ್ಗಾವಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಶಿಧರ್​ ಚನ್ನಬಸಪ್ಪ ಯಲಿಗಾರ್​ ಅವರು ಕಣಕ್ಕಿಳಿದಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಈ ಕೆಳಕಂಡಂತಿದೆ

1. ಗೋಕಾಕ್ : ಚನ್ನಬಸಪ್ಪ ಬಾಳಪ್ಪ ಗಿದ್ದಣ್ಣನವರ

2. ಕಿತ್ತೂರು: ಅಶ್ವಿನಿ ಸಿಂಗಯ್ಯ ಪೂಜೇರಾ.

3. ಯಾದಗಿರಿ- ಎ.ಬಿ.ಮಾಲಕ ರೆಡ್ಡಿ.

4. ಬಾಲ್ಕಿ: ರೌಫ್ ಪಟೇಲ್

5. ಶಿಗ್ಗಾಂವ್: ಶಶಿಧರ್ ಚನ್ನಬಸಪ್ಪ ಯಲಿಗಾರ

6. ಮೊಳಕಾಲ್ಮೂರು: ಮಹಾದೇವಪ್ಪ

7. ಪುಲಿಕೇಶಿನಗರ: ಶ್ರೀಮತಿ ಅನುರಾಧ

8. ಶಿವಾಜಿನಗರ: ಅಬ್ದುಲ್ಲಾ ಜಫರ್ ಅಲಿ

9. ಶಾಂತಿನಗರ: ಮಂಜುನಾಥ್ ಗೌಡ

10. ಬೆಳ್ತಂಗಡಿ : ಅಶ್ರಫ್ ಅಲಿ ಕುಂದ್

11. ಮಂಗಳೂರು ನಗರ ಉತ್ತರ: ಮೋಹಿನುದ್ದೀನ್ ಬಾವ

12. ಮಂಗಳೂರು: ಅಲ್ತಾಫ್ ಕುಂಪಾಲ

13. ಬಂಟ್ವಾಳ: ಪ್ರಕಾಶ್ ರಾಫಾಯಲ್ ಗೊಮ್ಸ್

13 ಅಭ್ಯರ್ಥಿಗಳ ಪಟ್ಟಿಯ ಜತೆಗೆ 26 ಮಂದಿಯ ಸ್ಟಾರ್ ಕ್ಯಾಂಪೇನರ್ ಪಟ್ಟಿಯನ್ನೂ ಸಹ ಜೆಡಿಎಸ್​ ಬಿಡುಗಡೆ ಮಾಡಿದೆ.

ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ, ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ, ಎಚ್​.ಡಿ. ರೇವಣ್ಣ, ನಿಖಿಲ್​ ಕುಮಾರಸ್ವಾಮಿ, ಪ್ರಜ್ವಲ್​ ರೇವಣ್ಣ, ಅನಿತಾ ಕುಮಾರಸ್ವಾಮಿ, ಕುಪೇಂದ್ರ ರೆಡ್ಡಿ, ಟಿ.ಎ. ಶರವಣ, ತಿಪ್ಪೇಸ್ವಾಮಿ, ಭೋಜೇಗೌಡ, ಬಿ.ಎಂ. ಫಾರೂಖ್​, ಜಫ್ರುಲ್ಲಾ ಖಾನ್​, ಭವಾನಿ ರೇವಣ್ಣ, ಅಪ್ಪಾಜಿಗೌಡ, ನಜ್ಮಾ ನಜೀರ್​ ಸೇರಿದಂತೆ ಹಲವರು ಪಟ್ಟಿಯಲ್ಲಿದ್ದಾರೆ.