More

    ಸುಮಲತಾ ಬಳಿಕ ಮಂಡ್ಯದಲ್ಲಿ ಜೆಡಿಎಸ್‌ಗೆ ಮತ್ತೊಂದು ಸ್ವಾಭಿಮಾನದ ಅಸ್ತ್ರ!

    ಮಂಡ್ಯ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸಂಸದೆ ಸುಮಲತಾ ಅಂಬರೀಷ್​ ಅವರಿಂದ ಜೆಡಿಎಸ್​ ಪಕ್ಷಕ್ಕೆ ಎದುರಾಗಿದ್ದ ಸ್ವಾಭಿಮಾನದ ಅಸ್ತ್ರ, ಇದೀಗ ಮತ್ತೊಮ್ಮೆ ಎದುರಾಗಿದೆ. ಆದರೆ, ಈ ಬಾರಿ ತಮ್ಮ ಪಕ್ಷದವರಿಂದಲೇ ಸ್ವಾಭಿಮಾನದ ಅಸ್ತ್ರ ಪ್ರಯೋಗವಾಗುತ್ತಿದೆ.

    ಜೆಡಿಎಸ್ ವಿರುದ್ಧ ಜೆಡಿಎಸ್‌ ಟಿಕೆಟ್ ವಂಚಿತರು ಬಂಡಾಯ ಎದಿದ್ದಾರೆ. ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲಿ ಮೂವರು ಪಕ್ಷೇತರವಾಗಿ ಸ್ವಾಭಿಮಾನದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಪಿಇಟಿ ಅಧ್ಯಕ್ಷ ವಿಜಯಾನಂದ, ಶ್ರೀನಿವಾಸ್ ಅಳಿಯ ಯೋಗೇಶ್ ಹಾಗೂ ಮಹಲಿಂಗೇಗೌಡ ನಾಮಪತ್ರ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಕಣ್ಣಿಗೊಂದು ಸವಾಲ್​: ಫೋಟೋದಲ್ಲಿರುವ ಶ್ವಾನವನ್ನು ಪತ್ತೆಹಚ್ಚುವಿರಾ? ಜೀನಿಯಸ್​ಗಳಿಂದ ಮಾತ್ರ ಇದು ಸಾಧ್ಯ

    ಮನವೊಲಿಕೆ ಮಾಡಿದ್ರು ಒಪ್ಪುತ್ತಿಲ್ಲ
    ಈ ಮೂವರಲ್ಲಿ ಒಬ್ಬರನ್ನು ಚುನಾವಣೆಯ ಕಣದಲ್ಲಿ ಉಳಿಸುತ್ತೇವೆ. ಇಂದು ಮಾತುಕತೆ ನಡೆಸಿ ಇಬ್ಬರು ನಾಮಪತ್ರ ವಾಪಸ್ಸು ತೆಗೆದುಕೊಳ್ಳುತ್ತಾರೆ. ಒಬ್ಬರನ್ನು ಕಣದಲ್ಲಿ ಉಳಿಸಿ ಸ್ವಾಭಿಮಾನದ ಹೆಸರಲ್ಲಿ ಚುನಾವಣೆ ಎದುರಿಸುತ್ತೇವೆ. ನಮ್ಮಲ್ಲಿ ಒಬ್ಬರಿಗೆ ಟಿಕೆಟ್ ಕೊಡಿ ಅಂತ ನಾನು ಕೇಳಿದ್ದೆ. ಆದರೆ ಈಗ ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ. ನಾವು ಕುಮಾರಸ್ವಾಮಿ ಮನವೊಲಿಕೆ ಮಾಡಿದ್ರು ಒಪ್ಪಲ್ಲ. ನಾವು ಪಕ್ಷೇತರವಾಗಿ ಸ್ವಾಭಿಮಾನದಿಂದ ಚುನಾವಣೆ ಎದುರಿಸಿ ಗೆಲ್ಲುತ್ತೇವೆ ಎನ್ನುವ ಮೂಲಕ ಶಾಸಕ ಎಂ.ಶ್ರೀನಿವಾಸ್‌ ಸ್ವಾಭಿಮಾನದ ಅಸ್ತ್ರ ಪ್ರಯೋಗಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಶಿಕ್ಷೆ ತಡೆಯುವಂತೆ ಕೋರಿ ರಾಹುಲ್​ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

    ಚೆಕ್​ಪೋಸ್ಟ್​ನಲ್ಲಿ ಕಾರು ತಡೆದಿದ್ದಕ್ಕೆ ಉದ್ಯಮಿ ಬಿ.ಟಿ. ನಾಗರಾಜ್​ ರೆಡ್ಡಿಯಿಂದ ಪೊಲೀಸರ ಮೇಲೆ ಹಲ್ಲೆ

    ಕಣ್ಣಿಗೊಂದು ಸವಾಲ್​: ಫೋಟೋದಲ್ಲಿರುವ ಶ್ವಾನವನ್ನು ಪತ್ತೆಹಚ್ಚುವಿರಾ? ಜೀನಿಯಸ್​ಗಳಿಂದ ಮಾತ್ರ ಇದು ಸಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts