ನ್ಯೂಸ್

VIDEO| ಆನೆಯ ಮೇಲೆ ಬೆತ್ತಲಾದ ಮಾಡೆಲ್​: ಆಕೆ ಕೊಟ್ಟ ಕಾರಣ ಕೇಳಿದ್ರೆ ಅಚ್ಚರಿ ಖಂಡಿತ!

ಮಾಸ್ಕೋ: ರಷ್ಯಾದ ಸಾಮಾಜಿಕ ಜಾಲತಾಣ ಸೆಲೆಬ್ರಿಟಿ ಮಾಡೆಲ್​ ಅಲೆಸ್ಯಾ ಕಫೆಲ್ನಿಕೋವಾ (22), ಅಳಿವಿನಂಚಿನಲ್ಲಿರುವ ಸುಮಾತ್ರನ್​ ಆನೆಯ ಮೇಲೆ ಪೂರ್ತಿ ಬೆತ್ತಲಾಗಿ ಕ್ಯಾಮೆರಾಗೆ ಪೋಸ್​ ನೀಡಿರುವ ಫೋಟೋ ಎಲ್ಲೆಡೆ ವೈರಲ್​ ಆಗಿದ್ದು, ಭಾರೀ ಟೀಕೆಗೆ ಗುರಿಯಾಗಿದೆ.

ಅಲೆಸ್ಯಾ, ವಿಶ್ವದ ನಂ. 1 ಮಾಜಿ ಟೆನ್ನಿಸ್​ ಆಟಗಾರ ಯೆವ್ಗೆನಿ ಕಫೆಲ್ನಿಕೋವಾರ ಮಗಳು. ಫೋಟೋ ಮಾತ್ರವಲ್ಲದೆ, ಆನೆ ಮೇಲೆ ಬೆತ್ತಲೆ ಮಲಗಿರುವ ಸಣ್ಣ ವಿಡಿಯೋ ತುಣುಕನ್ನು ಸಹ ಅಲೆಸ್ಯಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫೆ. 13ರಂದು ಶೇರ್​ ಮಾಡಿಕೊಂಡಿದ್ದಾರೆ. ಅದಕ್ಕೆ ನ್ಯಾಚುರಲ್​ ವೈಬ್ಸ್​ ಎಂದು ಅಡಿಬರಹ ನೀಡಿದ್ದಾರೆ. ಸಾಕಷ್ಟು ಟೀಕೆಗಳು ವ್ಯಕ್ತವಾದ ಬಳಿಕ ಅಲೆಸ್ಯಾ ಇನ್​ಸ್ಟಾಗ್ರಾಂನಿಂದ ಆ ವಿಡಿಯೋ ಡಿಲೀಟ್​ ಮಾಡಿದ್ದಾರೆ.

ನೀವು ಆನೆಯನ್ನು ಬಳಸಿಕೊಂಡಿರುವುದು ತರವಲ್ಲ. ಆನೆಯನ್ನು ಬಿಟ್ಟು ಬದಲಾಗಿ ಚೇರ್​ ಉಪಯೋಗಿಸಿ, ಇದು ನಿಜಕ್ಕೂ ಕ್ರೂರತ್ವ. ಅಷ್ಟಕ್ಕೂ ಏಕೆ ಬೆತ್ತಲೆಯಾಗಬೇಕಿತ್ತು? ನಿನ್ನನ್ನು ಬೆತ್ತಲೆಯಾಗಿ ನೋಡಲು ಎಲ್ಲರಿಗೂ ಆಸಕ್ತಿ ಇದೆ ಎಂದು ನೀನೇನಾದರೂ ಭಾವಿಸಿದೆಯಾ? ಎಂದು ನೆಟ್ಟಿಗರೊಬ್ಬರು ಮಾಡೆಲ್​ ಅನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

ಆನೆಯ ಬೆತ್ತಲೆಯಾಗಿ ಮಲಗಲು ನಿಮಗೆ ನಾಚಿಕೆ ಆಗಲಿಲ್ಲವೆ? ಅದ ಕೂಡ ಒಂದು ಜೀವ ಇರುವ ಪ್ರಾಣಿ. ಹಣದ ಹುಚ್ಚು ಹೆಚ್ಚಾದರೆ ಹೀಗೆ ಆಗುವುದು ಎಂದೆಲ್ಲಾ ನೆಟ್ಟಿಗರು ಕಮೆಂಟಿಸಿದ್ದಾರೆ. ಇಷ್ಟೇ ಅಲ್ಲದೆ, ಅನೇಕ ಪ್ರಾಣಿ ದಯಾ ಸಂಘದವರು ಮಾಡೆಲ್​ ನಡೆಯನ್ನು ಖಂಡಿಸಿದ್ದಾರೆ.

ಆದರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಲೆಸ್ಯಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆನೆಯ ಕಡೆಗಿನ ಸೌಂದರ್ಯ ಭಾವನೆಯಿಂದ ಫೋಟೋಶೂಟ್​ ಮಾಡಿಸಿಕೊಂಡಿದ್ದೇನೆಂದು ಹೇಳಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸ್ಥಳೀಯ ಸಮುದಾಯಕ್ಕೆ ಸಹಾಯ ಮಾಡಲು ದೇಣಿಗೆ ಸಹ ನೀಡಿದ್ದೇನೆಂದು ಟೀಕಾಕಾರರಿಗೆ ಅಲೆಸ್ಯಾ ತಿರುಗೇಟು ನೀಡಿದ್ದಾರೆ. (ಏಜೆನ್ಸೀಸ್​) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ